Janataa24 NEWS DESK

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಇವರ ಅಧ್ಯಕ್ಷತೆಯಲ್ಲಿ,
ಸುಮಾರು ಒಂದುವರೆ ವರ್ಷದಿಂದ ನಿಷ್ಕ್ರಿಯೆಗೊಂಡಿದ್ದ ತಾಲೂಕು ದ ಸಂ ಸ, ಸಮಿತಿ ಪುನರ್ ರಚನೆ ಸಭೆ ನಡೆಯಿತು,
ಇದೇ ಸಂದರ್ಭದಲ್ಲಿ ತಾಲೂಕು ಸಂಚಾಲಕರ ಸ್ಥಾನಕ್ಕೆ ನಾಲ್ಕು ದಲಿತ ಮುಖಂಡರುಗಳು ಸಂಚಾಲಕರ ಆಕಾಂಕ್ಷಿ ಆಗಿದ್ದರು, ಇದೇ ವೇಳೆ ಗೊಂದಲ ಸೃಷ್ಟಿ ಆಗಬಾರದೆಂದು ಜಿಲ್ಲಾ ಸಂಚಾಲಕರು ಈಗಾಗಲೇ ಜಿಲ್ಲಾ ಸಂಘಟನಾ ಸಂಚಾಲಕರು ಆಗಿರುವ ಮೂರ್ತಿ ಸಿ ಎಸ್ ಅವರನ್ನು ಮರು ಆಯ್ಕೆಗೆ ಪ್ರಸ್ತಾಪ ಮಾಡುತ್ತಿದ್ದಂತೆ, ಅಲ್ಲೇ ನೆರದಿದ್ದ ಕೆಲವು ದಲಿತ ಮುಖಂಡರುಗಳು ವಿರೋಧ ವ್ಯಕ್ತಪಡಿಸಿದರು.

ಜೊತೆಗೆ ಕೆಲ ಸಮಯ ಗೊಂದಲಕ್ಕು ಈ ಸಭೆ ಸಾಕ್ಷಿಯಾಯಿತು, ಇದರಿಂದಾಗಿ ಜಿಲ್ಲಾ ಸಂಚಾಲಕರು ಈ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಣೆ ಮಾಡಿ, ಕೆಲವೇ ಕ್ಷಣದಲ್ಲಿ ಇನ್ನೂ ಹೆಚ್ಚಿನ ಗೊಂದಲ ಸೃಷ್ಟಿ ಆಗಬಾರದು ಎಂದು ಕೂಡಲೆ ಈಗಾಗಲೇ ತಾಲೂಕು ಸಂಚಾಲಕರ ಆಕಾಂಕ್ಷಿಯಾಗಿದ್ದ ನಾಲ್ಕು ದಲಿತ ಬಂಧುಗಳಲ್ಲಿ ಒಬ್ಬರಾದ ಕೃಷ್ಣ ಮಾದಿಗ ಅವರನ್ನು ತಾಲೂಕು ಸಂಚಾಲಕರಾಗಿ ಘೋಷಣೆ ಮಾಡಿದರು.

ಇದರ ಜೊತೆಗೆ ತುರುವೇಕೆರೆ ನಗರ ಸಂಚಾಲಕರನ್ನಾಗಿ ಬಡಾವಣೆ ಶಿವರಾಜು, ಮಹಿಳಾ ತಾಲೂಕು ಸಂಚಾಲಕಿಯಾಗಿ ಸೋಮಲಾಪುರ ನಂದಿನಿ ರಮೇಶ್, ಮತ್ತು ಮಹಿಳಾ ಸಂಘಟನೆ ಸಂಚಾಲಕರಾಗಿ ಹರಿದಾಸನಹಳ್ಳಿ ಸಾವಿತ್ರಮ್ಮ ಅವರನ್ನು ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಅವರು ಆಯ್ಕೆ ಮಾಡಿ ಘೋಷಣೆ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಸಂಚಾಲಕರ ಪುನರಾಯ್ಕೆಯ ವಿಚಾರವಾಗಿ ,
ಈಗಾಗಲೇ ಸತತ 20 ವರ್ಷದಿಂದ ತಾಲೂಕು ಸಂಘಟನಾ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದಂಡಿನಶಿವರ ಕುಮಾರ್ ಅವರು ಮಾತನಾಡಿ ಈ ದ, ಸಂ.ಸ, ತಾಲೂಕು ಸಂಚಾಲಕರ ಪುನರಾಯ್ಕೆಯಲ್ಲಿ ,
ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯನವರು ಈಗಾಗಲೇ ತುರುವೇಕೆರೆ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ನಾವುಗಳಾದ ಸಂಚಾಲಕರುಗಳ ಗಮನಕ್ಕೆ ನೂತನ ಪುನರಾಯ್ಕೆಯ ವಿಷಯ ತಿಳಿಸದೆ ಕೇವಲ ಜಿಲ್ಲಾ ಸಂಚಾಲಕರ ಇಷ್ಟದಂತೆ ಗೌಪ್ಯವಾಗಿ ಪದಾಧಿಕಾರಿಗಳ ಆಯ್ಕೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ದಂಡಿನ ಶಿವರ ಕುಮಾರ್ ನೇರ ಆರೋಪ ಮಾಡಿದ್ದಾರೆ.

ಮುಂದುವರೆದು ಮಾತನಾಡಿದ ದಂಡಿನ ಶಿವರಕುಮಾರ್ ಅವರು ಈಗಾಗಲೇ ನಮಗೆ ರಾಜ್ಯ ಸಂಚಾಲಕರಾದ ಗುರುಮೂರ್ತಿ ಎಂ ಅವರು ಸುಮಾರು ಒಂದುವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತುರುವೇಕೆರೆ ತಾಲೂಕಿನ ದ ಸಂ ಸ, ತಾಲೂಕು ಸಂಚಾಲಕರಾಗಿ ಕಾರ್ಯನಿರ್ವಹಿಸಿ ಎಂದು ನನಗೆ ಆದೇಶ ಪತ್ರವನ್ನು ಕೊಟ್ಟಿದ್ದು,
ಇದರ ನಡುವೆ ಜಿಲ್ಲಾ ಸಂಚಾಲಕರಾಗಿ ಪುನರಾಯ್ಕೆಗೊಂಡ ಕುಂದೂರು ತಿಮ್ಮಯ್ಯನವರು ಅವರ ಇಷ್ಟ ಬಂದಂತೆ ಅವರಿಗೆ ಬೇಕಾದಂತಹ ವ್ಯಕ್ತಿಗಳನ್ನು ಕರೆದು ಗೌಪ್ಯವಾಗಿ ತಾಲೂಕು ಸಂಚಾಲಕರನ್ನಾಗಿ ಘೋಷಣೆ ಮಾಡಿ,
ನನ್ನನ್ನು ಮುಗಿಸಬೇಕೆಂದು ಬೇರೊಬ್ಬರನ್ನು ಆಯ್ಕೆ ಮಾಡಿದ್ದಾರೆ, ಎಂದು ದೂರಿದರು, ಈಗಾಗಲೇ ಈ ಹಿಂದೆ ಇದ್ದಂತಹ ತಾಲೂಕು ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದ ಜಯಣ್ಣ, ಮತ್ತು ದಿವಂಗತ ಸ್ವಾಮಿ ಕೆ ಆರ್ ಅವರ ಜೊತೆ,
ತಾಲೂಕಿನ ದುಂಡ ಗ್ರಾಮದಲ್ಲಿ ನಡೆದ ದಲಿತರ ವಿರುದ್ಧ ನಡೆದ ಘೋರ ಘಟನೆಯ ವಿರುದ್ಧ ಹೋರಾಟದಲ್ಲಿ ನಾನು ಕೂಡ ಮುಂಚೂಣಿಯಲ್ಲಿದ್ದು, ನನ್ನ ಬೆಳವಣಿಗೆ ಸಹಿಸದೆ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ, ಇದಲ್ಲದೆ ಅವರ ಇಚ್ಛೆಯಂತೆ ಸ್ವಕುಟುಂಬದ ಅಧಿಕಾರದ ಆಸೆಗೆ ನಮ್ಮನ್ನೆಲ್ಲ ವಿರೋಧಿಸುತ್ತಿದ್ದಾರೆ, ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಅವರು ಮೌಲ್ಯ ಅನ್ನೋದಾದ್ರು ಇದ್ರೆ ನನ್ನನ್ನ ತಾಲೂಕು ಸಂಚಾಲಕರಾಗಿ ಮಾಡಬೇಕು, ಇಲ್ಲವಾದರೆ ಮುಂದಿನ ಬೆಳವಣಿಗೆಗೆ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯನವರೇ ನೇರ ಹೊಣೆ ಎಂದರು.

ವರದಿ
ತುರುವೇಕೆರೆ: ಮಂಜುನಾಥ್