Janataa24 NEWS DESK
ಗುಬ್ಬಿ: ತುರುವೇಕೆರೆ ತಾಲೂಕಿನ ಕುರುಬರಹಳ್ಳಿ ಗ್ರಾಮದ ವಾಸಿಯಾದ ನಾಗರಾಜು ಕೆ ರವರು ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ.

ಇವರು ತಾಲೂಕಿನಾದ್ಯಂತ ಮನೆ ಮಾತಾಗಿದ್ದರು ಸಮಾಜ ಸೇವೆ ಮತ್ತು ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯಾಧ್ಯಕ್ಷರಾಗಿದ್ದರು ಕೆಲವು ದಿನಗಳ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ತೆರಳಿದ್ದರು ಹೆಚ್ಚು ಅನಾರೋಗ್ಯದ ಕಾರಣ ದಿಂದಾಗಿ ಬಂಧು-ಬಳಗ ಮತ್ತು ಅಪಾರ ಸ್ನೇಹ ಸಂಪತ್ತನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ಇವರ ನಿದನಕ್ಕೆ ರಾಜ್ಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಎಂ ರಾಮಚಂದ್ರಪ್ಪ, ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳಿಧರ್ ಹಾಲಪ್ಪ,
ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ತುರುವೇಕೆರೆ ಬ್ಲಾಕ್ ಅಧ್ಯಕ್ಷರಾದ ಪ್ರಸನ್ನ ಕುಮಾರ್,
ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರನಂದ್, ಗುಬ್ಬಿ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಕೆ ಆರ್ ವೆಂಕಟೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕಡಬ ಶಿವಕುಮಾರ್, ಕೃಷ್ಣೇಗೌಡ, ಶಿವಪ್ರಕಾಶ್, ಮಯೇಶ್ , ಮಹಾಲಿಂಗಪ್ಪ, ನೋಂದಕುಟುಂಬಕ್ಕೆ ಸಾತ್ವಾನ ಹೇಳಿ ಕಂಬನಿ ಮಿಡಿದಿದ್ದಾರೆ.
ವರದಿ
ಗುಬ್ಬಿ: ಶ್ರೀಕಾಂತ್