Janataa24 NEWS DESK
ಗಾಡ ನಿದ್ರೆಯಲ್ಲಿ ಬೆಚ್ಚಿಬಿದ್ದ ಜನ

ಬೆಳ್ಳಂಬೆಳಗ್ಗೆ ವಿದ್ಯುತ್ ಅವಘಡ ಹೊತ್ತಿ ಉರಿದ ಸುಮಾರು ಅರವತ್ತು ಮನೆಗಳ ಟಿವಿ. ಫ್ರಿಡ್ಜ್ಗಳು ಇತರೆ ಎಲೆಕ್ಟ್ರಾನಿಕ್ ಸಾಮಗ್ರಿಗಳು ಭಾರಿ ನಷ್ಟ.

ಪಾವಗಡ: ತಾಲೂಕಿನ ಮರಿದಾಸನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ.
ಘಟನೆಗೆ ಹೈ ಟೆನ್ಶನ್ ವೈರ್ ಮನೆಗಳ ಸಂಪರ್ಕದಲ್ಲಿ ಹೋದ ವಿದ್ಯುತ್ ಲೈನ್ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಘಟನೆಗೆ ಕಾರಣ ಎಂಬುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಮರಿದಾಸನಹಳ್ಳಿ ಗ್ರಾಮದ ಹೊಸಳ್ಳಿ ರಸ್ತೆ ಬಳಿ ಇರುವಂತಹ ಸುಮಾರು 60 ಮನೆಗಳಲ್ಲಿ ಸೋಮವಾರ ಮುಂಜಾನೆ ದೊಡ್ಡ ಮಟ್ಟದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಮನೆಗಳಲ್ಲಿ ಇದ್ದಂತಹ ಟಿವಿ ಫ್ರಿಡ್ಜ್ ಗಳು ಹೊತ್ತಿ ಉರಿದಿವೆ.
ತಕ್ಷಣವೇ ಮನೆಗಳಿಂದ ಇದ್ದಂತಹ ಜನರು ಹೊರ ಓಡಿ ಬಂದಿದ್ದಾರೆ.

ವಿದ್ಯುತ್ ಅವಘಡ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ ಅವಘಡ ದಿಂದ ಸುಮಾರು 60 ಮನೆಗಳಲ್ಲಿ ಟಿವಿ ಫ್ರಿಡ್ಜ್ ಇತರೆ ಉಪಕರಣಗಳು ಸುಟ್ಟು ಕರಕಲಾಗಿವೆ ಎಂಬುದಾಗಿ ಸ್ಥಳೀಯ ತಿಳಿಸಿದ್ದಾರೆ.

ತಕ್ಷಣ ಸ್ಥಳೀಯ ಬೆಸ್ಕಾಂ ಅಧಿಕಾರಿಗಳ ದೂರವಾಣಿಗೆ ಕರೆ ಮಾಡಿದ ತಕ್ಷಣ ವಿದ್ಯುತ್ ಪೂರೈಕೆ ಸ್ಥಗಿತ ಗೋಳಿಸಿದ್ದಾರೆ.
ವರದಿ
ಪಾವಗಡ: ಇಮ್ರಾನ್ ಉಲ್ಲಾ.