Document

ಮೂರ್ತಿ ಸಿಎಸ್ ಅವರ ಕನಸಿನ ಕೂಸು “ಭೀಮಾ ಜ್ಯೋತಿ” ರಥಕ್ಕೆ ಇಂದು ಅದ್ದೂರಿ ಚಾಲನೆ

Janataa24 NEWS DESK



ತುರುವೇಕೆರೆ: ಬರುವ ನವಂಬರ್ 26ರಂದು ತುರುವೇಕೆರೆ ಪಟ್ಟಣದಲ್ಲಿ ನಡೆಯುವ ಬಿಮೋತ್ಸವ ಸೋದರತ್ವ ಸಮಾವೇಶದ ಹಿನ್ನೆಲೆಯಲ್ಲಿ,

ಇಂದು ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಭೀಮ ಜ್ಯೋತಿ ರಥದಲ್ಲಿ ಇರುವ ಅಂಬೇಡ್ಕರ್ ಪುತ್ತಳಿಗೆ, ಹಲವು ಗಣ್ಯರಿಂದ ಮತ್ತು ಡಾಕ್ಟರ್ ಕುಮಾರ್, ಕೋಡಿಹಳ್ಳಿ ಮಠದ ಶ್ರೀಗಳಿಂದ, ಪ್ರಗತಿಪರ ಸಂಘಟನೆಗಳಿಂದ ಪುಷ್ಪ ನಮನ ಸಲ್ಲಿಸಿ ಭೀಮಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

IMG 20231026 WA0037



ಇದೆ ವೇಳೆ ಮಾತನಾಡಿದ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿಯ ಸಂಸ್ಥಾಪಕರಾದ ಮೂರ್ತಿ ಸಿಎಸ್ ಅವರು ಮಾತನಾಡಿ,

ನನ್ನ ತಾತನ ಆಸೆಯಂತೆ ಕೃಷಿ ಪದವೀದಾರನಾಗಿ ,ಕೃಷಿ ಪದವಿ ಪಡೆದು, ಎಂ ಬಿ ಎ ಮಾಡಿ ಮುಗಿಸಿ, ಹೊರಹೊಮ್ಮಿದ್ದೇನೆ.

IMG 20231026 WA0035



ನಾನು ಕೂಡ ಇದೇ ತಾಲೂಕಿನವನಾಗಿದ್ದು ,ಎಲ್ಲೋ ಒಂದು ಕಡೆ ನನ್ನ ಸಮುದಾಯವನ್ನು ಒಗ್ಗೂಡಿಸಿ ಸಮಾನತೆಯ ಬೆಳಕನ್ನು ಚೆಲ್ಲಿ ತಾಲೂಕಿನ ಎಲ್ಲಾ ಬಾಂಧವರಿಗೆ ಶಿಕ್ಷಣದ ಬಗ್ಗೆ ಹರಿವು ಮೂಡಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಇದು ನನ್ನ ಮಹಾದಾಸೆಯೂ ಕೂಡ ಆಗಿದೆ,

ಹಾಗಾಗಿ ಇಂದು ಎಲ್ಲಾ ಪ್ರಗತಿಪರ ಸಂಘಟನೆಗಳು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ನವೆಂಬರ್ ತಿಂಗಳಿನಲ್ಲಿ ಬೃಹತ್ ಭೀಮೋತ್ಸವ ಸೋದರತ್ವ ಸಮಾವೇಶ ಹಮ್ಮಿಕೊಳ್ಳಲಾಗಿದ್ದು,

ತಾವೆಲ್ಲರೂ ಒಗ್ಗೂಡಿ ಈ ಕಾರ್ಯಕ್ರಮವನ್ನು ಯಶಸ್ವಿಪಡಿಸಿಕೊಡಬೇಕೆಂದು ಅಲ್ಲಿ ನಡೆದಿದ್ದ ಎಲ್ಲಾ ಸಮುದಾಯದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದರು.

IMG 20231026 WA0034



ಇದೇ ಸಂದರ್ಭದಲ್ಲಿ ಕೋಡಿಹಳ್ಳಿ ಮಠದ ಷಡಕ್ಷರಿ ಮುನಿ ಸ್ವಾಮೀಜಿ ಅವರು, ಹಾಗೂ ತಿಪಟೂರು ಕುಮಾರ್ ಆಸ್ಪತ್ರೆಯ ಮುಖ್ಯಸ್ಥ ಡಾಕ್ಟರ್ ಕುಮಾರ್, ಬಿಳಿಗೆರೆ ಕೃಷ್ಣಮೂರ್ತಿ,ಮತ್ತು ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು, ಪದಾಧಿಕಾರಿಗಳು, ಮತ್ತು ಎಲ್ಲಾ ಸಮುದಾಯದ ಬಂಧುಗಳು, ಭೀಮ ಬಂಧುಗಳು,ಉಪಸ್ಥಿತರಿದ್ದು, ಭೀಮ ಜ್ಯೋತಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

IMG 20231026 WA0036

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *