Document

ನೀರಿನ ತೊಟ್ಟಿಯಲ್ಲಿ ಪ್ರಾಣಿಗಳ ಮೃತದೇಹ ಪೊನ್ನ ಸಮುದ್ರ ಗ್ರಾಮಪಂಚಾಯತಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

Janataa24 NEWS DESK

IMG 20231027 WA0063

ಪಾವಗಡ: ತಾಲೂಕಿನ ಪೊನ್ನ ಸಮುದ್ರ ಗಾಮಪಂಚಾಯತಿಗೆ ಸೇರಿದ ಕೊಮಾರಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಗಳಿಗೆ ಮುಚ್ಚಳ ಇಲ್ಲದೆ ಪ್ರಾಣಿ ಪಕ್ಷಿಗಳು ಬಿದ್ದು ದುರ್ವಾಸನೇ ಬೀರುತ್ತಿದ್ದರೂ ಸಹ ಗಾಮಪಂಚಾತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಖ್ಯಾರೆ ಎನ್ನುತ್ತಿಲ್ಲಾ ಎಂದು ಕೊಮಾರಹಳ್ಳಿ ಗ್ರಾಮಸ್ಥರು ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

IMG 20231027 WA0062

ಈ ಬಗ್ಗೆ ಗ್ರಾಮದ ಮುಖಂಡರಾದ ಮಾರನಾಯಕ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ನಾಲ್ಕು ನೀರಿನ ಟ್ಯಾಂಕ್ ಗಳನ್ನು ನಿರ್ಮಾಣ ಮಾಡಿದ್ದು ಅವುಗಳಿಗೆ ಮುಚ್ಚಳ ಹಾಕದೇ ಇರುವುದರಿಂದ ಪಾರಿವಾಳಗಳು ಬಿದ್ದು ಸತ್ತಿರುತ್ತವೆ ಈ ವಿಷಯವನ್ನು ಗ್ರಾಮದ ವಾಟರ್ ಮೆನ್ ಗೆ ತಿಳಿಸಿದರೂ ಸತ್ತ ಪಾರಿವಾಳಗಳನ್ನು ಹೊರತೆಗೆದಿರುವುದಿಲ್ಲಾ.

IMG 20231027 WA0059



ಇದರಿಂದ ಗ್ರಾಮಸ್ಥರ, ಪಾರಿವಾಳಗಳ ಮೃತದೇಹವನ್ನು ಹೊರತೆಗೆದಿದ್ದೇವೆ, ಅದೇ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲಾ ಇದರಿಂದ ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀಡಿ ಅದೇ ಪರದಾಡಬೇಕಾಗಿದೆ. ಹೀಗಲಾದರೂ ಸಂಬಂಧಪಟ, ತಾ.ಪಂ. ಇ.ಒ. ಜಾನಕಿರಾಂ ಮತ್ತು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಗಮನಹರಿಸಬೇಕು ಎಂದು ಗ್ರಾಮಸ್ಥರಾದ ಆಗ್ರಹಿಸುತ್ತಿದ್ದಾರೆ.

IMG 20231027 WA0061



ವರದಿ: ಇಮ್ರಾನ್ ಉಲ್ಲಾ ಪಾವಗಡ.

Document

Leave a Reply

Your email address will not be published. Required fields are marked *