ವರದಿ: ಅಬಿದ್ -ಮಧುಗಿರಿ
ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಹಳೆ ತಿಮ್ಮನಹಳ್ಳಿಯ ಅಂಗನವಾಡಿ ಕೇಂದ್ರ ಹಾಗೂ ಗೊಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮೊನ್ನೆ ರಾತ್ರಿ ಕಳ್ಳತನವಾಗಿದ್ದು ಅಂಗನವಾಡಿ ಕೇಂದ್ರದಲ್ಲಿ ಬಾಗಿಲು ಮುರಿದು ಎರಡು ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವನ್ನು ಕಳ್ಳತನ ಮಾಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ ತಿಳಿಸಿದ್ದಾರೆ. ಹಾಗೂ ಶಾಲೆಯಲ್ಲಿ ಅಡುಗೆ ಕೋಣೆ ಬಾಗಿಲು ಮುರಿದು ಕಳ್ಳತನ ಮಾಡಲು ನೋಡಿದ್ದಾರೆ ಆದರೆ ಅದರಲ್ಲಿ ಯಾವುದೇ ತರಹದ ಉಪಕರಣಗಳು ಸಿಗದ ಕಾರಣ ಬಾಗಿಲು ಬೀಗ ಮಾತ್ರ ಮುರಿದು ಹೋಗಿದ್ದಾರೆ ಎಂದು ಅಲ್ಲಿನ ಮುಖ್ಯ ಶಿಕ್ಷಕ ತಿಳಿಸಿದ್ದಾರೆ. ಸ್ಥಳಕ್ಕೆ ಕೊಡಿಗೇನಹಳ್ಳಿ ಆರಕ್ಷಕ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದರು. ಇತ್ತೀಚೆಗೆ ತಾಲೂಕಿನಾದ್ಯಂತ ಅಲ್ಲಲ್ಲಿ ಕಳ್ಳತನದ ವರದಿಗಳು ವರದಿಯಾಗುತ್ತಲೇಯಿದ್ದು, ಈ ಹಿಂದಿನ ವಾರ ಕೂಡ ಪುರವರದ ಮುದುಡಮ್ಮ ದೇವಸ್ಥಾನದಲ್ಲಿ ಕೂಡ ಕಳ್ಳತನವಾಗಿದ್ದು ಆರಕ್ಷಕ ಠಾಣೆ ಸಿಬ್ಬಂದಿಗಳು ಈ ಕಳ್ಳತನಗಳ ಜಾಡು ಹಿಡಿದು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.