ವರದಿ: ಮಂಜುನಾಥ್ ಕೆ.ಎ -ತಿಪಟೂರು
ತಿಪಟೂರು: ತಾಲೂಕು ಮತ್ತು 24 ಗ್ರಾಮ ಪಂಚಾಯಿತಿಯಿಂದ ಸರ್ಕಾರಕ್ಕೆ ಆಕ್ಷೇಪಣಾ ಮೊತ್ತ 19 ಕೋಟಿ 44 ಲಕ್ಷ 9 ಸಾವಿರ 664 ರೂಪಾಯಿ ಇದರಲ್ಲಿ ಒಂದು ಕೋಟಿ 24 ಲಕ್ಷ 10 ಸಾವಿರದ 257 ರೂಪಾಯಿ ಹಣವನ್ನು ತೆರಿಗೆ ವಂಚನೆ ಮಾಡಿದ್ದಾರೆ .ಇಷ್ಟೆಲ್ಲಾ ಆರೋಪಕ್ಕೆ .ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳೇ ಹೊಣೆ .ಎಂದು ವಿಡಿಯೋಗಳ ರಕ್ಷಣೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರುದ್ರಪ್ಪ ನೇರ ಆರೋಪ ಮಾಡಿದ್ದಾರೆ. ತಿಪಟೂರು ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ.ಸರ್ಕಾರಿ ಅಧಿಕಾರಿಗಳನ್ನು ನೇಮಿಸಿದರೆ ಇವರು ಸೇವಾ ನಿಷ್ಠೆ ಪ್ರದರ್ಶಿಸದೆ ಮೇಲಾಧಿಕಾರಿಗಳ ಜೊತೆ ಶಾಮೀಲಾಗಿದ್ದು.ಅಧಿಕಾರದ ದುರುಪಯೋಗ ಮಾಡಿ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.
ಒಟ್ಟಾರೆ 750 ಕೋಟಿ ತೆರಿಗೆಯಲ್ಲಿ ರೈತರಿಂದ 56 ಪರ್ಸೆಂಟ್ ತೆರಿಗೆ ವಸೂಲಿ ಆಗುತ್ತಿದ್ದು .ಸರಿಯಾಗಿ ರೈತರಿಗೆ 7 ಪರ್ಸೆಂಟ್ ಕೂಡ ಸಿಗುತ್ತಿಲ್ಲ ಎಂದು ಆರೋಪಿಸಿದರು .ಇನ್ನೂ 1995 ರಿಂದ 2022 ರವರೆಗೆ.ನಿಯಮದ ಪ್ರಕಾರ ಲೆಕ್ಕ ಪರಿಶೋಧನಾ ಸಮಿತಿ ರಚಿಸಿಲ್ಲ.ಜೊತೆಗೆ ಅನುದಾನ ರಿಜಿಸ್ಟರ್ ನಿರ್ವಹಿಸಿಲ್ಲ.ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ನಿರ್ವಹಣೆ ಇಲ್ಲ.ಸರ್ಕಾರದ ಅನುದಾನವನ್ನು ಸರ್ಕಾರದ ಆದೇಶದಂತೆ ಖರ್ಚು ಮಾಡಿಲ್ಲ.ಮಾಸಿಕ ಅರ್ಥ ವಾರ್ಷಿಕ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿರುವುದಿಲ್ಲ .ಯಾವುದೇ ರಶೀದಿ ಪುಸ್ತಕಗಳು ದಾಸ್ತಾನು ಕಾಣಿಸುತ್ತಿಲ್ಲ.ತೆರಿಗೆ ವಸೂಲಾತಿ ಕುಂಠಿತಗೊಂಡಿದ್ದು .ತೆರಿಗೆ ಆದಾಯ ರಿಜಿಸ್ಟರ್ ಗಳನ್ನು ನಿರ್ವಹಣೆಗೆ .ತಪಾಸಣೆಗೆ.ಹಾಜರು ಪಡಿಸಿಲ್ಲ .ಹಾಗೂ ಆಸ್ತಿ ನೋಂದಣಿ ಪುಸ್ತಕಗಳ ಮಾಹಿತಿ ನೀಡಿದ ಕೇಂದ್ರದ ಮಹತ್ತರ ಯೋಜನೆ ಕುಡಿಯುವ ನೀರು, ಬೀದಿ ದೀಪ .ಸಾಮಗ್ರಿ ಖರೀದಿ.ನಿರ್ವಹಣೆಯಲ್ಲಿ ಶೂನ್ಯಗಳು ಕಂಡುಬರುತ್ತವೆ.ಇನ್ನು ಹಲವಾರು ಶೂನ್ಯತೆಗಳು ಕಂಡುಬಂದಿದ್ದು ದಾಖಲೆಗಳೊಂದಿಗೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.