Document

ಬಾದಾಮಿಯ BJP ಅಭ್ಯರ್ಥಿ ಪರ ಕುಳಗೇರಿಯಲ್ಲಿ ಕೆ. ಎಸ್. ಈಶ್ವರಪ್ಪ ಭರ್ಜರಿ ಪ್ರಚಾರ

Janataa24 NEWS DESK

ಬಾಗಲಕೋಟೆ

IMG 20230427 WA0000



ಬಾದಾಮಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಾಂತಗೌಡ. ಟಿ. ಪಾಟೀಲ ಪರ ಪ್ರಚಾರ ಮಾಡಿದ ಮಾಜಿ ಉಪಮುಖ್ಯಮತ್ರಿ ಕೆ. ಎಸ್. ಈಶ್ವರಪ್ಪ ಕುಳಗೇರಿಯಲ್ಲಿ ಭರ್ಜರಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಭಾಗಿ

ವಿಧಾನ ಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಬಾದಾಮಿ ಮತಕ್ಷೇತ್ರದ ಅಭ್ಯರ್ಥಿ ಶಾಂತಗೌಡ. ಟಿ.ಪಾಟೀಲ ಪರ ಪ್ರಚಾರದಲ್ಲಿ ಭಾಗವಹಿಸಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ. ಎಸ್. ಈಶ್ವರಪ್ಪ,,,ಸನ್ಮಾನ್ಯ ನರೇಂದ್ರ ಮೋದಿಯವರು ಬರೀ ರಾಷ್ಟ್ರಕ್ಕೆ ಪಧಾನಿ ಅಲ್ಲಾ ಅವರು ವಿಶ್ವಗುರು ಎನಿಸಿಕೊಂಡವರು. ಅವರು ಆಡಳಿತ ನಡೆಸಿರುವ ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು..ಪ್ರಧಾನಿ ನರೇಂದ್ರ ಮೋದಿಯವರು ಬಾದಾಮಿಗೆ ಆಗಮಿಸುತ್ತಿರುವುದು ಇತಿಹಾಸ ಸೃಷ್ಟಿಸಲಿದೆ ಎಂದು ಸ್ಪಷ್ಟಪಡಿಸಿದರು.

ಬಾದಾಮಿ ಮತಕ್ಷೇತ್ರದ ಕುಳಗೇರಿ ಯಲ್ಲಿ ಭಾರತೀಯ ಜನತಾ ಪಕ್ಷ ಮತದಾರರಿಗಾಗಿ ಸಾರ್ವಜನಿಕ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು. ಬಾದಾಮಿ ಮತಕ್ಷೇತ್ರದ ಶಾಂತಗೌಡ . ಟಿ. ಪಾಟೀಲ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಕೊಡಿ ಇದು ಬರೀ ಶಾಂತಗೌಡ ಪಾಟೀಲರ ಗೆಲುವಲ್ಲ ಇದು ಬಿ. ಎಸ್. ಎಡೆಯೂರಪ್ಪ ನವರ ಗೆಲುವು ಎಂದು ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

IMG 20230427 WA0001



ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಅಭ್ಯರ್ಥಿ ಯುವ ಮುಖಂಡ ಶಾಂತಗೌಡ. ಟಿ. ಪಾಟೀಲ, ಪಕ್ಷದ ಹಿರಿಯ ಮುಖಾಂಡರದ ಸಿದ್ದಣ್ಣ ಶಿವನಗುತ್ತಿ, ಮಾಜಿ ಶಾಸಕ ಎಂ. ಕೆ ಪಟ್ಟಣಶೆಟ್ಟಿ,ಪಿ. ಹಳ್ಳೂರ,ಮಹಾಂತೇಶ. ಮಮದಾಪೂರ, ಬಸವರಾಜಗೌಡ ಪಾಟೀಲ, ಕುಮಾರಗೌಡ ಜನಾಲಿ ಸೇರಿದಂತೆ ಅನೇಕ ಮುಖಂಡರು ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ

ಬಾಗಲಕೋಟೆ: ರಾಜೇಶ್ ಎಸ್ ದೇಸಾಯಿ

Document

Leave a Reply

Your email address will not be published. Required fields are marked *