ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಉಳಿಸಿದ ಚಾಲಕ ಮಂಜುನಾಥ್ ರವರನ್ನು ಶಿರಾ ಘಟಕದ ವ್ಯವಸ್ಥಾಪಕರು ಅಭಿನಂದನೆ ಸಲ್ಲಿಸಿ ಗೌರವಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಹಾಗು ಶಾಸಕರಾದ Dr CM Rajesh Gowda ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಸೂಕ್ತ ಗೌರವ ನೀಡಬೇಕೆಂದು ಮನವಿ.

ಇಂದು ಮಧ್ಯಾಹ್ನ ಶಿರಾ ಘಟಕದ ಬಸ್ ನಲ್ಲಿ ಕಾರ್ಯ ನಿರ್ವಹಿಸುವ ಚಾಲಕರಾದ ಮಂಜುನಾಥ್ ರವರು
ಶಿರಾ – ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾಗ ಸಮಯ ಸುಮಾರು 2:15 ಗಂಟೆಗೆ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಎರಡು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿ, ವಾಹನವನ್ನು ನಿಲ್ಲಿಸಿ ಕೆರೆಗೆ ಧುಮುಕಿ ಎರಡು ಹೆಣ್ಣು ಮಕ್ಕಳನ್ನು ದಡಕ್ಕೆ ಸೇರಿಸಿ ಪ್ರಾಣ ಉಳಿಸಿರುತ್ತಾರೆ.
