ತುರುವೇಕೆರೆ: ಮಂಜುನಾಥ್

ಇಂದು ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ದಂಡಾಧಿಕಾರಿ ವೈ ಎಂ ರೇಣುಕುಮಾರ್, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ಕೃಷಿ ಸಹಾಯಕ ನಿರ್ದೇಶಕಿ ಕುಮಾರಿ ಪೂಜಾ , ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

ಇದೆ ವೇಳೆ ಮಾತನಾಡಿದ ತಾಲೂಕು ದಂಡಾಧಿಕಾರಿ ರೇಣು ಕುಮಾರ್ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ, ಪ್ರತಿ ತಿಂಗಳು ಮೂರನೇ ಶನಿವಾರ ಈ ಕಾರ್ಯಕ್ರಮ ನಡೆಸಲಾಗುವುದು ಈ ಕಾರ್ಯಕ್ರಮದ ಉದ್ದೇಶ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿ ಅವರುಗಳಿಗೆ ಮುಟ್ಟಿಸುವ ಕೆಲಸ ಈ ಕಾರ್ಯಕ್ರಮದ ಉದ್ದೇಶ ,
ಇನ್ನೂ ಈ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ ಅನಿಸುತ್ತೆ ಏಕೆಂದರೆ ಈ ಕಾರ್ಯಕ್ರಮದಲ್ಲಿ ಕೇವಲ ಒಂಬತ್ತು ಅರ್ಜಿಗಳಷ್ಟೇ ಬಂದಿದ್ದು ,ಈ ಕಾರ್ಯಕ್ರಮ ಮುಗಿದ ನಂತರ ಸ್ಥಳದಲ್ಲಿ ಕುಳಿತು ಈ ಅರ್ಜಿಗಳನ್ನು ಪರಿಶೀಲಿಸಿ ಅದಕ್ಕೆ ಸಂಬಂಧಪಟ್ಟಂತೆ ಇಲಾಖೆಗಳು ಸ್ಥಳದಲ್ಲೇ ಇದ್ದು ಕಾನೂನಾತ್ಮಕವಾಗಿ ಸರಿಪಡಿಸಲು ಪ್ರಯತ್ನ ಮಾಡುತ್ತೇನೆ ಎಂದರು,

ಇನ್ನು ಈ ತಾಲೂಕಿನಲ್ಲಿ ಸರ್ಕಾರಿ ರಸ್ತೆ ನಕಾಶೆಯಲ್ಲಿರುವ ಜಾಗವನ್ನು ಒತ್ತುವರಿ ಮಾಡಿರುವುದು ನಮ್ಮ ತಾಲೂಕಿನಲ್ಲಿ ಹೆಚ್ಚು ಕಂಡು ಬಂದಿದೆ ಇನ್ನು ಇದಕ್ಕೆ ಸಂಬಂಧಪಟ್ಟಂತೆ ಸರ್ವೆ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು ಆ ಇಲಾಖೆಯಿಂದ ಮಾಹಿತಿ ಬಂದ ಕೂಡಲೇ ಒತ್ತುವರಿ ಮಾಡಿರುವ ಸರ್ಕಾರದ ನಕಾಶೆ ರಸ್ತೆಯನ್ನು ಕಾನೂನಾತ್ಮಕವಾಗಿ ರಸ್ತೆಯನ್ನು ಬಿಡಿಸಲಾಗುವುದು, ಹಾಗೆ ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಯಾವುದೇ ಅರ್ಜಿ ಆಗಲಿ ದಲ್ಲಾಳಿಗಳ ಮೂಲಕ ತರುವುದನ್ನು ಬಿಟ್ಟು ನೇರವಾಗಿ ತಾಲೂಕು ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿಯದ ನನ್ನನ್ನು ಭೇಟಿ ಎಂದರು,
ಇನ್ನು 2023ರಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದ್ದು, ಕೂಡಲೇ ಆಯಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಿ ಯಾವುದೇ ಹೊಸ ಸೇರ್ಪಡೆ ಇದ್ದರೂ ಅದಕ್ಕೆ ಸಮಯ ಕೂಡ ಇದ್ದು ನೀವುಗಳು ಅದರ ಪ್ರಯೋಜನ ಪಡೆದುಕೊಳ್ಳಿ ಎಂದರು ,
ಇದೆ ವೇಳೆ ತೋಟಗಾರಿಕೆ ಇಲಾಖೆಯಿಂದ ಫಲಾನುಭವಿ ರೈತರಿಗೆ ತೆಂಗಿನಕಾಯಿ ಮತ್ತು ಅಡಿಕೆಯನ್ನು ಕೊಯ್ಯಲು ಮಾಡುವ ಉಪಕರಣಗಳನ್ನು ವಿತರಿಸಿದರು,

ಮುಂದುವರಿದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಮಾತನಾಡಿ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು, ಬೀದಿ ದೀಪ, ಕಸ ವಿಲೇವಾರಿ ,ಜೊತೆಗೆ ಕೇಂದ್ರ ಸರ್ಕಾರದ ಕಾರ್ಯಕ್ರಮವಾದ ಜಲಜೀವನ್ ಮಿಷನ್ ಅಂದರೆ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ನಲ್ಲಿಯನ್ನು ಕೊಡುವುದರ ಮೂಲಕ ನೀರಿನ ಸಮಸ್ಯೆಯನ್ನು ದೂರ ಮಾಡುವುದು, ಹಾಗೂ ಪ್ರತಿ ಮನೆಯಲ್ಲೂ ಕಸ ಸಂಗ್ರಹಣೆಗಾಗಿ ವಾಹನಗಳನ್ನು ಒದಗಿಸಲಾಗಿದೆ, ಜೊತೆಗೆ ಕಸದ ಸಂಗ್ರಹಕ್ಕೆ ಪ್ರತಿ ಮನೆಗೂ ಕಸದ ಬುಟ್ಟಿಗಳನ್ನು ಕೂಡ ವಿತರಿಸಲಾಗಿದೆ, ಜೊತೆಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಆದ ಪ್ರಧಾನ ಮಂತ್ರಿ ಆವಾಜ್ ಯೋಜನೆ ಇದರ ಉದ್ದೇಶ ಪ್ರತಿಯೊಂದು ಗ್ರಾಮಗಳಲ್ಲಿ ಗುಡಿಸಲುಗಳು ಇರಬಾರದು, ಗುಡಿಸಲು ಮುಕ್ತ ಭಾರತವನ್ನಾಗಿ ಮಾಡಲು ಈ ಯೋಜನೆಯನ್ನು ಮಾಡಲಾಗಿದೆ ಎಂದರು,

ಇನ್ನು ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಕುಮಾರಿ ಪೂಜಾ ಮಾತನಾಡಿ ಕೃಷಿ ಪರಿಕರಗಳನ್ನು ಸರ್ಕಾರದ ಸಹಾಯಧನದಲ್ಲಿ ವಿತರಿಸಲಾಗಿದೆ ,ಇನ್ನು ಪ್ರಸ್ತುತ ಬೇಸಿಗೆ ಹಂಗಾಮು ಪ್ರಯೋಜನ ಪಡೆಯಲು ರೈತರಿಗೆ ಬಿತ್ತನೆ ಬೀಜವನ್ನು ಕೂಡ ವಿತರಿಸಲಾಗುವುದು, ಕೃಷಿಗೆ ಸಂಬಂಧಿಸಿದಂತೆ K ಕಿಸಾನ್ ಮೂಲಕ ಆನ್ಲೈನ್ ಅರ್ಜಿಗಳನ್ನು ಹಾಕಿ ಕೃಷಿ ಪರಿಕರಗಳನ್ನು ಪಡೆದುಕೊಳ್ಳಿ, ಜೊತೆಗೆ ಬೆಳೆಯಾದ ರಾಗಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವ ರೈತರಿಗೆ ಸರ್ಕಾರದಿಂದ ಬಹುಮಾನವನ್ನು ಕೊಡಲಾಗುವುದು ಇನ್ನೂ ಬೆಳೆ ನಷ್ಟವಾದರೆ ಪ್ರಧಾನಮಂತ್ರಿ ಫಜಲ್ ಭೀಮಾ ಯೋಜನೆಯಿಂದ ಇನ್ಸೂರೆನ್ಸ್ ಕೂಡ ಲಭ್ಯವಿದೆ ಎಂದರು,

ಇನ್ನೂ ಈ ಕಾರ್ಯಕ್ರಮದ ಇನ್ನೊಂದು ಯೋಜನೆ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿದ್ದು ಶಿಶು ಅಭಿವೃದ್ಧಿ, ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ತ್ರೀಶಕ್ತಿ ಸಂಘ ವತಿಯಿಂದ ನೆರವೇರಿಸಲಾಯಿತು, ಇನ್ನು ಈ ಕಾರ್ಯಕ್ರಮದಲ್ಲಿ ತಾಲೂಕಿನ ಸರ್ಕಾರಿ ಇಲಾಖೆಗಳು, ಸುತ್ತಮುತ್ತಲಿನ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.
