Document

Gubbi: ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ಪಕ್ಷಗಳ ವಿರುದ್ಧ ಗುಡುಗಿದ ಶಾಸಕ ಎಸ್ ಆರ್ ಶ್ರೀನಿವಾಸ್

JANATAA24 NEWS DESK 

 

Gubbi: ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ಪಕ್ಷಗಳ ವಿರುದ್ಧ ಗುಡುಗಿದ ಶಾಸಕ ಎಸ್ ಆರ್ ಶ್ರೀನಿವಾಸ್

 

Gubbi- MLA SR Srinivas thunders against JDS and BJP friendly parties

ಗುಬ್ಬಿ : ಎಸ್ಐಆರ್ ಅನ್ನು ಕೇಂದ್ರ ಸರ್ಕಾರವೇ ಜಾರಿಗೊಳಿಸಿದ್ದು ಎಸ್ಐಆರ್ ವಿರುದ್ಧವೇ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿ ಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿರುವುದು ವಿಪರ್ಯಾಸ ಸಂಗತಿ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

 

ತಾಲ್ಲೂಕಿನ ಎನ್ ಮತ್ತಿಘಟ್ಟ, ಕರೆಕುರಿಹಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು

 

ಕರ್ನಾಟಕದಲ್ಲಿ 98.7 ಅಸಲಿ ಮತದಾರರಿದ್ದು ಅವರನ್ನು ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ತೆಗೆದಂತೆಕರ್ನಾಟಕ ದಲ್ಲಿ ತೆಗೆಯಲು ಆಗುತ್ತಿಲ್ಲವಲ್ಲ ವೆಂದು ಬಿಜೆಪಿ ಈ ರೀತಿಯ ನಾಟಕಗಳನ್ನು ಆಡುತ್ತಿದೆ ಎಂದ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಬಾಂಗ್ಲಾದೇಶದವರು ರಾಜ್ಯದಲ್ಲಿ 10,000 ಮತದಾರರು ಇದ್ದಾರೆ ಅಂತ ಹೇಳುತ್ತಿದ್ದಾರೆ. ಹೀಗೆ ಮಾತಾನಾಡಬಾರದು ಕುಮಾರಸ್ವಾಮಿಗೆ ನೈತಿಕತೆ ಇಲ್ಲ. ರಾಜ್ಯದಲ್ಲಿ ನಿಜವಾಗಿಯು ಯಾರಾದರೂ ವಿರೋಧಪಕ್ಷ ನಾಯಕ ಅಂತ ಇದ್ದರೆ ಅದು ಬಿಎಸ್ ಯಡಿಯೂರಪ್ಪ ಮಾತ್ರ ಅವರು ಆಡುವ ಮಾತಿಗೆ ತೂಕವಿದೆ . ಇನ್ನು ಕರ್ನಾಟಕದಲ್ಲಿ ಬುದ್ದಿವಂತ ಮತದಾರರಿದ್ದು ಬಿ ಎಲ್ ಓ ಅವರಿಗೆ ಜಾಗೃತಿ ಹಾಗೂ ವಿಶೇಷ ತರಬೇತಿ ನೀಡಲಾಗಿದೆ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಉಳಿಯಬೇಕು. ಮಾಧ್ಯಮದವರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದದವರನ್ನು ಪ್ರಶ್ನೆ ಮಾಡಬೇಕು ಇಲ್ಲದಿದ್ದರೆ ಅವರು ಹೇಗೆ ಬೇಕೋ ಹಾಗೆ ಮಾತನಾಡುತ್ತಾರೆ ಇನ್ನು ರಾಜ್ಯದಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದ್ದು ಸರ್ಕಾರವು ಮೊನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಪಿಡಿಒ ರವಿ, ಮುಖಂಡರಾದ ಪತ್ರೆ ದಿನೇಶ್, ದೇವರಾಜ್ , ರಮೇಶ್, ಹೇಮಂತ್, ಬಸವರಾಜು, ಭದ್ರಯ್ಯ, ದಿನೇಶ್, ಲಾವಣ್ಯ, ಲಕ್ಕಣ್ಣ, ಸಿದ್ದರಾಜು, ರವಿ, ಸೇರಿದಂತೆ ಇತರರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *