ತುರುವೇಕೆರೆ:ಮಂಜುನಾಥ್
ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿ, ಗೋಪಾಲಪುರ ಮಜರಿಯಲ್ಲಿ ಈ ಗ್ರಾಮದ ಜನರು ಸರ್ಕಾರಿ ಗೋಮಾಳದ ಜಾಗದಲ್ಲಿ ನಿರ್ಮಿಸಲು ಹೊರಟಿರುವ ದೇವಾಲಯದ ಕಟ್ಟಡವು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ಈ ಜಾಗದ ವಿಚಾರವಾಗಿ ಎರಡು ಗುಂಪುಗಳಾಗಿ ಮಾರ್ಪಾಟಾಗಿ ದೇವಾಲಯದ ಮುಂಭಾಗ ಒಬ್ಬರು ತಮ್ಮ ಜಾನುವಾರುಗಳನ್ನು ಕಟ್ಟಿಕೊಂಡು ಆ ಜಾಗವು ನಮಗೆ ಸೇರಿದ್ದು ಪುರಾತನ ಕಾಲದಿಂದಲೂ ಇಲ್ಲಿ ದನ ಕರುಗಳನ್ನು ಕಟ್ಟುತ್ತಾ ಇದ್ದೇವೆ ಎಂದು ಹೇಳಿರುತ್ತಾರೆ .ಇವರ ವಿರುದ್ಧವಾಗಿ ಊರಿನ ಜನರು ನಮ್ಮ ಪುರಾತನ ಕಾಲದಿಂದ ಇದೇ ಜಾಗದಲ್ಲಿ ದೇವರ ಪೂಜೆಯನ್ನು ಮಾಡಿಕೊಂಡು ಕಲ್ಲುಗಳಿಂದ ಮಾಡಿದ ಮಂಟಪವನ್ನು ನಿರ್ಮಾಣ ಮಾಡಿಕೊಂಡು ಪೂಜೆ ಮಾಡಿಕೊಂಡು ಬಂದಿರುತ್ತೇವೆ ಆದರೆ ಒಂದು ಕುಟುಂಬವು ಮಾತ್ರ ಅಡ್ಡಿಪಡಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸದರಿ ಜಾಗದ ವಿಚಾರವಾಗಿ ತುರುವೇಕೆರೆ ಪೊಲೀಸ್ ಠಾಣೆಗೆ ಎರಡು ಕಡೆಯವರು ದೂರು ನೀಡಿದ್ದು ಇತ್ಯರ್ಥ ಮಾಡಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು.
ಈ ವಿಚಾರವನ್ನು ತಿಳಿದ ತಾಲೂಕು ಕರುನಾಡು ವಿಜಯ ಸೇನೆಯ ಅಧ್ಯಕ್ಷರ ಗಮನಕ್ಕೆ ತೆಗೆದುಕೊಂಡು ಈ ಸಂಘಟನೆಯ ಸದಸ್ಯರುಗಳು ಹಾಗೂ ಪದಾಧಿಕಾರಿಗಳು ತಮ್ಮ ಊರಿನಲ್ಲಿ ತೀರ್ಮಾನ ಮಾಡುವ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ದೇವಸ್ಥಾನ ಕಟ್ಟುವ ವಿಚಾರವನ್ನು ಬಗೆಹರಿಸಿಕೊಳ್ಳೋಣ ಎಂದು ಸಮಜಾಯಿಸಿ ಎರಡು ಬಣಗಳಿಗೆ ತಿಳಿಹೇಳಿ ಅವರನ್ನು ಕಳುಹಿಸಿ ಕೊಟ್ಟಿದ್ದರು.
ಅದರಂತೆ ಮಾರನೆಯ ದಿನ ಸಂಘಟನೆಯ ಅಧ್ಯಕ್ಷರಾದ ಎಚ್ಎಸ್ ಸುರೇಶ್ ಹಾಗೂ ಪದಾಧಿಕಾರಿಗಳ ಜೊತೆಗೂಡಿ ಗ್ರಾಮಕ್ಕೆ ಭೇಟಿ ನೀಡಿ ಎರಡು ಬಣಗಳನ್ನು ಕರೆದು ತಿಳಿಹೇಳಿ.ಈ ಜಾಗವು ಸರ್ಕಾರಿ ಗೋಮಾಳದ ಜಾಗವಾಗಿದೆ ಇದರ ಪರಿಶೀಲನೆಯನ್ನು ಕಂದಾಯ ಇಲಾಖೆಯವರು ಭೇಟಿ ನೀಡಿ ನಂತರ ನಿರ್ಧಾರ ತೆಗೆದುಕೊಳ್ಳೋಣ ಮತ್ತು ಗ್ರಾಮದಲ್ಲಿ ಶಾಂತಿಯಿಂದ ಜೀವನ ಮಾಡಿಕೊಳ್ಳುವಂತೆ ಹೇಳಿದರು ಕೂಡಲೇ ಕರುನಾಡು ವಿಜಯ ಸೇನೆ ಅಧ್ಯಕ್ಷರಾದ ಎಚ್ ಎಸ್ ಸುರೇಶ್ ರವರು ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರನ್ನು ಕರೆ ಮಾಡಿ ಸ್ಥಳಕ್ಕೆ ಸ್ಥಳಕ್ಕೆ ಕರೆಸಿ, ಈ ಜಾಗದ ವಿಚಾರವನ್ನು ವಿವರಿಸುವಂತೆ ಹೇಳಿದರು.ಇದಕ್ಕೆ ಗ್ರಾಮ ಲೆಕ್ಕಾಧಿಕಾರಿ ಎರಡು ಬಣಗಳನ್ನು ಕರೆದು ಮಾತನಾಡಿ ತಾವುಗಳು ಮಾನ್ಯ ತಾಲೂಕು ದಂಡಾಧಿಕಾರಿಗಳಿಗೆ ತಮ್ಮ ಅರ್ಜಿಯನ್ನು ನೀಡಿ , ಅವರ ನ್ಯಾಯಾಲಯದಲ್ಲಿ ತೀರ್ಮಾನ ಗೊಳ್ಳುವವರೆಗೂ ಈ ಸ್ಥಳವನ್ನು ಯಥಾಸ್ಥಿತಿ ಕಾಪಾಡುವಂತೆ ಹಾಗೂ ಕಾನೂನು ರೀತಿಯ ಹೋರಾಟವನ್ನು ಮಾಡಿಕೊಳ್ಳಿ ಎಂದು ಹೇಳಿದ್ದಾರೆ . ಗ್ರಾಮಸ್ಥರು ಇವರ ಮಾತಿಗೆ ಮನ್ನಣೆ ನೀಡಿ ಯಥಾಸ್ಥಿತಿ ಕಾಪಾಡುತ್ತೇವೆ ಈ ಜಾಗದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಗ್ರಾಮಸ್ಥರು ಒಪ್ಪಿಕೊಂಡು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯಿಂದ ಇರುತ್ತೇವೆ ಎಂದು ಭರವಸೆ ನೀಡಿದರು. ಸಂದರ್ಭದಲ್ಲಿ ತಾಲೂಕು ಕರುನಾಡು ವಿಜಯ ಸೇನೆ ಅಧ್ಯಕ್ಷರಾದ ಎಚ್ ಎಸ್ ಸುರೇಶ್ ಕಾರ್ಯಾಧ್ಯಕ್ಷರಾದ ನಂದೀಶ್.ಎಸ್ ಸಿ/ಎಸ್ ಟಿ ಘಟಕದ ತಾಲೂಕು ಅಧ್ಯಕ್ಷರಾದ ಬಿಗಿನೇ ನಹಳ್ಳಿ ಪುಟ್ಟರಾಜು.ಉಪಾಧ್ಯಕ್ಷರಾದ ಲೋಕೇಶ್.ಪರಮೇಶ್.ಶಿವಕುಮಾರ್ .ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.