Document

Turuvekere: ಮಿಸ್ ಕಾಲ್ ನೀಡಿ ಜೆಡಿಎಸ್ ಸದಸ್ಯತ್ವ ಪಡೆಯಿರಿ– ಶಾಸಕ ಎಂ ಟಿ ಕೃಷ್ಣಪ್ಪ .

Janataa24 NEWS DESK 

 

 

Turuvekere: ಮಿಸ್ ಕಾಲ್ ನೀಡಿ ಜೆಡಿಎಸ್ ಸದಸ್ಯತ್ವ ಪಡೆಯಿರಿ– ಶಾಸಕ ಎಂ ಟಿ ಕೃಷ್ಣಪ್ಪ .

Turuvekere jds mtk
ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಂ ಟಿ ಕೃಷ್ಣಪ್ಪ ಅವರು ಬೆಂಗಳೂರಿನಲ್ಲಿ ಜೆ.ಡಿ.ಎಸ್ ಸಮಾವೇಶವನ್ನು ನಡೆಸಿ ಮಾಜಿ ಪ್ರಧಾನಿ ದೇವೇಗೌಡರು, ಎಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷದ ಸದಸ್ಯತ್ವವನ್ನು ಮಾಡಬೇಕೆಂದು ತೀರ್ಮಾನಿಸಿದ್ದೇವೆ

ಅದರಂತೆ ಮಿಸ್ ಕಾಲ್ ನೀಡಿ ಸದಸ್ಯತ್ವ ಮಾಡಲು ಅಭಿಯಾನ ಪ್ರಾರಂಭಿಸಲಾಗಿದೆ, ನಾನು ಕೂಡ ಸದಸ್ಯತ್ವವನ್ನುಮಾಡಿಕೊಂಡಿದ್ದೇನೆ

ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿರುವದರಿಂದ ಪ್ರವಾಸ ಹೆಚ್ಚಾಗಿದ್ದು ಸಂಘಟಿಸಲು ಸಮಯವಿಲ್ಲದಿರುವುದರಿಂದ

ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಜವಾಬ್ದಾರಿಯನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡಿದ್ದು ಅದರಂತೆ ನಿಖಿಲ್ ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ದಿನಾಂಕ 19/6 /25 ರ ಗುರುವಾರ ಸಮಯ ಮೂರು ಗಂಟೆಗೆ ತುರುವೇಕೆರೆ ಪಟ್ಟಣದ ಚೌದ್ರಿ ಸಮುದಾಯ ಭವನದಲ್ಲಿ ಕಾರ್ಯಕರ್ತರಗಳ ಸಭೆಯನ್ನು ಕರೆದಿದ್ದು ಸುಮಾರು ಸಾವಿರಾರು ಜನ ಸೇರುವ ನಿರೀಕ್ಷೆ ಇದೆ

 

ಸಭೆಯನ್ನು ಉದ್ದೇಶಿಸಿ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ ಪಕ್ಷ ಸಂಘಟನೆ ಆಗಬೇಕಾಗಿದೆ ಎಂಬುದರ ಬಗ್ಗೆ ಅವರು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಿದ್ದು ಸರಿಯಾಗಿ ಮೂರು ಗಂಟೆಗೆ ಚೌದ್ರಿ ಕನ್ವೆನ್ಷನ್ ಹಾಲಿಗೆ ಕಾರ್ಯಕರ್ತರಗಳು ಹಾಜರಾಗಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು, ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸುಮಾರು 90 ಕ್ಷೇತ್ರಗಳನ್ನು ನಮಗೆ ಕೊಡಲು ಕೇಳಿಕೊಂಡಿದ್ದೇವೆ ಬಹುತೇಕ ಗೆಲುವನ್ನು ಸಾಧಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಯಾರೋ ಮೂರು ಜನರ ಮಾತಿಗೆ ಸೊಪ್ಪು ಹಾಕದೆ, ಪಕ್ಷ ಸಂಘಟನೆಯಲ್ಲಿ ಕೈಜೋಡಿಸಿ ಎನ್ನುತ್ತಾ ಈಗಾಗಲೇ ಪ್ರಧಾನ ಮಂತ್ರಿಗಳ ಒಪ್ಪಿಗೆಯನ್ನು ಪಡೆಯಲಾಗಿದೆ ಹಾಗಾಗಿ ಎಲ್ಲರೂ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯುವುದರಲ್ಲಿ ಪ್ರಮುಖ ಪಾತ್ರವಹಿಸಿ ಎಂದು ಕೋರಿದರು, ಪಟ್ಟಣದಲ್ಲಿ ಇದೆ 10 ನೇ ತಾರೀಕಿನಂದು ನನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ಕಾರ್ಯ ಕರ್ತರುಗಳು ಸೇರಿ ಆಚರಿಸಿದ್ದು ಇತಿಹಾಸ, ಇದಕ್ಕೆ ಸುಮಾರು ಏಳು ಸಾವಿರದ ಎಂಟು ಸಾವಿರ ಜನ ಆಚರಿಸಿದ್ದೀರಿ ಇದು ನನ್ನ ಸೌಭಾಗ್ಯ ವಾಗಿದ್ದು ಇದು ತಾಲೂಕಿನಲ್ಲೇ ಪ್ರಥಮವಾಗಿದ್ದು ಇದರಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ದುಡಿದ ಎಲ್ಲಾ ಮುಖಂಡರುಗಳು ಮತ್ತು ಕಾರ್ಯಕರ್ತರುಗಳಿಗೆ ಧನ್ಯವಾದ ತಿಳಿಸಿದರು.

 

ಈ ಸಂದರ್ಭದಲ್ಲಿ ಮುನಿಯೂರು ರಂಗಸ್ವಾಮಿ, ಮಂಗಿ ಕುಪ್ಪೆ ಬಸವರಾಜ್, ಮರಸರ ಕೊಟ್ಟಿಗೆ ಭರತ್, ರಾಘು ರಾಘವೇಂದ್ರ ಸೇರಿದಂತೆ ಇತರರು ಇದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *