Document

Gubbi: ಜಾತಿಗಣತಿಯಲ್ಲಿ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಿ–ಟಿ ಈರಣ್ಣ ಚನ್ನಶೆಟ್ಟಿಹಳ್ಳಿ

Janataa24 NEWS DESK 

 

Gubbi: ಜಾತಿಗಣತಿಯಲ್ಲಿ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಿ–ಟಿ ಈರಣ್ಣ ಚನ್ನಶೆಟ್ಟಿಹಳ್ಳಿ
Gubbi: ಜಾತಿಗಣತಿಯಲ್ಲಿ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಿ–ಟಿ ಈರಣ್ಣ ಚನ್ನಶೆಟ್ಟಿಹಳ್ಳಿ

ಗುಬ್ಬಿ: ಸುಪ್ರೀಂ ಕೋರ್ಟ್ ನ ಆದೇಶದನ್ವಯ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದು ಮೇ 5 ರಿಂದ ನಡೆಯುವ ಜಾತಿ ಗಣತಿಯಲ್ಲಿ ಛಲವಾದಿ ಸಮುದಾಯದ ಜನರು ಆದಿ ದ್ರಾವಿಡ ಎಂದು ಬರೆಸದೆ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಟಿ ಈರಣ್ಣ ಚನ್ನಶೆಟ್ಟಿಹಳ್ಳಿ ಮನವಿ ಮಾಡಿದರು.

 

ಗುಬ್ಬಿ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ತಾಲ್ಲೂಕು ಛಲವಾದಿ ಮಹಾಸಭಾ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು

 

ಪರಿಶಿಷ್ಟ ಜಾತಿಯಲ್ಲಿ ಉಪಜಾತಿಯನ್ನು ಗುರುತಿಸಲು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿದ್ದು ಜಾತಿ ಕಾಲಂ ನಲ್ಲಿ ಹೊಲಯರು, ಹೊಲಯ ಎಂದು ಬರಿಸಬೇಕು. ಇದರಿಂದ ನಿಖರವಾದ ಮಾಹಿತಿಯೊಂದಿಗೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗ, ಹಾಗೂ ರಾಜಕೀಯವಾಗಿ ಪ್ರತ್ಯೇಕ ಮೀಸಲಾತಿ ಸಿಗುವುದರಿಂದ ನಮ್ಮ ಸಮುದಾಯವು ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

 

ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಕರಿತಿಮ್ಮಯ್ಯ ಮಾತನಾಡಿ ಒಂದು ಭಾಗದಲ್ಲಿ ಆದಿ ದ್ರಾವಿಡ ಮತ್ತೊಂದು ಭಾಗದಲ್ಲಿ ಹೊಲಯ ಎಂದು ನಮೂದಿಸುವುದರಿಂದ ಗೊಂದಲವಾಗುತ್ತದೆ‌. ಆದ್ದರಿಂದ ಪ್ರತಿಯೊಬ್ಬರೂ ಹೊಲಯ ಎಂದು ನಮೂದಿಸುವುದರಿಂದ ಜಾತಿಯ ನಿಖರ ದತ್ತಾಂಶ ತಿಳಿಯಲು ಸಾಧ್ಯವಾಗುತ್ತದೆ ಎಂದರು.

 

ತಾಲ್ಲೂಕು ಛಲವಾದಿ ಮಹಾಸಭಾ ಉಪಾಧ್ಯಕ್ಷ ಕಿಟ್ಟದಕುಪ್ಪೆ ನಾಗರಾಜು ಮಾತನಾಡಿ ಗಣತಿದಾರರು ಸಮೀಕ್ಷೆಗೆ ಮನೆ ಬಾಗಿಲಿಗೆ ಬಂದಾಗ ಹೊಲಯ ಎಂದು ಬರೆಸುವುದರಿಂದ ಸಮುದಾಯದ ನಿಖರವಾದ ಜನಸಂಖ್ಯಾ ದತ್ತಾಂಶ ದೊರೆಯುತ್ತದೆ. ಛಲವಾದಿ ಸಮುದಾಯ ಕಡ್ಡಾಯವಾಗಿ ಹೊಲಯ ಎಂದು ನಮೂದಿಸಿ ಜಾತಿಯನ್ನು ಖಾತ್ರಿ ಪಡಿಸಬೇಕು ಎಂದು ಮನವಿ ಮಾಡಿದರು.

 

ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಉಪಾಧ್ಯಕ್ಷ ಸಚಿನ್, ಯುವ ಘಟಕದ ಅಧ್ಯಕ್ಷ ಮಧು, ಶಿವಣ್ಣ ರಾಮಣ್ಣ, ಶ್ರೀನಿವಾಸ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *