Janataa24 NEWS DESK
Gubbi: ಒಂದೇ ಸ್ಥಳದಲ್ಲಿ ಎರಡು ರಸ್ತೆ ಅಪಘಾತ–ಓರ್ವ ಸಾ*ವು ಮತ್ತೋರ್ವನ ಸ್ಥಿತಿ ಗಂಭೀರ.

ಗುಬ್ಬಿ: ಎರಡು ದಿನದ ಹಿಂದೆ ಕ್ಯಾಂಟರ್ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು ಇಂದು ಅದೇ ಜಾಗದಲ್ಲಿ ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನ ಕಾಲು ಮೂಳೆ ಮುರಿದು ಅಪಘಾತ ಸಂಭವಿಸಿದ ಘಟನೆ ಗುಬ್ಬಿ ತಾಲ್ಲೋಕಿನ ನಿಟ್ಟೂರು ಹೋಬಳಿಯ ಕುಂದರನಹಳ್ಳಿ ಗೇಟ್ ನಲ್ಲಿ ನಡೆದಿದೆ.
ಎರಡು ದಿನದ ಹಿಂದೆ ಮಗಳ ಮದುವೆಗೆ ಹೋಗಿ ಮನೆಗೆ ಬರುವಾಗ ಗುಬ್ಬಿ ತಾಲ್ಲೋಕಿನ ಜಿ.ಹೊಸಹಳ್ಳಿ ಗ್ರಾಮದ ಮಂಜುನಾಥ್ 50 ವರ್ಷದ ವ್ಯಕ್ತಿಗೆ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಈ ಸಾವು ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.
ಇಂದು ಅದೇ ಕುಂದರನಹಳ್ಳಿ ಗೇಟ್ ಬಳಿಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹುಚ್ಚಯ್ಯ ಎಂಬಾತ ಸುಮಾರು( 65 )ವರ್ಷದ ತುರುವೇಕೆರೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ವ್ಯಕ್ತಿ ಟಿವಿಎಸ್ ಎಕ್ಸೆಲ್ ಗಾಡಿಯಲ್ಲಿ ಬರುತ್ತಿದ್ದ ವೇಳೆ ಲಾರಿಯೊಂದು ಯು ಟರ್ನ್ ಮಾಡುವ ತಿರುವಿನಲ್ಲಿ ಹಿಂಬದಿಯಿಂದ ಗುದ್ದಿ ಅಪಘಾತ ಸಂಭವಿಸಿ ಕಾಲು ಮೂಳೆ ಮುರಿದಿದ್ದು ಬೈಕ್ ಸವಾರನಿಗೆ ಅಧಿಕ ರಕ್ತಸ್ರಾವದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ರಸ್ತೆ ಸುರಕ್ಷತೆಗೆ ಸಂಬಂಧ ಪಟ್ಟ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತು. ಸ್ಪೀಡ್ ಬ್ರೇಕರ್, ಬ್ಯಾರಿಕೆಟ್ಗಳನ್ನು, ನಾಮಫಲಕ, ಹಳದಿ ದೀಪಗಳನ್ನು ಅಳವಡಿಸಿ,ಮತ್ತೆ ಇಂತಹ ಅಪಘಾತ ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.