Document

Turuvekere: ಅಲೆಮಾರಿ /ಅರೇ ಅಲೆಮಾರಿ ಒಕ್ಕೂಟದ ತಾಲೂಕು ನೂತನ ಅಧ್ಯಕ್ಷರಾಗಿ ಕೃಷ್ಣಸ್ವಾಮಿ ಆಯ್ಕೆ.

Janataa24 NEWS DESK 

 

Turuvekere: ಅಲೆಮಾರಿ /ಅರೇ ಅಲೆಮಾರಿ ಒಕ್ಕೂಟದ ತಾಲೂಕು ನೂತನ ಅಧ್ಯಕ್ಷರಾಗಿ ಕೃಷ್ಣಸ್ವಾಮಿ ಆಯ್ಕೆ.

 

Turuvekere: ಅಲೆಮಾರಿ /ಅರೇ ಅಲೆಮಾರಿ ಒಕ್ಕೂಟದ ತಾಲೂಕು ನೂತನ ಅಧ್ಯಕ್ಷರಾಗಿ ಕೃಷ್ಣಸ್ವಾಮಿ ಆಯ್ಕೆ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ/ ಅರೆ ಅಲೆಮಾರಿ ಒಕ್ಕೂಟದ ತಾಲೂಕು ಅಧ್ಯಕ್ಷರನ್ನಾಗಿ ಕೃಷ್ಣಸ್ವಾಮಿ ಅವರನ್ನು ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡಲ ಗಿರಿಯಪ್ಪ ಹಾಗೂ ಸಮಾಜದ ಹಿರಿಯ ಮುಖಂಡರಾದ ಉಗ್ರಯ್ಯ ಇವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕಿನ ಅಲೆಮಾರಿ /ಅರೇ ಅಲೆಮಾರಿ ಒಕ್ಕೂಟದ ತಾಲೂಕು ಅಧ್ಯಕ್ಷರನ್ನಾಗಿ ಕೃಷ್ಣಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು, ಇದೆ ವೇಳೆ ನೂತನವಾಗಿ ಆಯ್ಕೆಯಾದ ಕೃಷ್ಣಸ್ವಾಮಿ ಮಾತನಾಡಿ ಅಲೆಮಾರಿ ಅರೆ ಅಲೆಮಾರಿಗಳಿಗೆ ಪ್ರವರ್ಗ ಒಂದರಲ್ಲಿ ನಮ್ಮ ತಾಲೂಕಿನಲ್ಲಿ ಸುಮಾರು ಐದರಿಂದ ಆರು ಜಾತಿಗಳು ಬರುತ್ತವೆ ಇವರಿಗೆ ಸರ್ಕಾರದಿಂದ ಬಂದಂತಹ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ನಮ್ಮಸಂಘಟನೆ ಮುಖಾಂತರ ದೊರಕಿಸಿ ಕೊಡಬೇಕು,

 

ಉ,ದಾ,: ಸಿಸಿ ರಸ್ತೆ ಡ್ರೈನೇಜ್, ಮನೆಗಳು, ಇತ್ಯಾದಿ ಆಯಾ ಇಲಾಖೆಗಳಲ್ಲಿ ಬಂದಂತಹ ಅನುದಾನವನ್ನು ಸಣ್ಣಪುಟ್ಟ ಜಾತಿಯಾಗಿರುವ ನಮಗೆ ನ್ಯಾಯವಾಗಿ ಒದಗಿಸಿ ಕೊಡಬೇಕು, ಜೊತೆಗೆ ನಾನು ಇಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ತಾಲೂಕಿನಲ್ಲಿ ಅಲೆಮಾರಿ/ ಅರೆ ಅಲೆಮಾರಿಗೆ ಕೇವಲ ಐದರಿಂದ ಆರು ಜಾತಿಗಳು ಸೇರ್ಪಡೆಯಾಗುತ್ತವೆ ಹಾಗಾಗಿ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದಿಂದ ಬರುವ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮಗೆ ಬರುವ ಅನುದಾನವನ್ನು ಪ್ರಾಮಾಣಿಕವಾಗಿ ಬಳಸಿ ಪ್ರತಿಯೊಂದು ಕುಟುಂಬಕ್ಕೆ ತಲುಪುವ ಹಾಗೆ ಕೆಲಸ ನಿರ್ವಹಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ನಮ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಹರಿಕಾರನಹಳ್ಳಿ ಮಂಜಪ್ಪ, ಗೌರವಾಧ್ಯಕ್ಷರಾದ ದಿವಾಕರ್, ಉಪಾಧ್ಯಕ್ಷರಾದ ಮಧುಸೂದನ್, ತಾಲೂಕು, ಜೆಡಿಎಸ್ ಮಾಜಿ ಅಧ್ಯಕ್ಷರಾದ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ನರಸಿಂಹರಾಜು, ಕಾಡುಗೊಲ್ಲ ಸಮಾಜದ ಅಧ್ಯಕ್ಷರಾದ ಬಸವರಾಜು ,ಕಾಡುಗೊಲ್ಲ ಸಮಾಜದ ಪ್ರಧಾನ ಕಾರ್ಯದರ್ಶಿ ಸತೀಶ್, ಇನ್ನು ಅನೇಕರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *