Document

ExpressCanal: ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ವಿರೋಧಿಸಿ ಬೃಹತ್ ಪಾದಯಾತ್ರೆ.

Janataa24 NEWS DESK 

 

ExpressCanal: ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ವಿರೋಧಿಸಿ ಬೃಹತ್ ಪಾದಯಾತ್ರೆ.ExpressCanal: ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ವಿರೋಧಿಸಿ ಬೃಹತ್ ಪಾದಯಾತ್ರೆ.

 

ಗುಬ್ಬಿ : ಅವೈಜ್ಞಾನಿಕ ಎಕ್ಸ್ ಪ್ರೇಸ್ ಲಿಂಕ್ ಕೆನಲ್ ಕಾಮಗಾರಿಯನ್ನು ವಿರೋಧಿಸಿ ಎನ್ ಡಿ ಎ ಪಕ್ಷದಿಂದ ಬೃಹತ್ ಪ್ರತಿಭಟನೆ ಹಾಗೂ ಪಾದ ಯಾತ್ರೆಯನ್ನು ನಡೆಸಲಾಯಿತು.

 

ತಾಲೂಕಿನ ಸಾಗರನಹಳ್ಳಿ ಗೇಟಿನಿಂದ ಮಲ್ಲಸಂದ್ರದ ಓಂ ಪ್ಯಾಲೇಸ್ ವರೆಗೆ ಪಾದಯಾತ್ರೆಯಲ್ಲಿ ಸಾವಿರಾರು ರೈತರು ಎಕ್ಸಪ್ರೆಸ್ ಲಿಂಕ್ ಕಾಮಗಾರಿಯನ್ನು ಕೈ ಬಿಡುವಂತೆ ಆಡಳಿತ ಪಕ್ಷದ ವಿರುದ್ಧ ಘೋಷಣೆಯನ್ನು ಕೂಗುತ್ತಾ ಪಾದಯಾತ್ರೆಯಲ್ಲಿ ಸಾಗಿದರು.

 

ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ- ಡಿ ಕೆ ಶಿವಕುಮಾರ್ ಅವರೇ ನೀವು ಅಲ್ಲೇ ಇದ್ರೆ ಮುಖ್ಯಮಂತ್ರಿ ಆಗಲ್ಲ ನಮ್ಮ ಜೊತೆಗೆ ಬನ್ನಿ ಮುಖ್ಯಮಂತ್ರಿ ಮಾಡುತ್ತಿವೆ ನಮ್ಮ ನೀರನ್ನು ನೀವು ತೆಗೆದು ಕೊಂಡು ಹೋಗಿ ನಮ್ಮ ಜಿಲ್ಲೆಗೆ ಮರಣ ಶಾಸನ ಬರೆಯಲು ಹೊರಟಿದ್ದೀರಾ ಇದು ಸರಿಯಲ್ಲ ಕ್ಯಾಬಿನೆಟ್ ನಲ್ಲಿ ಅಂಗೀಕಾರವಾಗಿದೆ ಎಂದರೆ ಅದೇನು ದೊಡ್ಡ ಮಹತ್ವವಲ್ಲ ರೈತರ ಬಗ್ಗೆ ಕಾಳಜಿ ನಿಮಗೆ ಇದ್ದರೆ ಮೊದಲು ಅದನ್ನ ರಿಜೆಕ್ಟ್ ಮಾಡಿ ನೇರವಾಗಿ ಅಣೆಕಟ್ಟೆಯಿಂದನೇ ನೀರನ್ನು ತೆಗೆದುಕೊಂಡು ಹೋಗುವುದನ್ನ ಮಾಡಬೇಕು ಎಂದು ಒತ್ತಾಯ ಮಾಡಿದರು.

ಕಾಂಗ್ರೆಸ್ ಸರಕಾರ ಯಾವುದೇ ಕಾರಣಕ್ಕೂ ರೈತರ ಪರವಾಗಿಲ್ಲಾ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆನಮ್ಮ ಜನ ಅವರಿಗೆ ಮತ ಹಾಕಿ ಹಾಳಾಗಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಬೆಳಗಾವಿಯಲ್ಲಿ ನಡೆಯುವಂತಹ ಅಧಿವೇಶನದ ಶೂನ್ಯ ವೇಳೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ದೊಡ್ಡ ಹೋರಾಟವನ್ನೇ ಮಾಡುತ್ತೇವೆ ರಣರಂಗವೇ ಆಗಲಿ ನಮ್ಮ ನೀರನ್ನು ಮಾತ್ರ ನಾವು ಯಾವುದೇ ಕಾರಣಕ್ಕೂ ಬೇರೆ ಭಾಗಕ್ಕೆ ಬಿಡುವುದಿಲ್ಲ ಎಂದು ಕಿಡಿಕಾರಿದರು.

 

ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ ನನ್ನ ಶಾಸಕ ಸ್ಥಾನ ಹೋದರು ಪರವಾಗಿಲ್ಲ ನೀರಾವರಿ ಹೋರಾಟ ಮಾಡಿಯೇ ಮಾಡುತ್ತೇವೆ ಡಿಕೆ ಶಿವಕುಮಾರ್ ನಿಮಗೆ ತಾಕತ್ತಿದ್ದರೆ ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೋಡುಣ ನಮ್ಮ ರಕ್ತ ಕೊಟ್ಟರು ಕೊಡುವೆವು ನೀರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಸಾವಿರಾರು ಜನರು ಇಂದು ಬಂದಿದ್ದೇವೆ ಮುಂದೆ ಇದೆ ಲಕ್ಷಗಟ್ಟಲೆ ರೈತರು ಹೋರಾಟಕ್ಕೆ ಇಳಿಯುವುದು ಸತ್ಯ ಎಂದು ಕಿಡಿಕಾರಿದರು.

 

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ ನಾವು ಏನಾದರೂ ಈಗ ಯಾಮಾರಿದರೆ ಖಂಡಿತವಾಗಿ ನಾವು ನಮ್ಮ ನೀರನ್ನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ದೊಡ್ಡ ಹೋರಾಟವೇ ನಮಗೆ ಅಸ್ತ್ರವಾಗಬೇಕು ಎಂದು ತಿಳಿಸಿದರು.

 

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ ತುಮಕೂರು ಜಿಲ್ಲೆಗೆ ಹರಿಯುತ್ತಿರುವಂತಹ ನೀರನ್ನ ಬೇರೆ ಜಿಲ್ಲೆಗೆ ಹರಿಸುವುದಕ್ಕೆ ಸಾಧ್ಯವೇ ಇಲ್ಲ ಆಡಳಿತವಿದೆಯೆಂದು ರೈತರ ಹಿತ ಕಾಯದೆ ಹೋದರೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆ ನೀವೇ ಅನುಭವಿಸುತ್ತೀರಾ ಎಂದು ತಿಳಿಸಿದರು.

 

ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ ಗುಬ್ಬಿ ಶಾಸಕರು ವಾಸಣ್ಣ ಅಲ್ಲ ಅವರು ಮೋಸಣ್ಣ ಕ್ಷೇತ್ರವನ್ನೇ ಅಡ ಇಡಲು ಮುಂದಾಗಿದ್ದಾರೆ ರಾಜೀನಾಮೆ ಕೊಟ್ಟು ಬನ್ನಿ ನಾವೇ ನಿಮ್ಮನ್ನು ಮತ್ತೆ ಅವಿರೋಧವಾಗಿ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುತ್ತೇವೆ ರೈತರ ಮತವನ್ನು ಪಡೆದು ರೈತರಿಗೆ ಅನ್ಯಾಯ ಮಾಡುತ್ತಿರುವ ನೀವು ಶಾಸಕರಾಗಿ ಮುಂದುವರಿಯಬೇಕಾ ಎಂದು ಟೀಕಿಸಿದರು.

 

ಜೆಡಿಎಸ್ ಮುಖಂಡ ಬಿಎಸ್ ನಾಗರಾಜು ಮಾತನಾಡಿ 25 ವರ್ಷ ಆಡಳಿತ ಮಾಡಿರುವ ನೀವು ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ ರಸ್ತೆ ಮಾಡಿಲ್ಲ ವಿದ್ಯುತ್ ಕೊಟ್ಟಿಲ್ಲ ಅಂತ ನಾವು ಕೇಳಲ್ಲ ಆದರೆ ನಮ್ಮ ನೀರು ಬೇರೆ ಕಡೆ ಹೋಗುತ್ತಿದ್ದಾಗಲೂ ಸುಮ್ಮನೆ ಕುಳಿತಿರುವುದು ತಾಲೂಕಿನ ಮಾಡುತ್ತಿರುವ ದೊಡ್ಡ ಅನ್ಯಾಯ ಪ್ರತಿಭಟನೆಗೆ ಆಗಮಿಸಿ ನಮ್ಮ ನೀರನ್ನು ಉಳಿಸುವ ಕೆಲಸವನ್ನು ಮಾಡಿ ಎಂದು ವಾಗ್ದಾಳಿ ನಡೆಸಿದರು.

ಬೆಳ್ಳಾವಿಯ ಕಾರದ ವೀರ ಬಸವ ಸ್ವಾಮೀಜಿ ಮಾತನಾಡಿ ನೀವು ರಾಜಕೀಯವನ್ನು ಎಷ್ಟು ಬೇಕಾದರೂ ಮಾಡಿ ಆದರೆ ರೈತರು ಬದುಕನ್ನು ಕಟ್ಟಿಕೊಳ್ಳುತ್ತಿರುವ ನೀರನ್ನೆ ನೀವು ತೆಗೆದುಕೊಂಡು ಹೋದರೆ ಬೆಳೆ ಬೆಳೆಯುವುದಾದರೂ ಹೇಗೆ ಜೀವನ ಮಾಡುವುದಾದರೂ ಹೇಗೆ ಜಿಲ್ಲೆಯ ಎಲ್ಲಾ ಮಠಾಧೀಶರು ಕೊಡ ಹೋರಾಟಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

 

ಗೊಲ್ಲಹಳ್ಳಿ ಮಠದ ವಿಭವ ವಿದ್ಯಾ ಶಂಕರ ಸ್ವಾಮೀಜಿ ಮಾತನಾಡಿ ಬಡತನದಲ್ಲಿ ಇದ್ದಂತಹ ಗುಬ್ಬಿ ತಾಲೂಕು ಇಂದು ಶ್ರೀಮಂತಿಕೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ ಎಂದರೆ ಅದಕ್ಕೆ ಹೇಮಾವತಿ ನೀರೆ ಕಾರಣ ಇಂದು ನಮ್ಮ ನೀರು ಬೇರೆ ಕಡೆಗೆ ಹೋದರೆ ಮುಂದಿನ ಗತಿ ಏನು ಎಂಬುದರ ಬಗ್ಗೆ ರೈತರು ಅರ್ಥ ಮಾಡಿಕೊಂಡು ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

 

ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ ನೀರಾವರಿ ಹೋರಾಟಕ್ಕೆ ಹಿಂದೆ ಲಕ್ಕಪ್ಪನವರು ವೈ ಕೆ ರಾಮಯ್ಯನವರು ಹೋರಾಟ ಮಾಡಿ ಜಿಲ್ಲೆಗೆ ನೀರು ಹರಿಸಿದ್ದಾರೆ ಆದರೆ ಇಂದು ನಮ್ಮ ನೀರನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯ ಮಹಾಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ,ಮಾಜಿ ಶಾಸಕ ಲಿಂಗಪ್ಪ, ಎಂ ಎಲ್ ಸಿ ಚಿದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ,ಮುಖಂಡರಾದ ತಿಪಟೂರು ಜೆಡಿಎಸ್ ಮುಖಂಡ ಶಾಂತಕುಮಾರ್,ಚಂದ್ರಶೇಖರ ಬಾಬು, ಕಳ್ಳಿ ಪಾಳ್ಯ ಲೋಕೇಶ್, ಹೊನ್ನಗಿರಿ ಗೌಡ ಸಾಗರನ ಹಳ್ಳಿ ವಿಜಯ್ ಕುಮಾರ್, ಪಂಚಾಕ್ಷರಿ ಎನ್ ಸಿ ಪ್ರಕಾಶ್, ಜಿ ಎನ್ ಬೆಟ್ಟ ಸ್ವಾಮಿ, ಸಿದ್ದಗಂಗಮ್ಮ, ಯೋಗಾನಂದ ಕುಮಾರ್, ಚಿಕ್ಕವೀರಯ್ಯ, ಭೈರಪ್ಪ ಯತೀಶ್, ಪಟ್ಟಣ ಪಂಚಾಯ್ತಿಯ ಸದಸ್ಯರುಗಳು, ಸಾವಿರಾರು ರೈತರು, ಸೇರಿದಂತ ಇನ್ನಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

 

ವರದಿ: ಶ್ರೀಕಾಂತ್ ಗುಬ್ಬಿ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *