Document

68 ನೇ ಅಂಬೇಡ್ಕರ್ ಪರಿನಿಬ್ಬಾಣ: ಜಾತ್ಯತೀತವಾಗಿ ಒಗ್ಗೂಡಿದ ಎಲ್ಲಾ ಸಮುದಾಯದ ಮುಖಂಡರು.

Janataa24 NEWS DESK

68 ನೇ ಅಂಬೇಡ್ಕರ್ ಪರಿನಿಬ್ಬಾಣ: ಜಾತ್ಯತೀತವಾಗಿ ಒಗ್ಗೂಡಿದ ಎಲ್ಲಾ ಸಮುದಾಯದ ಮುಖಂಡರು.

68 ನೇ ಅಂಬೇಡ್ಕರ್ ಪರಿನಿಬ್ಬಾಣ: ಜಾತ್ಯತೀತವಾಗಿ ಒಗ್ಗೂಡಿದ ಎಲ್ಲಾ ಸಮುದಾಯದ ಮುಖಂಡರು.
ತುರುವೇಕೆರೆ: ಪಟ್ಟಣದ ಕನ್ನಡ ಭವನದಲ್ಲಿ ಶುಕ್ರವಾರದಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕರಾದ ಬಿ ಆರ್ ಕೃಷ್ಣ ಮಾದರ್ ಇವರ ನೇತೃತ್ವದಲ್ಲಿ ಅಂಬೇಡ್ಕರ್ ಪರಿ ನಿಬ್ಬಣಾ ಆಚರಣೆ ನಿಮಿತ್ತ ಅಂಬೇಡ್ಕರ್ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಅಂಬೇಡ್ಕರ್ ಪರಿನಿಬ್ಬಾಣ ಆಚರಣೆಗೆ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಡಿಎಸ್ಎಸ್ ಸಂಚಾಲಕರಾದ ಕೃಷ್ಣ ಮಾದರ್ ರವರು ಮಾತನಾಡಿ ಬಂಧುಗಳೇ ನಾವು ಆರ್ಥಿಕವಾಗಿ ಸಬಲರಾಗಲು ಅಂಬೇಡ್ಕರ್ ಅವರ ಹೆಸರನ್ನ ಬಳಸಿಕೊಳ್ಳುತ್ತಿದ್ದೇವೆ ನಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರನ್ನು ಬಳಸಿಕೊಳ್ಳುವ ನಾವುಗಳು ಅಂಬೇಡ್ಕರ್ ಅವರ ಕಾರ್ಯಕ್ರಮ ಎಂದರೆ ನಾವೆಲ್ಲ ನೂರು ರೂಪಾಯಿ ಖರ್ಚು ಮಾಡುವುದು ಹೇಗೆ ಎಂಬುದನ್ನು ಯೋಚಿಸುತ್ತೇವೆ ಇಂತಹ ಆಲೋಚನೆಗಳು ಮೊದಲು ನಮ್ಮಗಳಿಂದ ದೂರ ಹೋಗಬೇಕಾಗಿದೆ ಹಾಗಾಗಿ ಮುಂದೆ ಬರುವ ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನ್ಮದಿನದ ನಿಮಿತ್ತ ತಮ್ಮತಮ್ಮ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣ ಮಾಡಿ ಸಾಧ್ಯವಾದರೆ ನಿಮ್ಮ ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ ಅಕ್ಕಪಕ್ಕದವರಿಗೆ ಸಿಹಿ ಹಂಚಿ ನಾವುಗಳು ವರ್ಷವೆಲ್ಲ ಎಷ್ಟು ಹಬ್ಬಗಳನ್ನ ಬಹಳ ಅದ್ದೂರಿಯಾಗಿ ಆಚರಿಸುತ್ತೇವೆ ಅದೇ ರೀತಿ ಬಾಬಾ ಸಾಹೇಬರ ಜನ್ಮದಿನದಂದು ಹಬ್ಬದ ದಿನವನ್ನಾಗಿ ಇದು ನಮ್ಮ ತಾತನ ಜನ್ಮದಿನ ಎಂದು ಆಚರಿಸುವಂತಾಗಬೇಕು ಇಂತಹ ವ್ಯವಸ್ಥೆ ದೇಶದೆಲ್ಲೆಡೆ ಪಸರಿಸಬೇಕು ಎಂದು ಕರೆಕೊಟ್ಟರು.

ಹೀಗೆ ಹಲವಾರು ಸಮುದಾಯದ ಮುಖಂಡರುಗಳು ಜಾತ್ಯತೀತವಾಗಿ ಈ ಆಚರಣೆಯಲ್ಲಿ ಭಾಗವಹಿಸಿದ್ದ ಸಂದರ್ಭ ಒಗ್ಗಟ್ಟು ಎಂಬುದಕ್ಕೆ ಸಾಕ್ಷಿ ಕೂಡ ಆಯಿತು, ಇನ್ನು ಹಲವು ಮುಖಂಡರು ಮಾತನಾಡಿ ಅಂಬೇಡ್ಕರ್ ಅವರ ವಿಚಾರಧಾರೆಯಂತೆ ನಾವೆಲ್ಲರೂ ನಡೆಯಬೇಕು ಅಂಬೇಡ್ಕರ್ ಕೊಟ್ಟ ಕೊಡುಗೆಯನ್ನು ಪ್ರತಿಕ್ಷಣ ನೆನಪಿಸಿಕೊಳ್ಳಬೇಕು ಸ್ವಾರ್ಥ ಮನೋಭಾವನೆ ಇರಬಾರದು ಎಂದು ಹೇಳಿದರು.

ಇದೆ ವೇಳೆ ತಾಲೂಕಿನ ಭೀಮೋತ್ಸವ ಆಚರಣ ಸಮಿತಿ, DSS ಅಂಬೇಡ್ಕರ ವಾದ, ಚಲವಾದಿ ಮಹಾಸಭಾ, ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ಮಹಾನ್ ಮಾನವತವಾದಿ ಡಾ. ಬಿಆರ್ ಅಂಬೇಡ್ಕರ್ ರವರ 68ನೇ ಪರಿ ನಿಬ್ಬಾಣ ಆಚರಣೆಯಲ್ಲಿ ಭಾಗವಹಿಸಿದ್ದು, ಮುಖಂಡರುಗಳಾದ ಡಿ ಪಿ, ರಾಜು, ಚಲವಾದಿ ಜಗದೀಶ್, ಬೋರೇಗೌಡರು,ಸೋಮೇನಹಳ್ಳಿ ಜಗದೀಶ್, ಬಡಾವಣೆ ಶಿವರಾಜ್, ಗಂಗಣ್ಣ ಆಟೋ ಚಾಲಕ ಸಂಘ, ಅನ್ನಪೂರ್ಣಮ್ಮ, DSS ಮಹಿಳಾ ಸಂಚಾಲಕರು, ಸೋಮಣ್ಣ ಚಲವಾದಿ ಮಹಾಸಭಾ, ತೋವಿನಕೆರೆ ರಂಗಸ್ವಾಮಿ, ರಾಯಣ್ಣ ಪೌರಕಾರ್ಮಿಕರ ಸಂಘ, ಸಿದ್ದಲಿಂಗ ಸ್ವಾಮಿ, ಧನಂಜಯ ಸವಿತಾ ಸಮಾಜ, ಕನ್ನಡದ ಕಂದ ವೆಂಕಟೇಶ್, ಮಾರುತಿ ಬೀದಿಬದಿ ವ್ಯಾಪಾರಿಗಳ ಸಂಘ, ಬೋರಪ್ಪ ನೌಕರರ ಸಂಘ, ಪ್ರಕಾಶ್ ಯಾದವ ಸಮುದಾಯ, ರಾಮಚಂದ್ರಪ್ಪ ಪುರ, ಬೀಚನಹಳ್ಳಿ ಮಹದೇವಯ್ಯ,ಕಲಾವಿದ ಲೋಕೇಶ್, ಸಾವಿತ್ರಮ್ಮ ಹರಿದಾಸನಹಳ್ಳಿ, ಸುನಿಲ್ ಮೇಘನಾ ಪಟ್ಟಣ ಪಂಚಾಯಿತಿ ಸದಸ್ಯರು,ಪ್ರಸಾದ್ ವಿನೋಬನಗರ, ವಿಜಿ ಕುಮಾರ್, ನಗರ ಘಟಕದ ಅಧ್ಯಕ್ಷರು ರೈತ ಸಂಘ,ಹಾಗೂ ಗಿರೀಶ್ ಸೈಬರ್, ಬೀಚನಹಳ್ಳಿ ಶ್ರೀನಿವಾಸ್, ತಿಮ್ಮಣ್ಣ ಕಲ್ಲಬೋರನಹಳ್ಳಿ, ತುರುವೇಕೆರೆ ತಾಲೂಕಿನ ಎಲ್ಲ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *