Janataa24 NEWS DESK
Turuvekere: A fodder bank will be opened for cattle-Tahsildar Renu Kumar.

ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿ ವೈ ಎಮ್ ರೇಣುಕುಮಾರ್ ಮತ್ತು ಪಶು ಪಾಲನೆ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕರಾದ ರೇವಣ್ಣ ಸಿದ್ದಪ್ಪ ಇವರು ಸುದ್ದಿಗೋಷ್ಠಿ ನಡೆಸಿದರು. ಇದನ್ನು ಕುರಿತು ಮಾತನಾಡಿದ ಪಶುಪಾಲನೆ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾದ ರೇವಣ್ಣ ಸಿದ್ದಪ್ಪ, ತಾಲೂಕಿನಲ್ಲಿ ಇದೆ ಗುರುವಾರದಂದು ಮಾಯಸಂದ್ರ ಹೋಬಳಿ ಮತ್ತು ದಬ್ಬೇಗಟ್ಟ ಹೋಬಳಿಯಲ್ಲಿ ,ಬರಗಾಲದ ಹಿನ್ನೆಲೆ ಜಾನುವಾರುಗಳಿಗಾಗಿ ಮೇವಿನ ಬ್ಯಾಂಕನ್ನು ತೆರೆಯಲಾಗುವುದು, ಇನ್ನು ಮೊದಲಿಗೆ ಎರಡು ಹೋಬಳಿಯಲ್ಲಿ ಈ ಮೇವಿನ ಬ್ಯಾಂಕ್ ತೆರೆಯಲಾಗುತ್ತದೆ, ಅದರಲ್ಲಿ ಮೊದಲಿಗೆ ಮೇ 9 ರಂದು ಮಾಯಸಂದ್ರ ಹೋಬಳಿ ಟಿ ಬಿ ಕ್ರಾಸ್ ಬಳಿ ಇರುವ ಚುಂಚಾದ್ರಿ ರೈತ ಸಂತೆ ಮತ್ತು ಮೇ 13 ರಂದು ದಬ್ಬೆಘಟ್ಟ ಹೋಬಳಿಯ ಅರೆಮಲ್ಲೇನಹಳ್ಳಿಯಲ್ಲಿ ಮೇವಿನ ಬ್ಯಾಂಕ್ ತೆರೆಯಲಾಗುವುದು, ಮತ್ತು ಮುಂದಿನ ಒಂದೆರಡು ದಿನಗಳ ನಂತರ ತಾಲೂಕಿನ ಕಸಬಾ ಹೋಬಳಿ ಮತ್ತು ದಂಡಿನ ಶಿವರ ಹೋಬಳಿಯಲ್ಲಿ ಜಾನುವಾರುಗಳಿಗಾಗಿ ಮೇವಿನ ಬ್ಯಾಂಕ್ ತೆರೆಯಲಾಗುವುದು.
ಹಾಗಾಗಿ ರೈತರು ನಿಮ್ಮ ಹತ್ತಿರದ ಪಶು ಆಸ್ಪತ್ರೆಗೆ ತೆರಳಿ ನಿಮ್ಮ ಜಾನುವಾರುಗಳಿಗೆ ಹಾಕಿರುವಂತಹ ಓಲೆಗಳ ನಂಬರ್ ಗಳನ್ನು ನೋಂದಣಿ ಮಾಡಿ ಅದರ ಜೊತೆಗೆ ಮೇವನ್ನು ಪಡೆದುಕೊಳ್ಳಲು ಅಧಿಕೃತ ಕಾರ್ಡ್ ಒಂದನ್ನು ಪಡೆದುಕೊಳ್ಳಬೇಕು ರೈತರು ಇದರ ಸದುಪಯೋಗ ಪಡೆದು, ಜೊತೆಗೆ ಒಂದು ಜಾನುವಾರುಗೆ 6 ಕೆ.ಜಿ ಮೇವು ಕೊಡಲಾಗುವುದು ಒಂದು ಕೆಜಿಗೆ, 2,ರೂನಂತೆ ನಿಗದಿ ಮಾಡಲಾಗಿದ್ದು, ರೈತರು ಒಂದು ವಾರಗಳಿಗಾಗುವಷ್ಟು ಜಾನುವಾರುಗಳಿಗೆ ಮೇವನ್ನು ತೆಗೆದುಕೊಂಡು ಹೋಗಬಹುದು ಪದೇ ಪದೇ ಬರುವ ಅವಶ್ಯಕತೆ ಇಲ್ಲವೆಂದು ತಿಳಿಸಿದರು.ಇದೇ ವೇಳೆ ತಾಲೂಕು ದಂಡಾಧಿಕಾರಿ ,ವೈ ಎಂ ರೇಣುಕುಮಾರ್ ಮಾತನಾಡಿ, ತಾಲೂಕಿನಲ್ಲಿ ಬರಗಾಲ ಇರುವುದರಿಂದ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಈಗಾಗಲೇ ತಾಲೂಕಿನಾದ್ಯಂತ 10 ಬೋರ್ವೆಲ್ ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರ ಜೊತೆಗೆ ಕೆಲವು ಖಾಸಾಗಿ ಮಾಲೀಕತ್ವದ ಬೋರ್ವೆಲ್ ಗಳನ್ನು ಬಾಡಿಗೆ ಪಡೆದು ಆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಕೊಡಲಾಗುತ್ತಿದೆ, ಜೊತೆಗೆ ತಾಲೂಕಿನ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಾದರೂ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಕೂಡಲೇ ನನ್ನ ದೂರವಾಣಿಗೆ ಕರೆ ಮಾಡಬಹುದು ಎಂದರು.ತಹಶೀಲ್ದಾರ್ ಅವರ ದೂರವಾಣಿ ಸಂಖ್ಯೆ, – 9448158273.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/pavagada-is-a-green-revolution-organization-that/