Document

Pavagada: ಕಾಡುಪ್ರಾಣಿಗಳಿಗೆ ನೀರಿನ ದಾಹ ನೀಗಿಸಲು ಮುಂದಾದ ಹಸಿರು ಕ್ರಾಂತಿ ಸಂಸ್ಥೆ.

Janataa24 NEWS DESK

Pavagada: Hasiru Kranthi organization to quench the thirst of wild animals.

ಪಾವಗಡ: ಬಿಸಿಲಿನ ಝಳಕಿಗೆ ಹೈರಾಣಾದ ಜನ ಜಾನುವಾರುಗಳ ರಕ್ಷಣೆಗೆ ಮುಂದಾದ ಹಸಿರು ಕ್ರಾಂತಿ ಸ್ಪೋರ್ಟ್ಸ್ ಹಾಗೂ ರಿಕ್ರಿಯೇಶನ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎ. ವೆಂಕಟೇಶ್.ಪಾವಗಡ ಇದೇ ವೇಳೆ ಹಸಿರು ಕ್ರಾಂತಿ ಸ್ಪೋರ್ಟ್ಸ್ ಡೆಕೋರೇಷನ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಸ್ಥಳೀಯ ಶಾಸಕರಾದಂತಹ ಹೆಚ್‌.ವಿ. ವೆಂಕಟೇಶ್ ರವರಿಗೆ ನಮ್ಮ ಒಂದು ಈ ಸಂಸ್ಥೆಯಿಂದ ಈ ಬಾರಿಯ ಬೇಸಿಗೆಯ ಹಿನ್ನೆಲೆಯಲ್ಲಿ ಸಸಿಗಳಿಗೆ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂಬುದಾಗಿ ಕೇಳಿದಾಗ ಅವರು ದೊಡ್ಡ ಮನಸ್ಸು ಮಾಡಿ ನಮಗೆ ನೀರಿನ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಿದ್ದಾರೆ ಈ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ನಾವು ನೀರಿನ ವ್ಯವಸ್ಥೆ ಕಲ್ಪಿಸುತ್ತದೆ.

ಮುಂದುವರಿದು ಮಾತನಾಡಿದ ಅವರು ಈ ಹಿಂದೆ ಎಂದೆಂದೂ ಕಂಡರಿಯದ ಬಿಸಿಲು ತಾಪಮಾನ ಸುಮಾರು 40 ರಿಂದ 41. 42 ರ ತಾಪಮಾನ ಏರುತ್ತಿದ್ದುದರಿಂದ ಒಂದು ಕಡೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಮಳೆ ಕಣ್ಮರೆಯಾಗಿದೆ ಮೇವಿನ ಕೊರತೆ ನೀರಿನ ಕೊರತೆ ಒಂದಲ್ಲ ಒಂದು ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹಸಿರು ಕ್ರಾಂತಿ ಸ್ಪೋರ್ಟ್ಸ್ ರಿಕ್ವೆಶನ್ ಅವರ ಒಂದು ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಭಾಗದಲ್ಲಿ ಕಾಡುಪ್ರಾಣಿಗಳು ಇರುವ ಪ್ರಾಂತವನ್ನು ಹುಡುಕಿ, ಆ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕಾಡು ಪ್ರಾಣಿಗಳಿಗೆ ನೀರಿನ ದಾಹ ನಿಗೆಸುವ ಒಂದು ಪ್ರಯತ್ನ ನಮ್ಮೆಲ್ಲರ ಕರ್ತವ್ಯಕಾಡು ಪ್ರಾಣಿಗಳಿಗೆ ನೀರಿನ ಪೋಷಣೆ ಸಾರ್ವಜನಿಕರ ಸಹಕಾರವನ್ನು ಗ್ರಾಮೀಣ ಭಾಗದಲ್ಲಿನ ಈಗಿನ ತಾಪಮಾನಕ್ಕೆ ಪ್ರಾಣಿ, ಪಕ್ಷಿಗಳು ಉಳಿಸುವ ನಿಟ್ಟಿನಲ್ಲಿ ನೀರು ನೀಡಿ ಎಂಬುದಾಗಿ ತಿಳಿಸಿದರು.

ಇತ್ತೀಚೆಗೆ ಕಿಡಿಗೇಡಿಗಳಿಂದ ಕಾಡಿಗೆ ಬೆಟ್ಟದ ಬುಡಗಳಿಗೆ ಬೆಂಕಿ ಹಚ್ಚುವ ಹಿನ್ನೆಲೆಯಲ್ಲಿ ಆ ಪ್ರಾಂತ್ಯದಲ್ಲಿ ಇರುವಂತಹ ಪ್ರಾಣಿ ಪಕ್ಷಿಗಳು ಭಯಭೀತಿಗೊಂಡು ಪಟ್ಟಣಕ್ಕೆ ಬರುವಂತಹ ಸನ್ನಿವೇಶ ಉಂಟಾಗಿದೆ. ಹಾಗಾಗಿ ಮನೆಯ ಬಳಿ ಮರಗಿಡಗಳ ಬುಡದಲ್ಲಿ ನೀರು ಇಡಿ.ತಮ್ಮ ಮನೆಯ ಅಕ್ಕ ಪಕ್ಕದಲ್ಲಿ ತೋಟಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿ ತಮ್ಮ ಮನೆ ಮಕ್ಕಳಂತೆ ಕಾಣಿ ಎಂಬುದು ವೆಂಕಟೇಶ್ ತಿಳಿಸಿದರು.

ವರದಿ: ಇಮ್ರಾನ್ ಉಲ್ಲಾ. ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/crime-the-husband-killed-his-wife-

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *