Janataa24 NEWS DESK
Tumkur: ಕುಡಿಯುವ ನೀರಿನಲ್ಲಿ ಮಲತಾಯಿ ಧೋರಣೆ ಪಂಚಾಯಿತಿ ಅಧಿಕಾರಿಗಳು,ಜನಪ್ರತಿನಿಧಿಗಳು.

ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ, ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂಳೆಕೆರೆ ಗ್ರಾಮ(Sulekere Village)ದಲ್ಲಿ ಸುಮಾರು ಎರಡು ತಿಂಗಳಿನಿಂದಲೂ ಕುಡಿಯಲು ನೀರಿಲ್ಲದೆ ಜನರು ಪರಿತಪಿಸುವಂತಾಗಿದೆ, ಜೊತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಳೆಕೆರೆ ಗ್ರಾಮದಲ್ಲಿ ಅವರಿಗೆ ಬೇಕಾದಂತಹ ರಸ್ತೆಯಲ್ಲಿರುವ ಹಾಗೂ ಕುಟುಂಬಗಳ ಮನೆಗಳಿಗೆ ನೀರನ್ನು ಟ್ಯಾಂಕರ್ ಮೂಲಕ ಜನಪ್ರತಿನಿಧಿ ನೀಡುತ್ತಿದ್ದಾರೆ ಎಂಬ ದೂರು ಕೆಲ ಮೂಲಗಳಿಂದ ತಿಳಿದುಬಂದಿದೆ, ಇದರಲ್ಲಿ ಬಹಳ ಮುಖ್ಯವಾದ ವಿಚಾರ ಈ ಸೂಳೆಕೆರೆ ಗ್ರಾಮದಲ್ಲಿ 25 ರಿಂದ 30 ಮನೆ ಹೊಂದಿರುವ ಎಸ್ ಸಿ ಕಾಲೋನಿ(SC Colony)ಗೆ, ಸುಮಾರು ಎರಡರಿಂದ ಮೂರು ತಿಂಗಳಿನಿಂದಲೂ ಸರಿಯಾಗಿ ನೀರನ್ನು ಕೊಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು ಈ ಎಸ್ ಸಿ ಕಾಲೋನಿಯಲ್ಲಿ ಬಹಳಷ್ಟು ಜನ ವಿದ್ಯಾವಂತರು, ಸರ್ಕಾರಿ ಹುದ್ದೆಯಲ್ಲಿರುವವರು, ಪ್ರತಿಷ್ಠಿತ ಖಾಸಗಿ ಹುದ್ದೆಯಲ್ಲಿರುವವರು, ಯುವ ಹೋರಾಟಗಾರರು ಈ ಕಾಲೋನಿಯಲ್ಲಿ ನೆಲೆಸಿದ್ದು, ನೀರಿನ ಸಮಸ್ಯೆಯ ಬಗ್ಗೆ ಈಗಾಗಲೇ ಈ ಮೇಲ್ಕಂಡಂತೆ ಹುದ್ದೆಗಳಲ್ಲಿರುವ ಪ್ರತಿಯೊಬ್ಬರು ಹಾಗೂ ಗ್ರಾಮಸ್ಥರು ಇದರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಈ ಗ್ರಾಮಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗೆ ನೀರಿನ ಸಮಸ್ಯೆಯ ಬಗ್ಗೆ ಹೇಳಿದರೂ ಸಹ, ಎರಡರಿಂದ ಮೂರು ತಿಂಗಳಿನವರೆಗೂ ಅವರಿಗೆ ಇಷ್ಟ ಬಂದಂತೆ ನೀರನ್ನು ಕೊಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.ಹಾಗಾದರೆ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಕೆಲ ಜನಪ್ರತಿನಿಧಿ ಈ ಸೂಳೆಕೆರೆ ಗ್ರಾಮದಲ್ಲಿ ವಾಸಿಸುತ್ತಿರುವ ಎಸ್ ಸಿ ಕಾಲೋನಿಯ ಗ್ರಾಮಸ್ಥರನ್ನು ಪರಿಶಿಷ್ಟ ಜಾತಿ(Scheduled Caste) ಎಂಬ ಕಾರಣದಿಂದ ನೀರನ್ನು ಕೊಡದೆ ಸತಾಯಿಸಲು ಹೊರಟಿದ್ದಾರಾ?
ಹಾಗಾದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದುರಿಸುತ್ತಿರುವ ಗ್ರಾಮಸ್ಥರಿಗೆ ಇನ್ನಾದರೂ ನೀರಿನ ವ್ಯವಸ್ಥೆ ಕಲ್ಪಿಸುತ್ತಾರೋ ಕಾದು ನೋಡಬೇಕು.ನೀರನ್ನು ಕೊಡದೆ ಸತಾಯಿಸುತ್ತಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ವಿರುದ್ಧ ಇನ್ನೆರಡು ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಕಚೇರಿಯ ಮುಂದೆ ಉಗ್ರವಾದ ಹೋರಾಟ ನಡೆಸಲು ಕಾಲೋನಿಯ ಗ್ರಾಮಸ್ಥರು ಮುಂದಾಗಲು ಬಹುದು ಎಂಬ ಸುಳಿವು ಸಹ ಸಿಕ್ಕಿದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/this-is-the-first-time-75-voting-in-turuvekere/