Janataa24 NEWS DESK
Chikkanayakanahalli :ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶಿಲ್ದಾರ್.

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಗೀತಾ (Geetha)ಲೋಕಾಯುಕ್ತ ಬಲೆಗೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ರೈತ ಮಲ್ಲಿಕಾರ್ಜುನ್ ಗೆ ಸೇರಿದ 33 ಗುಂಟೆ ಜಮೀನನನ್ನು ಭೂ ಪರಿವರ್ತನೆ ಮಾಡಿ ಖಾತೆ ಪಹಣಿ ಮಾಡಿಕೊಡಲು 3 ಲಕ್ಷ ಲಂಚಕ್ಕೆ ರೈತನ ಬಳಿ ಬೇಡಿಕೆಯಿಟ್ಟಿದ್ದ ತಹಶಿಲ್ದಾರ್ ಗೀತಾ.
ಇವತ್ತು ಬೆಳಗ್ಗೆ 20 ಸಾವಿರ ಹಣ ಪಡೆದಿದ್ದ ತಹಶಿಲ್ದಾರ್ ಗೀತಾ. ಉಳಿದ ಹಣದಲ್ಲಿ ಇಂದು ಸಂಜೆ 30 ಸಾವಿರ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಲಾಕ್. ರೈತ ಮಲ್ಲಿಕಾರ್ಜುನ ಅವರನ್ನು ತಹಶಿಲ್ದಾರ್ ಗೀತಾ ತಮ್ಮ ಮನೆಗೆ ಕರೆಸಿಕೊಂಡು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ತಹಶಿಲ್ದಾರ್.
ತುಮಕೂರು ಲೋಕಾಯುಕ್ತ ಡಿವೈಎಸ್ ಪಿ(DySP) ರಾಮಕೃಷ್ಣ ಹಾಗೂ ಉಮಾಶಂಕರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ವೇಳೆ ಗೀತಾ ಬಲೆಗೆ ಬಿದ್ದಿದ್ದಾರೆ.
ಸದ್ಯ ಚಿಕ್ಕನಾಯಕನಹಳ್ಳಿ ತಹಶಿಲ್ದಾರ್ ಗೀತಾ ಅವರನ್ನಾ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಮುಂದುವರಿದ ತನಿಖೆ…
ಇನ್ನೆಷ್ಟು ಭ್ರಷ್ಟಾಚಾರ ಬಯಲು ಆಗುತ್ತದೆಯೋ ಕಾದು ನೋಡಬೇಕು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Pavagada: ಪಾವಗಡ ಪಟ್ಟಣದಲ್ಲಿ 9 ಲಕ್ಷದ ಬೆಲೆಬಾಳುವ ಬೆಳ್ಳಿ ಬಂಗಾರ ನಗದು ಕಳವು