ಪಾವಗಡ:ಇಮ್ರಾನ್ ಉಲ್ಲಾ.
ಪಾವಗಡ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ 2022 23 ನೇ ಸಾಲಿನ ಶೈಕ್ಷಣಿಕ ಕ್ರೀಡೆ ರಾಷ್ಟ್ರೀಯ ಸೇವಾ ಯೋಜನೆ ಸೇವಾದಳ ರೇಂಜ್ ರೋವರ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಇತ್ತೀಚೆಗೆ ಕಂಪ್ಯೂಟರ್ ಯುಗದಿಂದ ದೇಶ ಅಭಿವೃದ್ಧಿ ಹೊಂದಿರುವ ನಿಟ್ಟಿನಲ್ಲಿ ಮಕ್ಕಳು ಸಹ ಅದೇ ರೀತಿ ವಿದ್ಯಾಭ್ಯಾಸದ ವಿಭಿನ್ನ ರೀತಿಯ ಚಟುವಟಿಕೆಯಲ್ಲಿ ಅಭಿವೃದ್ಧಿಗೊಳ್ಳಬೇಕಾಗಿದೆ. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹತ್ತು ಹಲವು ಯೋಜನೆಗಳು ಮಕ್ಕಳಿಗೆ ನೀಡಿರುವುದು ಇಂದಿನ ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಬಹಳಷ್ಟು ಅನುಕೂಲ ವಾಗಿದೆ ಎಂದರು.

ನಂತರ ಎಸ್.ಜಿ. ಸಿದ್ದರಾಮಯ್ಯ.
ಕವಿ ಹಾಗೂ ಲೇಖಕರು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಆತ್ಮವಿಮರ್ಶೆ ಮಾಡಿಕೊಂಡು ತಿಳಿದುಕೊಂಡಾಗ ಮಾತ್ರ ಇವತ್ತಿನ ದಿನ ಬಾಳುತ್ತೀರಾ ಮುಂದಿನ ದಿನದಲ್ಲಿ ಭವಿಷ್ಯ ರೂಪಿಸುತ್ತೀರಾ ಇಲ್ಲದಿದ್ದರೆ ತಮ್ಮ ಜೀವನ ವ್ಯರ್ಥವಾಗುವುದು ಸತ್ಯ ಎಂಬುದು ಪ್ರತಿಯೊಬ್ಬರು ತಿಳಿದುಕೊಳ್ಳ ಬೇಕು ಎಂದರು.
ಸ್ವಸ್ಥ ಸಮಾಜ ಹಾಳು ಮಾಡುವಂತವರು ಕೇವಲ ಒಬ್ಬರಿಬ್ಬರು ಮಾತ್ರ ಇರುತ್ತಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವಲಿಂಗಪ್ಪ ಮಾತನಾಡಿ ವಿದ್ಯಾರ್ಥಿ ಜೀವನ ಸೊಗನ್ನು ಪ್ರತಿಯೊಬ್ಬರೂ ಅನುಭವಿಸಿದರೆ ಮಾತ್ರ ಜೀವನದ ಹಂಗು ತಿಳಿದುಕೊಳ್ಳಲು ಸಾದ್ಯ. ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವಂತಹ ಕಾರ್ಯಗಳನ್ನು ಇಲ್ಲಿಯ ಸಾಧಿಸಿದರೆ ಮಾತ್ರ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ.
ನಂತರ ಡಾಕ್ಟರ್ ವಸುಂಧರ ಭೂಪತಿ ವೈದ್ಯ ಹಾಗೂ ಲೇಖಕಿ ಮಾತನಾಡಿದರು.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಸಾಂಸ್ಕೃತಿಕ ಕೋಲಾಟದ ನೃತ್ಯಕ್ಕೆ ಪ್ರಾಧ್ಯಾಪಕರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಲಂಬಾಣಿ ನಿತ್ಯ ಮಾಡಿದ ವಿದ್ಯಾರ್ಥಿನಿಯರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಸಕರು ಬಕ್ಷಿಸ್ ನೀಡಿದ ವಿಶೇಷವಾಗಿತ್ತು. ವಿವಿಧ ಸಂಸ್ಕೃತಿ ಕಾರ್ಯಕ್ರಮದಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರಧಾನ ಸಹ ಮಾಡಲಾಯಿತು
ದೇವಳ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಧನಲಕ್ಷ್ಮಿ ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಜಿಪಿ ಪ್ರಮೋದ್. ರಜೆ ಸಮಿತಿಯ ಸದಸ್ಯರಾದ ರಿಜ್ವಾನ್ ಉಲ್ಲಾ .ಹನುಮೇಶ್. ಕಾಲೇಜು ಪ್ರಾಧ್ಯಾಪಕರಾದ ಕರಿಯಣ್ಣ ಕಂಪ್ಲಪ್ಪ ಚಂಸಾಗರಟ್ಟಿ ವಸಂತ್ ಕುಮಾರ್ ಸುರೇಶ್ ಬಾಬು ತಿಪ್ಪೇಸ್ವಾಮಿ ಬಾನು ಎಂಕೆ ದ್ರಾಕ್ಷಾಯಿಣಿ ರಾಜೇಶ್ವರಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಗೂ ಕಾಲೇಜಿಗೆ ಬಂದಿಗಳು ಇದ್ದರು.