Janataa24 NEWS DESK

ಪಾವಗಡ
ಹತ್ತರಿಂದ ಹದಿನೈದು ಸಾವಿರ ಮತಗಳ ಅಂತರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಗೆಲವು ಸಾಧಿಸುತ್ತದೆ ಅಭ್ಯರ್ಥಿ ನೇರಳೆಕುಂಟೆ ನಾಗೇಂದ್ರ ಕುಮಾರ್.
ಪಾವಗಡ ಸೋಮವಾರ ಬಿರುಬಿಸಿಲಿನಲ್ಲಿ ಜನ ಬಲ ತೋರಿಸುವ ಮೂಲಕ ನಾಮಪತ್ರ ಸಲ್ಲಿಸಲು ಬಂದು ಕೆ.ಆರ್. ಪಿ.ಪಿ. ಪಕ್ಷದ ಅಭ್ಯರ್ಥಿ ನೇರಳೆಕುಂಟೆ ನಾಗೇಂದ್ರ ಕುಮಾರ್.
ಸೋಮವಾರ ಪಟ್ಟಣದ ಬಿರು ಬಿಸಿಲಿನ ತಾಪಮಾನದ ಮಧ್ಯ ದಲ್ಲಿಯೂ ಸಾವಿರಾರು ಕೆ.ಆರ್.ಪಿ.ಪಿ.ಪಕ್ಷದ ಕಾರ್ಯಕರ್ತರು ಫುಟ್ಬಾಲ್ ಚಿನ್ನಯ ಗುರ್ತಿನ ಹಳದಿ ಬಣ್ಣದ ಟೋಪಿಗಳು ಹಾಗೂ ಬಾವುಟಗಳ ಎಲ್ಲಿನೋಡಿದರೂ ರಾಜಾಜಿಸುತ್ತಿದ್ದವು.

ಪಟ್ಟಣದ ಕನ್ನಕ ಪರಮೇಶ್ವರಿ ದೇವಾಲಯ ದಿಂದ ಎತ್ತಿನಗಾಡಿಯ ಮೂಲಕ ಸಾವಿರಾರು ಕಾರ್ಯಕರ್ತರೂಂದಿಗೆ ಮೆರವಣಿಗೆ ಮೂಲಕ ಹೊರಟು ನಂತರ ಬಳ್ಳಾರಿ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕರ್ತರೂಂದಿಗೆ ತಾಲೂಕು ಕಚೇರಿಗೆ ಬಂದು ನಾಮ ಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಿಸಿ ಮಾದ್ಯಮ ಬಳಿ ಮಾತನಾಡಿದ ಕೆ.ಆರ್.ಪಿ.ಪಿ ಅಭ್ಯರ್ಥಿ ನೇರಳೆಕುಂಟೆ ನಾಗೇಂದ್ರ ಕುಮಾರ್ ಮಾತನಾಡಿ ಇಂತಹ ಬಿರು ಬಿಸಿಲಿನಲ್ಲಿ ನನ್ನ ಮೇಲಿನ ಅಭಿಮಾನವಿಟ್ಟು ಬಂದಂತಹ ನನ್ನ ಜನರಿಗೆ ಮೂದಲು ಧನ್ಯವಾದಗಳು ಅರ್ಪಿಸುತ್ತೇನೆ.
ತಾಲೂಕಿನ ಜನರು ಬದಲಾವಣೆ ಬಯಸುವ ಮೂಲಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ತಮ್ಮ ಮತ ಹಾಕುವ ಮೂಲಕ ಈ ನನ್ನನ್ನು ಗೆಲುಸುತ್ತಾರೆ ಎಂದರು.
ಬೈಟ್: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಅಧ್ಯಕ್ಷ ಹೇಮಲತಾ ಮಾತನಾಡಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಅಭಿವೃದ್ಧಿ ಕಾಣದ ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಕಾಣಬೇಕು ಎಂಬುದಾಗಿ ಬಿರುಬಿಸಿಲಿನಲ್ಲಿ ಬಂದಂತಹ ಜನರೆ ಸಾಕ್ಷಿ ಯಾಗಿದ್ದು ಇಂದು ತಾವೇಲ್ಲರೂ ಗಮನಿಸಿದ್ದಿರಾ.
ಈ ಭಾಗದಲ್ಲಿ ನೇರಳೆಕುಂಟೆ ನಾಗೇಂದ್ರ ಕುಮಾರ್ ಇಂದು ನಾಮ ಪತ್ರ ಸಲ್ಲಿಸಿದ್ದಾರೆ.ಹಲವು ವರ್ಷಗಳಿಂದ ಉತ್ತಮ ಸೇವೆ ಮಾಡಿಕೊಂಡು ಬಂದಿದ್ದಾರೆ ಈ ಬಾರಿ ಅತಿಹೆಚ್ಚು ಮತಗಳು ಈ ಬಾಗದಲ್ಲಿ ಜನರು ಹಾಕುವ ಮೂಲಕ ನೇರಳೆಕುಂಟೆ ನಾಗೇಂದ್ರ ಕುಮಾರ್ ರವರನ್ನು ಜಯಗೂಳಿಸುತ್ತಾರೆ ಎಂದರು.

ಈ ವೇಳೆ ಟೈಲರ್ ಕರಿಯಣ್ಣ. ನಲಿಗಾನಹಳ್ಳಿ ಮಂಜುನಾಥ್. ಎಸ್. ಹನಮಂತರಾಯಪ್ಪ.ಬೆಳ್ಳಿಬಟ್ಲು ರೆಡ್ಡಿ.ಕಿರಣ್.ಇತರೆ ಸಾವಿರಾರು ಬೆಂಬಲಿಗರು ನಾಮ ಪತ್ರ ಸಲ್ಲಿಸುವ ವೇಳೆ ಭಾಗವಹಿಸಿದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ.