Janataa24 NEWS DESK
Turuvekere: ತಾಲೂಕು ಆಡಳಿತ ಕಚೇರಿಯಲ್ಲಿ 133 ನೇ ಅಂಬೇಡ್ಕರ್ ಜಯಂತಿ ಆಚರಣೆ

ತುರುವೇಕೆರೆ: ತಾಲೂಕು ಆಡಳಿತ ಕಚೇರಿಯಲ್ಲಿ 133 ನೇ ಅಂಬೇಡ್ಕರ್ ಜಯಂತಿ(Ambedkar Jayanthi) ಆಚರಣೆ. ತಹಸೀಲ್ದಾರ್ ವೈ ಎಂ ರೇಣು ಕುಮಾರ್(YM RenuKumar) ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮುಂದುವರೆದು ಮಾತನಾಡಿದ ಅವರು, ದೇವಸ್ಥಾನಕ್ಕೆ ಹೋಗುವ ಬದಲು ಗ್ರಂಥಾಲಯಕ್ಕೆ ಹೋಗಿ ಎನ್ನುವ ಅಂಬೇಡ್ಕರ್ ರವರು ಹೇಳಿದ ಮಾತನ್ನು ನೆನೆದು ಅವರು ರಚಿಸಿರುವ ಸಂವಿಧಾನದ ಕೆಳಗೆ ನಾವುಗಳು ಕಾರ್ಯ ನಿರ್ವಹಿಸುತಿದ್ದೇವೆ ಡಾ. ಬಿ.ಆರ್. ಅಂಬೇಡ್ಕರ್ ಶತಮಾನ ಕಂಡ ಮಹಾನ್ ಪುರುಷ. ಸೂರ್ಯ-ಚಂದ್ರ ಇರುವವರೆಗೂ ಅವರನ್ನು ದೇಶ ಸ್ಮರಿಸುತ್ತದೆ ಎಂದರು. ಇದೇ ವೇಳೆ ಉಪನ್ಯಾಸಕ ನಂಜೇಗೌಡ ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿರುವ ಬಗ್ಗೆ ಬಹಳ ಅರ್ಥಪೂರ್ಣವಾಗಿ ಕೆಲವೇ ನಿಮಿಷದಲ್ಲಿ ಈ ರೀತಿ ವಿವರಿಸಿದರು, ಅಂಬೇಡ್ಕರ್ ರವರು ಸಾಕಷ್ಟು ಕರಾಳ ನೋವು ಅನುಭವಿಸಿದ್ದರೂ, ಅವರು ಸಂವಿಧಾನ ರಚನೆ ಸಂದರ್ಭ ದ್ವೇಷ ರಹಿತವಾಗಿ ಕೆಲಸ ಮಾಡಿದ್ದಾರೆ.
ಎಲ್ಲ ಸಮಾಜದವರಿಗೂ ಸಮಾನತೆಯ ಹಕ್ಕನ್ನು ನೀಡಿರುವ ಮಹಾನ್ ಪುಣ್ಯಾತ್ಮ. ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ಭಾವ ಇರದ ಸುಂದರ ಸಮಾಜ ಹಾಗೂ ವಿಕಸಿತ ಭಾರತ ನಿರ್ಮಿಸುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬೇಕಿದೆ’ ಎಂದರು.ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಕಚೇರಿಯಲ್ಲಿ ಸಂಸ್ಥಾಪಕ ಸಿ ಎಸ್ ಮೂರ್ತಿ ಅವರ ನೇತೃತ್ವದಲ್ಲಿ ಕೂಡ ಅಂಬೇಡ್ಕರ್ ಜಯಂತಿ(Ambedkar Jayanthi)ಯನ್ನು, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು,ಇದೆ ವೇಳೆ ತುರುವೇಕೆರೆ ಪಟ್ಟಣದಲ್ಲಿರುವ ಅಂಬೇಡ್ಕರ್ ಭವನದಲ್ಲೂ ಕೂಡ ದಲಿತ ಮುಖಂಡರಗಳಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಿ, ಹ್ಯಾಪಿ ಬರ್ತ್ಡೇ ಟು ಯು ಎಂಬ ಅಂಬೇಡ್ಕರ್ ಎಂಬ ಘೋಷಣೆ ಮಾಡುತ್ತಾ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಇನ್ನು ತಾಲೂಕು ಆಡಳಿತ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿಯ ಆಚರಣೆಯಲ್ಲಿ, ಎಲ್ಲಾ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗ ಹಾಗೂ ತಾಲೂಕಿನ ವಿವಿಧಪರ ಸಂಘಟನೆ ನಾಯಕರು, ಮುಖಂಡರು, ದಲಿತ ಮುಖಂಡರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/lokasabha-2024-stone-attack-on-andhra-cm-jagan/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en