ಬೆಳಗಾವಿ: ರವಿ.ಬಿ

ಗೋಕಾಕ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮೀಣ ಠಾಣೆಗೆ ಈಚೆಗಷ್ಟೇ ವರ್ಗವಾಗಿದ್ದ ಪಿಎಸ್‌ಐ ಫಕೀರಪ್ಪ ಯಲಬೂರಪ್ಪ ತಳವಾರ (54) ಅವರು ಶುಕ್ರವಾರ ನಿಧನರಾಗಿದ್ದಾರೆ.ತೀವ್ರ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಠಾಣೆ ಮೂಲಗಳು ತಿಳಿಸಿವೆ. ವಾರದ ಹಿಂದಷ್ಟೇ ಅವರು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಿಂದ ವರ್ಗವಾಗಿ ಬಂದಿದ್ದರು. ನಗರದಲ್ಲಿ ಬಾಡಿಗೆ ರೂಮ್ ಪಡೆದು ಒಬ್ಬರೇ ವಾಸವಾಗಿದ್ದರು.
ಗುರುವಾರ ರಾತ್ರಿ ನಿದ್ರೆಗೆ ಜಾರಿದವರು ಶುಕ್ರವಾರ ಮಧ್ಯಾಹ್ನದವರೆಗೂ ರೂಮಿನಿಂದ ಹೊರಗೆ ಬರಲಿಲ್ಲ. ಮೊಬೈಲ್ ಕರೆ ಕೂಡ ಸ್ವೀಕರಿಸಲಿಲ್ಲ. ಸಿಬ್ಬಂದಿ ರೂಮಿನ ಬಳಿ ಬಂದು ಕಿಟಕಿ ಮೂಲಕ ಗಮನಿಸಿದಾಗ ವಿಷಯ ಗೊತ್ತಾಗಿದೆ.