Janataa24 NEWS DESK

ಪಾವಗಡ: ತಾಲೂಕಿನ ಗಡಿಭಾಗದ ಕೊಡು ಮುಡುಗು ಗ್ರಾಮ ಪಂಚಾಯತಿ ಕಟ್ಟಡ ಮೇಲೆ ಸರ್ಕಾರದ ಆದೇಶದಂತೆ ಪ್ರತಿದಿನ ಕಚೇರಿಯ ಕಟ್ಟಡದ ಮೇಲೆ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸುವ ಒಂದು ಕಾನೂನು ಸರಿ ಜಾರಿ ಮಾಡಿರುವ ಹಿನ್ನೆಲೆಯಲ್ಲಿ.
ಪ್ರತಿದಿನ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸಿ ತದನಂತರ ಸಂಜೆ ಕಚೇರಿಯ ವೇಳೆ ಮುಗಿದ ನಂತರ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಬೆರಗುಗೊಳಿಸುವ ಪದ್ಧತಿಯನ್ನು ಇತ್ತೀಚೆಗೆ ಜಾರಿ ಮಾಡಿದ್ದ ಸರ್ಕಾರ.
ಬಹುತೇಕ ಕಡೆ ಇದನ್ನು ಸರಿಯಾಗಿ ಪಾಲಿಸದೆ ಅಧಿಕಾರಿಗಳು ಎಡವಟ್ಟು ಮಾಡಿಕೊಳ್ಳಲು ಮುಂದಾಗಿರುವ ಘಟನೆಗಳು ನಾವೆಲ್ಲರೂ ಗಮನಿಸಿದ್ದೆವೆ.

ಅದೇ ರೀತಿಯಲ್ಲಿ ತಾಲೂಕಿನ ಕೊಡುಮಡಗು ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಮೇಲೆ ಹರಿದಿರುವ ತ್ರಿವರ್ಣ ಧ್ವಜವನ್ನು ಹಾಕಿ ಅಗೌರವ ಸಲ್ಲಿಸಿರುವ ಘಟನೆ ಕಂಡು ಬಂದಿದೆ.
ಇತ್ತೀಚಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೆಲವೊಂದು ಪಂಚಾಯತಿಗಳಿಗೆ ಇಷ್ಟ ಬಂದಂತೆ ಕಚೇರಿಗೆ ಬಂದು ಹೋಗುವ ವೇಳೆಯಲ್ಲಿ ಇಂತಹ ಘಟನೆಗಳು ಎಲ್ಲಿ ಗಮನಿಸಲು ಸಾಧ್ಯವೇ ಎಂಬ ಸಾರ್ವಜನಿಕರ ಪ್ರಶ್ನೆ.
ತತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಹರಿದಿರುವ ತ್ರಿವರ್ಣ ಧ್ವಜವನ್ನು ತಕ್ಷಣವೇ ಬದಲಾಯಿಸಿ ಗೌರವ ಪಾತ್ರರಾಗಬೇಕೆಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ
ಪಾವಗಡ: ಇಮ್ರಾನ್ ಉಲ್ಲಾ