Document

ಸಿಎಂ ಬೊಮ್ಮಾಯಿ ವಿಶ್ವಾಸ:ಸ್ಪಷ್ಟ ಬಹುಮತಕ್ಕಿಂತ ಒಂದಷ್ಟು ಸ್ಥಾನ ಹೆಚ್ಚು ಬರಲಿದೆ

Janataa24 NEWS DESK

ಮೈಸೂರು

ಮೈಸೂರು ವರುಣ ಬಹಳ ಉತ್ತಮಗೊಂಡಿದೆ. ಎಲ್ಲಾ ವರ್ಗದ ಜನರು ನಮ್ಮ ಪರವಾಗಿದ್ದಾರೆ. ನಮಗೆ ಬಹಳ ಉತ್ತಮವಾದ ಸಂಖ್ಯೆ ಬರುವ ನಿರೀಕ್ಷೆಯಿದೆ. ಸ್ಪಷ್ಟ ಬಹುಮತಕ್ಕಿಂತ ಒಂದಷ್ಟು ಸ್ಥಾನ ಹೆಚ್ಚಾಗಿಯೆ ಬರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Screenshot 2023 05 05 20 10 04 25

ರಾಜ್ಯದ ಹನುಮ ದೇವಾಲಯಗಳ ಅಭಿವೃದ್ಧಿ ಮಾಡ್ತಿವಿ ಎಂಬ ಕಾಂಗ್ರೆಸ್ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎಂಬುದಕ್ಕೆ ಈ ಭರವಸೆಯೆ ಸಾಕ್ಷಿ. ಮೊದಲು ತಪ್ಪು ಮಾಡುವುದು ನಂತರ ಅದಕ್ಕೆ ಓವರ್ ರಿಯಾಕ್ಟ್ ಮಾಡುವುದು ಎರಡೂ ತಪ್ಪು. ಈ ಕೆಲಸವನ್ನು ಈಗ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನ ಮಾತುಗಳಲ್ಲಿ ಅಪ್ರಾಮಾಣಿಕತೆ ಮತ್ತು ಅಭದ್ರತೆ ಎದ್ದು ಕಾಣುತ್ತಿದೆ ಎಂದರು.

ಸಿದ್ದರಾಮಯ್ಯ ಮೊದಲು ಒಂದೇ ದಿನ ಕ್ಷೇತ್ರಕ್ಕೆ ಬರ್ತಿನಿ ಅಂದರು. ಈಗ ಸ್ಟಾರ್ ಗಳ ಸಮೇತ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದ ಅವರು, ಲಿಂಗಾಯತರ ವಿಚಾರದಲ್ಲಿ ಸಿದ್ದರಾಮಯ್ಯ ಸ್ಪಷ್ಟೀಕರಣಕ್ಕೂ ತಿರುಗೇಟು ನೀಡಿ, ಮೊದಲು ಡ್ಯಾಮೇಜ್ ಮಾಡುವುದು ನಂತರ ಡ್ಯಾಮೇಜ್ ಕಂಟ್ರೋಲ್ ಗೆ ಯತ್ನಿಸುವುದು. ಇದೆಲ್ಲಾ ಈಗ ನಡೆಯಲ್ಲ. ಕ್ಯಾಮರಾ ಇರುವುದರಿಂದ ಜನರು ಎಲ್ಲವನ್ನೂ ನೋಡುತ್ತಾರೆ. ಈಗ ಸ್ಪಷ್ಟೀಕರಣಕ್ಕೆ ಬೆಲೆ ಇಲ್ಲ ಎಂದರು.

Document

Leave a Reply

Your email address will not be published. Required fields are marked *