Janataa24 NEWS DESK

ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಏಕ ಏಕಿ ಬೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಿಸಿದ ತಹಶಿಲ್ದಾರ್. ಖುದ್ದು ಆಸ್ಪತ್ರೆಯ
ಶೌಚಾಲಯಗಳ ಒಳಗೆ ಹೋಗಿ ಸ್ವಚ್ಚತೆ ಬಗ್ಗೆ ಪರಿಶೀಲನೆ ಮಾಡಿ ನಂತರ ರೋಗಿಗಳಿಗೆ ಮಾತನಾಡಿಸಿ ಮಾಹಿತಿ ಪಡೆದರು.
ನಂತರ ಆಸ್ಪತ್ರೆಯ ಆಡಳಿತ ವೈದ್ಯಧಿಕಾರಿ ಡಾ.ಕಿರಣ್ ಗೆ ಮಾತನಾಡಿಸಿ ಸ್ವಚ್ಚತೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು .ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೋಂದರೆ ಯಾಗದ ರೀತಿಯಲ್ಲಿ ನೋಡಿಕೊಳ್ಳ ಬೇಕು.ಯಾವುದೇ ರೋಗಿಗಳು ಬಂದರು ನಿರ್ಲಕ್ಷ್ಯ ತೋರದೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು.ವೈದ್ಯರು ಸರಿಯಾದ ವೇಳೆಗೆ ಬಂದು ಕರ್ತವ್ಯ ನಿರ್ವಹಿಸಲು ಸೂಚಿಸಿದರು.
ರಾತ್ರಿ ಪಾಳೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ವೈದ್ಯರು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸೂಚಿಸಿ ಎಂದರು.
ರೋಗಿಗಳಿಗೆ ಕುಡಿಯುವ ನೀರು ಮತ್ತು ಆಸನದ ವ್ಯವಸ್ಥೆ ಕಲ್ಪಸಿ ಎಂದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ.