ಸರಣಿ ಅಪಘಾತ ಸ್ಥಳದಲ್ಲೇ ಓರ್ವ ಯುವಕ ಸಾವು.
ತುರುವೇಕೆರೆ:ಮಂಜುನಾಥ್

ಇಂದು ಬೆಳಗ್ಗೆ ಸರಿ ಸುಮಾರು 10 ಗಂಟೆಗೆ ಸಂಗ್ಲಾಪುರ ಗೇಟ್ ಬಳಿ
ಇರುವ ಉಣ್ಣೆಬಸವೇಶ್ವರ ದೇವಸ್ಥಾನದ ಸ್ವಲ್ಪ ದೂರದಲ್ಲಿ ಹಾದು ಹೋಗಿರುವ 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ,
ಮಾಯಸಂದ್ರ ಕಡೆಯಿಂದ ಬರುತ್ತಿದ್ದ ಮಹೇಂದ್ರ ಜೀತೋ ಎಂಬ ನಾಲ್ಕು ಚಕ್ರದ ವಾಹನ ಅತಿ ವೇಗವಾಗಿ ಬಂದು,
ತುರುವೇಕೆರೆ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ರಭಸವಾಗಿ ಗುದ್ದಿದ್ದರಿಂದ, ಸ್ಥಳದಲ್ಲಿ ದ್ವಿಚಕ್ರವಾಹನ ಸವಾರ ಮೃತಪಟ್ಟಿದ್ದಾನೆ.

ಮೃತ ಯುವಕ ತುರುವೇಕೆರೆ ತಾಲೂಕಿನ ದಬ್ಬೇಗಟ್ಟ ಗ್ರಾಮದ ಸುರೇಶ್ ಮತ್ತು ಭಾಗ್ಯಮ್ಮ ಎಂಬುವರ ಒಬ್ಬನೇ ಮಗನಾಗಿದ್ದು, ಈತನ ಹೆಸರು ತಿಲಕ್ (22 ವರ್ಷ) ಎಂದು ತಿಳಿದುಬಂದಿದೆ.

ಇನ್ನು ನಾಲ್ಕು ಚಕ್ರದ ವಾಹನದ ಹಿಂದೆ ಬರುತ್ತಿದ್ದ ಇನ್ನೊಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ವಾಹನ ಸವಾರರಿದ್ದು ಅದರಲ್ಲಿ ಒಬ್ಬ ಯುವಕನಿಗೆ ಗಂಭೀರವಾದ ಗಾಯವಾಗಿದ್ದು ಆತನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆ ಈ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನಗಳು ಪೂರ್ತಿ ಜಕಂಗೊಂಡಿವೆ, ಅಪಘಾತ ನಡೆದ ಸ್ಥಳದಿಂದ ಚಾಲಕ ನಾಪತ್ತೆಯಾಗಿದ್ದು ಇನ್ನು ಸ್ಥಳಕ್ಕೆ ಧಾವಿಸಿದ ಆರಕ್ಷಕ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಟ್ಟಾರೆ ಈ ಅಪಘಾತ ನಡೆದ 150 ಎ ರಾಷ್ಟ್ರೀಯ ಹೆದ್ದಾರಿ ತುಂಬಾ ಕಿರಿದಾಗಿದ್ದು ಇಲ್ಲಿಯವರೆಗೂ ಸುಮಾರು ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ, ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
