
ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮರುಚುನಾವಣೆ: ಶರತ್ ಕುಮಾರ್.ಶ್ರೀನಿವಾಸ್ ಆಯ್ಕೆ.
ಪಾವಗಡ: ಇಮ್ರಾನ್ ಉಲ್ಲಾ
ಪಾವಗಡ ತಾಲೂಕಿನ ವಳ್ಳೂರು ಗ್ರಾಮ ಪಂಚಾಯತಿಯ ಬಳಸಮುದ್ರ ಗ್ರಾಮದ ಎರಡು ಸದಸ್ಯರ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಮರುಚುನಾವಣೆ ಶರತ್ ಕುಮಾರ್.ಶ್ರೀನಿವಾಸ್ ಆಯ್ಕೆ.
ಬಳಸಮುದ್ರ ಗ್ರಾ.ಪಂ. ಉಪ ಚುನಾವಣೆಯಲ್ಲಿ ಸದಸ್ಯನಾಗಿ ಶರತ್ ಬಾಬು ಆಯ್ಕೆಯಾದರೆ ಇನ್ನೊಂದು ದುದ್ದೆಗೆ ಅವಿರೋಧವಾಗಿ ಶ್ರೀನಿವಾಸ್ ಆಯ್ಕೆ ಯಾಗಿದ್ದಾರೆ.
ಚುನಾವಣೆ ಅಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ
ಪಾವಗಡ ತಾಲೂಕಿನ ವಳ್ಳೂರು ಪಂಚಾಯತಿಯ ವ್ಯಾಪ್ತಿಯ ಬಳಸಮುದ್ರ ಗ್ರಾಮ ಪಂಚಾಯತಿ ಸದಸ್ಯ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಆ ಸ್ಥಾನಕ್ಕೆ ಚುನಾವಣೆ ನಡೆಯಿತು.
ತೆರವಾದ ಸ್ಥಾನಕ್ಕೆ ನರಸಿಂಹ ಮತ್ತು ಶರತ್ ಬಾಬು ಎಂಬುವವರ ಇಬ್ಬರ ನಡುವೆ ನಡೆದ ಚುನಾವಣೆಯ ಪೈಪೋಟಿ ಯಲ್ಲಿ ಶರತ್ ಬಾಬು ಜಯಗಳಿಸಿದ್ದಾರೆ.
ಬಳಸಮುದ್ರ ಗ್ರಾಮದಲ್ಲಿ ಒಟ್ಟು ಮತದಾರರ ಸಂಖ್ಯೆ 690 ಜನ ಇದ್ದು ಮಂಗಳವಾರ ನಡೆದ ಚುನಾವಣೆಯಲ್ಲಿ 632 ಜನ ಮತದಾನ ಹಾಕಲಾಗಿದೆ.
ನರಸಿಂಹ 209 ಮತಪಡೆದರೆ ಶರತ್ ಬಾಬು 416 ಮತ ಪಡೆದು ಜಯಶೀಲರಾಗಿದ್ದಾರೆ.
ಬೈಟ್:-ಗೆಲವು ಸಾಧಿಸಿದ ಅಭ್ಯರ್ಥಿ ಶರದ್ ಬಾಬು ಮಾತನಾಡಿ ನನ್ನ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.ಮುಂದೆ ಎರೆಡುವರೇ ವರ್ಷಗಳ ಕಾಲದಲ್ಲಿ ಗ್ರಾಮದ ಮೂಲಭೂತ ಸಮಸ್ಯೆಗಳಾದ ನೀರಿನ ವ್ಯವಸ್ಥೆ ರಸ್ತೆ ಚರಂಡಿ ಮನೆಗಳ ನಿರ್ಮಾಣದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಚುನಾವಣೆ ಅಧಿಕಾರಿಯಾಗಿ ಪ್ರದೀಪ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ತಹಶಿಲ್ದಾರ್ ಶ್ರೀಮತಿ ಸುಜಾತ. ಶಿರಸ್ತೆದಾರ್ ಮೂರ್ತಿ.ಕರಿಯಣ್ಣ. ಗ್ರಾಮದ ಮುಖಂಡರಾದ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ಮಾಜಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರು ಜಿ ಎನ್ ಗೋವಿಂದಪ್ಪ. ಶ್ರೀನಿವಾಸ್ ವೆಂಕಟಪ್ಪ. ಸಕ್ರಪ್ಪ. ಇತರರು ಇದ್ದರು.