ತುರುವೇಕೆರೆ: ಮಂಜುನಾಥ್
ತುರುವೇಕೆರೆ ತಾಲೂಕಿನ ಗಡಿ ಭಾಗದಲ್ಲಿರುವ ಅಡವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿಕುಮಾರ್ ಎಂಬುವರು ಅಂಗವಿಕಲ ಮಾಶಾಸನ ಖಾತೆ ಪರಬಾರೆ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವ ಅಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರಂಗನ ಹಟ್ಟಿ ಗ್ರಾಮದ ಮುರುಳಿಧರ್ ಎಂಬ ವ್ಯಕ್ತಿಯ ಸುಳ್ಳು ಮಾತನ್ನು ಕೇಳಿ ತಾಲೂಕಿನ ಶಾಸಕರಾದ ಮಸಾಲ ಜೈರಾಮ್ ರವರು ಅಡವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ರವಿಕುಮಾರ್ ಅವರಿಗೆ ಮೊದಲು ಸನ್ಮಾನ ಮಾಡಿ ನಂತರ ಸಸ್ಪೆಂಡ್ ಮಾಡಿ ಎಂದು ಶಾಸಕರು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಸದರಿ ವ್ಯಕ್ತಿಯ ಬಗ್ಗೆ ದೂರವಾಣಿ ಮೂಲಕ ದೂರು ನೀಡಿ ಕೂಡಲೇ ಕರ್ತವ್ಯದಿಂದ ಅಮಾನತು ಮಾಡಿ ಎಂದು ತಪ್ಪು ನಿರ್ಧಾರ ಮಾಡಿದ್ದಾರೆ.

ಎಂದು ಅಡವನಹಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಶಾಸಕರ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಇಂದು ತುರುವೇಕೆರೆ ಪಟ್ಟಣದ ತಾಲೂಕು ಪಂಚಾಯಿತಿಯ ಒಳಾಂಗಣದಲ್ಲಿ ಅಡವನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಊರಿನ ಗ್ರಾಮಸ್ಥರುಗಳು ಮುಖಂಡರುಗಳು ಶಾಸಕರ ವಿರುದ್ಧ ಮತ್ತು ಸುಳ್ಳು ಹೇಳಿದ ರಂಗನಟ್ಟಿ ಗ್ರಾಮದ ಮುರಳಿಧರ್ ಎಂಬುವರ ವಿರುದ್ಧ ಧರಣಿ ಕುಳಿತರು.

ಈ ಧರಣಿಯ ವೇಳೆ ಮಾತನಾಡಿದ ಮುಖಂಡರಾದ ಸಿದ್ದಗಂಗಯ್ಯ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ ಮಾತನಾಡಿ ಶಾಸಕರು ಒಬ್ಬ ವ್ಯಕ್ತಿಯ ಮಾತನ್ನು ಕೇಳಿ ಯಾವ ಲಂಚಕ್ಕೂ ಬೇಡಿಕೆ ಇಡದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ಕಾರ್ಯದರ್ಶಿ ರವಿಕುಮಾರ್ ಮೇಲೆ ಸುಳ್ಳು ಆರೋಪ ಮಾಡಿ ಅಮಾನತಿಗೆ ಶಿಫಾರಸು ಮಾಡಿರುವುದು ನಮ್ಮೆಲ್ಲರಿಗೂ ಬೇಸರ ತಂದಿದೆ.

ದಯಮಾಡಿ ಶಾಸಕರು ಸರಿಯಾದ ಸತ್ಯಾಂಶ ತಿಳಿದು ನಂತರ ಕ್ರಮ ಕೈಗೊಳ್ಳಬೇಕು ಈ ರೀತಿ ನೇರವಾಗಿ ಒಬ್ಬ ನಿಷ್ಠಾವಂತ ಸರ್ಕಾರಿ ಅಧಿಕಾರಿಯ ಬಗ್ಗೆ ದಿನಕ್ಕೊಂದು ಪಕ್ಷ ಬದಲಾವಣೆ ಮಾಡುವ ಹೆಚ್ಚು ಸುಳ್ಳು ಹೇಳುವ ವ್ಯಕ್ತಿಯಾದ ಮುರುಳಿಧರ್ ಎಂಬ ಒಬ್ಬ ವ್ಯಕ್ತಿ ಮಾತಿಗೆ ಶಾಸಕರು ಮಣೆ ಹಾಕಿದ್ದಾರೆ.

ಹಾಗಾದರೆ ಅಡವನಹಳ್ಳಿ ಗ್ರಾಮ ಪಂಚಾಯಿತಿಗೆ ಬರುವ ಎಲ್ಲಾ ಗ್ರಾಮದ ಗ್ರಾಮಸ್ಥರು ಮತ್ತು ಹಾಲಿ ಸದಸ್ಯರು ನಾವು ಕೂಡ ಒಬ್ಬ ವ್ಯಕ್ತಿಯ ಬಗ್ಗೆ ಹೇಳುತ್ತೇವೆ ತಾಲೂಕಿನ ಶಾಸಕರಾದ ನೀವುಗಳು ಆ ಸುಳ್ಳು ಹೇಳಿಕೊಂಡು ಸರ್ಕಾರಿ ಅಧಿಕಾರಿಗೆ ಲಂಚದ ಆರೋಪ ವರಿಸಿದ ಆ ವ್ಯಕ್ತಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರ ಎಂದು ಮಾಧ್ಯಮದ ಮುಖೇನ ಶಾಸಕರಿಗೆ ನೇರವಾದ ಪ್ರಶ್ನೆ ಮಾಡಿದರು. ನಂತರ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ಸತೀಶ್ ರವರಿಗೆ ಮನವಿ ಪತ್ರ ನೀಡಿದರು ಈ ಸಂದರ್ಭದಲ್ಲಿ ಅಡವನಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯರಾದ ಕೃಷ್ಣಮೂರ್ತಿ ರಾಮಚಂದ್ರಯ್ಯ ಮುಖಂಡರಾದ ಮಂಜುನಾಥ್. ಮಾರಸಂದ್ರ ದೊಡ್ಡಯ್ಯ. ಮಾರಸಂದ್ರ ಬೇಬೇಸ್. ತಿಮ್ಮರಾಜು. ಶ್ರೀನಿವಾಸ್. ಕೃಷ್ಣಮೂರ್ತಿ ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.