Document

ರಾಕ್ಷಸ ರಾಜಕೀಯಕ್ಕೆ ಕೊನೆ ಎಳೆಯಬೇಕು:HDK ಇಂದು ಮಧುಗಿರಿಯಲ್ಲಿ ಅಬ್ಬರದ ಭಾಷಣ

Janataa24 NEWS DESK

IMG 20230409 WA0020

ಕ್ಷೇತ್ರದ ಋಣ  ನನ್ನ ಮೇಲಿದೆ ದತ್ತು ಪಡೆದು ಕ್ಷೇತ್ರ ಅಭಿವೃದ್ದಿ ಮಾಡುವೆ, ರಾಕ್ಷಸ ರಾಜಕೀಯಕ್ಕೆ ಕೊನೆ ಎಳೆಯಬೇಕು, ಮಧುಗಿರಿಯ ಜೆಡಿಎಸ್ ಕಾರ್ಯಕ್ರಮದಲ್ಲಿ : “ಕುಮಾರಣ್ಣ”


ಮಧುಗಿರಿಯಲ್ಲಿ  ಸುಮಾರು 6000ಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ಮೂಲಕ ಜೆಡಿಎಸ್ ಸೇರ್ಪಡೆ ಹಾಗೂ ಸಮಾವೇಶ ಕಾರ್ಯಕ್ರಮ ಯಶಸ್ವಿ …



ಮಧುಗಿರಿ: ಕ್ಷೇತ್ರದ ಹಾಲಿ ಶಾಸಕರಾದ ಎಂ ವಿ  ವೀರಭದ್ರಯ್ಯ  ರವರ ನಿವಾಸ ಡಿ  ಕೈಮರದಲ್ಲಿ  ಹಮ್ಮಿಕೊಂಡಿದ್ದ   ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ  ಸೇರ್ಪಡೆ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ದೀಪಾ ಬೆಳಗ್ಗೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

IMG 20230409 WA0019



ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಹಲವಾರು ಪಕ್ಷಗಳಲ್ಲಿ ಸೇವೆ ಸಲ್ಲಿಸಿದ ಜನಸೇವಕರು ಸಮಾಜ ಸೇವಕರು  ಹಾಗೂ ಹಲವಾರು ಸ್ಥಳೀಯ  ಸಂಸ್ಥೆಗಳ ಚುನಾಯಿತ ಸದಸ್ಯರುಗಳು ಸುಮಾರು 2000ಕ್ಕು   ಹೆಚ್ಚು ಜನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು  ವೀರಭದ್ರಯ್ಯ ರವರ ಚುನಾವಣಾ  ಬೆಂಬಲಕ್ಕೆ ನಿಂತು  ಜೆಡಿಎಸ್ ಪಕ್ಷ ಸೇರ್ಪಡೆ ಆಗಿದ್ದು  ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.




ಮಳೆಯ ಆಧಾರದಲ್ಲಿ ಜೀವನ ಮಾಡುವ ಕ್ಷೇತ್ರ ಇದು  ತೀರ ಬಡಪೀಡಿತ ಪ್ರದೇಶ ಬೋರ್ವೆಲ್ ಇದ್ದರೆ ಮಾತ್ರ ರೈತರು ಕೃಷಿ ಮಾಡಬಹುದು ಆದ್ದರಿಂದ ರೈತರಿಗಾಗಿ ಸ್ವಾಶ್ವತ ನೀರಿನ ಪರಿಹಾರ ರೂಪಿಸಬೇಕು,ರಾಜ್ಯದಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸುಮಾರು ಎರಡುವರೆ ಲಕ್ಷ ಕೋಟಿ ಹಣ ಬೇಕು  ಅದಕ್ಕೆ ಐದು ವರ್ಷದ ಸ್ವತಂತ್ರ ಸರ್ಕಾರದ  ಅಧಿಕಾರ ನನಗೆ ಕೊಡಿ,ಉರಿಬಿಸಿಲಿನಲ್ಲಿ ನಾಲ್ಕು ತಿಂಗಳಲ್ಲಿ ರಾಜ್ಯ ವ್ಯಾಪ್ತಿ ಓಡಾಡಿ  ಬಡವರಿಗಾಗಿ ಬದುಕು ಕಟ್ಟುವುದಕ್ಕೆ  ಕೆಲಸ ಮಾಡುತ್ತ ಬಂದಿದೆನಿ, ಬಡವರಿಗಾಗಿಯೇ ಪಂಚರತ್ನ ಯೋಜನೆ ತಂದಿದ್ದು ಅಧಿಕಾರಕ್ಕೆ ಬಂದ ಕೂಡಲೇ ಪಂಚಾತ್ಮ ಯೋಜನೆಯ ಜಾರಿಯಾಗುತ್ತೆ ಆದ್ದರಿಂದ ನಮ್ಮ ಪಕ್ಷದ ಕ್ಷೇತ್ರದ ಅಭ್ಯರ್ಥಿ ವೀರಭದ್ರಯ್ಯ ರವರ  ಗೆಲುವು ತುಂಬಾನೇ ಮುಖ್ಯ  ಈ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಕೊಂಡವಾಡಿ ಚಂದ್ರಶೇಖರ್ ಮತ್ತು  ಬೆಂಬಲಿಗರು, ಎಸ್ ಡಿ ಕೃಷ್ಣಪ್ಪ ರವರ ಅಭಿಮಾನಿಗಳು ಹಲವು ಪಕ್ಷಗಳ ಮುಖಂಡರು ಪಕ್ಷ ಸೇರ್ಪಡೆಯಾಗಿದ್ದು  ಎಲ್ಲರೂ ಅವರ ಮನೆಗೆ  ಮರಳಿ, ಮತ್ತೆ ಮನೆಗೆ ಬಂದಂತೆ. 2008 ರ ಚುನಾವಣಾ ಋಣ  ನನ್ನ  ಮೇಲಿದೆ ಸಂಪೂರ್ಣ ಅಧಿಕಾರ ಸಿಗದಿರುವುದರಿಂದ ಅಭಿವೃದ್ಧಿಪಡಿಸಲಾಗಿಲ್ಲ ಆದ್ದರಿಂದ ಈ ಬಾರಿ ಸಂಪೂರ್ಣ ಅಧಿಕಾರ ಕೊಡಿ ನಾನು ದತ್ತು ಪಡೆದಾರರು ಕ್ಷೇತ್ರ ಅಭಿವೃದ್ಧಿ ಮಾಡುವೆ ಎಂದರು.

IMG 20230409 WA0022




ಬಾಕ್ಸ್ (ಮಾಜಿ ಶಾಸಕ ರಾಜಣ್ಣನಿಗೆ  ಪರೋಕ್ಷಕವಾಗಿ ಟಾಂಗ್  ಕೊಟ್ಟ  ಕುಮಾರಸ್ವಾಮಿ   : ಅಪೇಕ್ಸ್  ಬ್ಯಾಂಕ್ ಹಗರಣ ಬಯಲಾಗಿ ಜೈಲಿಗೆ ಹೋಗಬೇಕಿದ್ದ ವ್ಯಕ್ತಿಗೆ  ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ  ರಕ್ಷಣೆ ಕೊಟ್ಟು    ಶ್ರೀರಕ್ಷೆಯಾದ ಬಿಜೆಪಿ ಸರ್ಕಾರ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ  ನಾಯಕ ಸಮಾಜದ ಮತಗಳು ಮಾತ್ರ  ಬೇಕು ಅಷ್ಟೇ ನಾಯಕ  ಸಮಾಜ ಗುರುಗಳ ಕುಟುಂಬದ  ರಕ್ಷಣೆ ಬೇಡ,ಕಳೆದ ಸಂಸದೀಯ ಚುನಾವಣಾ ಸಂದರ್ಭದಲ್ಲಿ ದೇಶದ ಒಬ್ಬ ಮಾಜಿ ಪ್ರಧಾನಿಯ ಸೋಲಿಗೆ ಕಾರಣಕರ್ತರಾಗಿ  ಹಾಗೂ ಅವರ ಸಾವು ಬಯಸಿದ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕು, ಕ್ಷೇತ್ರದಲ್ಲಿ ರಾಕ್ಷಸಿಯ ರಾಜಕೀಯಕ್ಕೆ ಕೊನೆಯಲೆಯ  ಬೇಕು ಎಂದು ಸಮಾವೇಶದಲ್ಲಿ ಟಾಂಗ್ ಕೊಟ್ಟರು).




ಶಾಸಕರಾದ ವೀರಭದ್ರಯ್ಯ ಮಾತನಾಡಿ,  ಕೊಂಡವಾಡಿ  ಚಂದ್ರಶೇಖರ್,ಎಸ್, ಡಿ  ಕೃಷ್ಣಪ್ಪ ಇನ್ನು ಹಲವು ಮುಖಂಡರ ನೇತೃತ್ವದಲ್ಲಿ  ಜಾತ್ಯಾತೀತ ಜನತಾದಳ ಪಕ್ಷದ ಸಿದ್ಧಾಂತ ಕುಮಾರಸ್ವಾಮಿ ಅವರ ಮಾರ್ಗದರ್ಶನ ಬೆಂಬಲಿಸಿ ಕಾಂಗ್ರೆಸ್ ಬಿಜೆಪಿ ಪಕ್ಷ ತೊರೆದು ಬೃಹತ್ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. 

 


 ಪ್ರಾದೇಶಿಕ ಪಕ್ಷವಾಗಿದ್ದರೂ ಸಹ   ದೇಶಕ್ಕೆ ಪ್ರಧಾನಿ ಕೊಟ್ಟಿದ್ದು ಇದೇ ನಮ್ಮ ಜಾತ್ಯತೀತ ಜನತಾದಳ ಪಕ್ಷ ನಾವು ಹೆಮ್ಮೆಯಿಂದ ಹೇಳಬಹುದು, ಸನ್ಮಾನ್ಯ ಎಚ್ ಡಿ ದೇವೇಗೌಡರು ರಾಜ್ಯದ  ಮುಖ್ಯಮಂತ್ರಿಗಳಾಗಿ,ದೇಶದ  ಪ್ರಧಾನಮಂತ್ರಿಗಳಾಗಿ ಹತ್ತು ಹಲವು ಜನಉಪಯೋಗಿ ಕೆಲಸ ಕಾರ್ಯಗಳನ್ನು ಮಾಡಿರುವುದು ಒಂದು ಇತಿಹಾಸದಂತೆ  ನಾವು ನೋಡಬಹುದು, ಗ್ರಾಮೀಣ ಭಾಗದ ಬದುಕನ್ನು ಹಸಿನ ಗಳಿಸುವುದಕ್ಕೆ ಈ ಪಂಚ ರತ್ನ ಯೋಜನೆ  ಮಾಡಿರುವುದು ಈ ಯೋಜನೆಯಲ್ಲಿ ಆರೋಗ್ಯಕ್ಕೆ, ಶಿಕ್ಷಣಕ್ಕೆ, ವಿದ್ಯಾಭ್ಯಾಸಕ್ಕೆ  ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡಲು, ಪ್ರತಿ ಮನೆ ಮನೆಯ ಸಮಸ್ಯೆ ನೀಗಿಸುವುದಕ್ಕೆ ಈ ಯೋಜನೆಯು ಒಳಗುಂದಿದೆ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ವಿಧವೆಯರ ಮಾಸಾಸ  ಪಿಂಚಣಿ 800 ರಿಂದ 2,500 ಕ್ಕೆ ಏರಿಕೆ,ರೈತರ, ಶ್ರೀ ಶಕ್ತಿ ಸಂಘ ಸಾಲಗಳ ಮನ್ನಾ ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತದೆ, ಮುಖ್ಯವಾಗಿ ಮಧುಗಿರಿ  ಜಿಲ್ಲೆ ಯ ಕನಸು ನನಸಾಗುತ್ತದೆ ಆಗ  ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ  ಎಂದು ಹೇಳಿದರು.

IMG 20230409 WA0021




ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ನಾನು  ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಬರಬೇಕಾದರೆ ಈ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್  ಆಕಾಂಕ್ಷಿಯಾಗಿದ್ದೆ, ಕಾಂಗ್ರೆಸ್ ನ ಹೈಕಮಾಂಡ್ ಸೌಜನ್ಯಕ್ಕಾದರೂ ಮಾತನಾಡಿಸಿಲ್ಲ ಏಕಾಏಕಿ ಅಭ್ಯರ್ಥಿಯನ್ನು ಘೋಷಿಸಿದರು  ಅನಿವಾರ್ಯ ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೇನೆ, ಏಕೆಂದರೆ ಈ ಹಿಂದೆ ಇದೆ   ಜನತಾ ದಳದಿಂದಲೇ ನಾನು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿದ್ದೆ, ಜಿಲ್ಲಾ ಪಂಚಾಯತಿಯ ಟಿಕೆಟ್ ಸಹಾ ಲಬಿಸಿತ್ತು ಆಗ ತಾನೇ ನನ್ನ ರಾಜಕೀಯ ಪ್ರವೇಶವಾಗಿತ್ತು, ರಾಜಕೀಯ ಪಕ್ಷದಲ್ಲಿ   ನುಡಿದಂತೆ ನಡೆಯುವ ವ್ಯಕ್ತಿ ನಮ್ನ  ಕುಮಾರಣ್ಣ ಈ ಹಿಂದೆ ರಾಜ್ಯಕ್ಕೆ ಅಪಾರ ಕೊಡುಗೆಗಳು  ಕೊಟ್ಟಿರುವುದು ರೈತರ ಸಾಲ ಮನ್ನಾ, ಸ್ವಸಹಾಯ ಸಂಘಗಳ ಸಾಲ ಮನ್ನಾ ರೈತರ ಬೆನ್ನೆಲುಬಾಗಿ ನಿಂತಿರುವುದು, ಈ ಪಂಚ ರತ್ನ ಯೋಜನೆಯು ಸಹ ಅಪಾರ ಕೊಡುಗೆಗಳಿಂದ ತುಂಬಿದೆ  ಕ್ಷೇತ್ರದಲ್ಲಿ ವೀರಭದ್ರಯ್ಯನವರಿಗೆ ಶಕ್ತಿ ತುಂಬಿದರೆ  ರಾಜ್ಯದಲ್ಲಿ ಕುಮಾರಣ್ಣನಿಗೆ ಶಕ್ತಿ ತುಂಬಿದಂತೆ ಎಂದು ವೀರಭದ್ರಯ್ಯ ರವರ ಪರ ಮತಯಾಚಿಸಿದರು…


ಈ ಸಂದರ್ಭದಲ್ಲಿ  ಪುರಸಭೆ ಅಧ್ಯಕ್ಷರಾದ ತಿಮ್ಮರಾಜು, ಸದಸ್ಯರಾದ  ನಾಣಿ, ಚಂದ್ರಶೇಖರ್ ಬಾಬು, ಎಂ ಆರ್  ಜಗನ್ನಾಥ್, ಗಂಗರಾಜು, ಆಸಿಯ ಶಾಜು , ಮಾಜಿ ಪುರಸಭೆ ಸದಸ್ಯರಾದ ಅಲೀಂ  ಉನ್ನಿಸಾ, ಮಾಜಿ    ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್ ಡಿ ಕೃಷ್ಣಪ್ಪ,ದೊಡ್ಡಯ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವೆಂಕಟೇಶ್ ಕೃಷ್ಣಪ್ಪ, ಮುಖಂಡರಾದ ಕಂಬದ ಹಳ್ಳಿ  ರಘು,ಸಲ್ಮಾನ್, ನಾಗಭೂಷಣ್, ಗೋವಿಂದರಾಜು, ಕಾಂಗ್ರೆಸ್ನ ಯುವ ಮುಖಂಡ ಹರ್ಷದ್,  ಕೊಡಿಗೇನಹಳ್ಳಿ ಜಬಿವುಲ್ಲಾ, ಅಲ್ಲೂ ಮಾಮು  ಮತ್ತು ಸಾವಿರಾರು ಸಂಖ್ಯೆಯಲ್ಲಿ  ಪಕ್ಷದ ಕಾರ್ಯಕರ್ತರು ಇದ್ದರು.   

ವರದಿ

ಮಧುಗಿರಿ:ಅಬಿದ್



   

Document

Leave a Reply

Your email address will not be published. Required fields are marked *