Janataa24 NEWS DESK

ಪಾವಗಡ: ಮಾಜಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮೇಶ್ ಪೂಜಾರಿ ಮತ್ತು ನೂರಾರು ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ಪಾವಗಡ ಸ್ಥಳೀಯ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಹಾಗೂ 2023ನೇ ಸಾಲಿನ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ರವರ ಸಂಮುಕರ ಮುಂದೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದೇ ವೇಳೆ ಶಾಸಕರಾದ ವೆಂಕಟರಮಣಪ್ಪ ಮಾತನಾಡಿ ತಾಲೂಕಿನ ವೈ.ಎನ್.ಹೊಸಕೋಟೆ ವ್ಯಾಪ್ತಿಯಲ್ಲಿ ಬಿಜೆಪಿ ಸಂಘಟನೆ ಮಾಡಿದ್ದ ಪ್ರಬಲವಾಗಿ ಬೆಳಸಲು ಮುಂದಾಗಿದ್ದ ಏಕೈಕ ವ್ಯಕ್ತಿ ಎಂದರೆ ಉಮೇಶ್ ಮತ್ತು ವಕೀಲರಾದ ಭಗವಂತಪ್ಪ ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಅಗಿರುವುದು ನಮ್ಮ ಪಕ್ಷಕ್ಕೆ ಈ ಭಾಗಕ್ಕೆ ಆನೆ ಬಲ ಬಂದ ಹಾಗೇ ಇದೆ ಎಂದರು.
ತಾಲೂಕಿನ ವೈ.ಎನ್.ಹೊಸಕೋಟೆಯ ಪ್ರಮುಖ ಬಿಜೆಪಿ ಮುಖಂಡ ಹಾಗೂ
ಮಾಜಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಯಾದ ಉಮೇಶ್ ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿ ಚಿಕ್ಕಂದಿನಿಂದಲೇ ವೆಂಕಟರಮಣಪ್ಪ ರವರಿಗೆ ನೋಡಿ ರಾಜಕೀಯದಲ್ಲಿ ಬೆಳೆಯಬೇಕು ಎಂಬ ಆಸೆ ಹೊತ್ತು ರಾಜಕೀಯದಲ್ಲಿ ಬಂದೆ ಸ್ಥಳೀಯ ಶಾಸಕರು ನಾಲ್ಕು ಬಾರಿ ಶಾಸಕರಾಗುವುದು ಅಷ್ಟಾಗಿ ಸುಲಭದ ಕೆಲಸವಲ್ಲ ಇದಕ್ಕೆ ಮೂಲ ಕಾರಣ ಅವರ ಅಭಿವೃದ್ಧಿ ಯೋಜನೆಯೇ ನಾಲ್ಕು ಬಾರಿ ಗೆದ್ದು ಎರಡು ಬಾರಿ ಸಚಿವರಾಗಲು ಕಾರಣ ವಾಗಿದೆ. ಈಗ ಮತ್ತೆ ಹೆಚ್.ವಿ.ವೆಂಕಟೇಶ್ ರವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ಈ ಭಾರಿ ನಾವೆಲ್ಲರೂ ಸೇರಿ ಅವರಿಗೆ ಗೆಲ್ಲಿಸುವುದೆ ನಮ್ಮ ಗುರಿಯಾಗಿ ಮಾರ್ಪಟ್ಟಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಮಾತನಾಡಿ ವೈ.ಎನ್.ಹೊಸಕೋಟೆ ಬಿಜೆಪಿ ಪ್ರಬಲ ವ್ಯೆಕ್ತಿ ಎಂದೆ ಹೇಳಬಹುದು ಏಕೆಂದರೆ ರಾಜಕೀಯ ಚತುರ ಸಣ್ಣ ವಯಸ್ಸಿನಲ್ಲಿಯೇ ಸಂಘಟನೆ ಮಾಡುವ ಹುಮ್ಮಸ್ಸು ಉಮೇಶ್ ಪೂಜಾರಿ ಯಲ್ಲಿ ನಾವು ನೋಡಿದ್ದೆವೆ.ಇಂದು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.ಉಮೇಶ್ ಪೂಜಾರಿ ಮತ್ತು ಈ ಭಾಗದ ಎಲ್ಲಾ ನೇಕಾರರ ಕುಟುಂಬದ ಸದಸ್ಯರಿಗೆ ನಮ್ಮ ಪಕ್ಷದಿಂದ ಹಾಗೂ ನಮ್ಮ ಕಡೆಯಿಂದಲೂ ಎಲ್ಲಾ ರೀತಿಯಲ್ಲಿ ಬೆಂಬಲವನ್ನು ನೀಡುತ್ತೇವೆ ಎಂಬುದಾಗಿ ಎಲ್ಲಾರ ಸಂಮುಕರ ಮುಂದೆ ತಿಳಿಸುತ್ತಿದ್ದೆನೆ.

ಈ ಭಾಗದಲ್ಲಿ ಜೆಡಿಎಸ್ ಲೀಡ್ ಬಂದಾಗಿದೆ ಎಂಬುದಾಗಿ ಬಿಗುತ್ತಿರುವ ತಿಮ್ಮಾರಾಯಪ್ಪ ರವರಿಗೆ ಮುಂದಿನ ದಿನಗಳಲ್ಲಿ ಈ ಭಾಗದ ಜನರೆ ಸರಿಯಾದ ಉತ್ತರ ನೀಡುತ್ತಾರೆ ಎಂದರು.
ಈ ವೇಳೆ ಹಿರಿಯ ವಕೀಲರಾದ ಭಗವಂತಪ್ಪ. ಶಂಷುದ್ದಿನ್ (ಶಂಮ್ಮು)ಎನ್.ಆರ್.ಅಶ್ವಥ್. ವಿಶ್ವನಾಥ್. ಪಿ.ಸಿ.ಗೋಪಿ.ಎಸ್.ಟಿ.ನಾಗರಾಜ್.ಪಿ.ಸಿ.ನಾಗರಾಜ್.ಮಂಜು.ತಿಮ್ಮಪ್ಪ.ದೇವರಾಜ್.ಗಿರೀಶ್. ಶ್ರೀ ನಿವಾಸ್ ಚಾರಿ ಮತ್ತು ನೂರಾರು ಕಾರ್ಯಕರ್ತರು ಇದ್ದರು.

ವರದಿ
ಪಾವಗಡ: ಇಮ್ರಾನ್ ಉಲ್ಲಾ.