Document

ಮಧುಗಿರಿ ಜಿಲ್ಲೆಯಾದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ: ಸ್ಥಳೀಯ ಅಭ್ಯರ್ಥಿ ಸಿ ಎನ್ ಮಧು 

Janataa24

NEWS DESK

ಮಧುಗಿರಿ ಜಿಲ್ಲೆಯಾದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ.

 ಪ್ರವಾಸೋದ್ಯಮ ಕೇಂದ್ರದ ಭರವಸೆ : ಸ್ಥಳೀಯ ಅಭ್ಯರ್ಥಿ ಸಿ ಎನ್ ಮಧು 

VideoCapture 20230401 165314






ಮಧುಗಿರಿ: ಬಹುಜನ ಸಮಾಜ ಪಕ್ಷದಿಂದ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ  ತನ್ನನ್ನು ಘೋಷಿಸಿದ್ದು, ತಾನು ಸ್ಥಳೀಯ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಜನರು ತನಗೆ ಬೆಂಬಲ   ನೀಡಬೇಕೆಂದು ಸಿಎ.ಎನ್.ಮಧು ಮನವಿ ಮಾಡಿದರು.



ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ  ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಧುಗಿರಿ ಕ್ಷೇತ್ರದ  ಸರ್ವತೋಮುಖ ಅಭಿವೃದ್ಧಿ ನನ್ನ ಗುರಿಯಾಗಿದೆ.

ಈ ಹಿಂದೆ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಾವಿರಾರು ಸಂಖ್ಯೆ ಜನ ಸಮೂಹದೊಂದಿಗೆ  ರ್ರ್ಯಾಲಿ ಮುಖಾಂತರ ಹೋರಾಟ ಮಾಡಿದ್ದು, ಬರಗಾಲ ಪ್ರದೇಶವಾದ ಮಧುಗಿರಿಯಿಂದ ಹಲವಾರು ಯುವಜನರು ಸ್ಥಳೀಯವಾಗಿ ಉದ್ಯೋಗ ಸಿಗದೇ  ಉದ್ಯೋಗ ಹುಡುಕುತ್ತಾ  ಬೆಂಗಳೂರಿಗೆ ಒಲಸೆ ಹೋಗಿದ್ದಾರೆ, ಮಧುಗಿರಿಯೂ ಕಂದಾಯ ಜಿಲ್ಲೆಯಾದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುವುದು ದೊಡ್ಡ ಮಟ್ಟದಲ್ಲಿ ಕಾರ್ಖಾನೆಗಳ ಸ್ಥಾಪನೆ ಇದರಿಂದ ಕೆಲಸ ಹುಡುಕುತ್ತಾ ವಲಸೆ ಹೋಗುವುದು ತಪ್ಪುತ್ತದೆ,   ಮುಂದಿನ ಚುನಾವಣೆಯಲ್ಲಿ. ಶಾಸಕರಾಗಿ ಆಯ್ಕೆಯಾದರೆ ಮಧುಗಿರಿ ತಾಲೂಕು ಅನ್ನು ಜಿಲ್ಲೆ ಮಾಡುವ ಉದ್ದೇಶ ಹೊಂದಲಾಗಿದೆ. 



ಇದೇ ಅಲ್ಲದೆ ತಾಲೂಕಿನ ಅಭಿವೃದ್ಧಿಗಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಚುನಾವಣೆಯಲ್ಲಿ ಗೆದ್ದು ಶಾಸಕನಾದರೆ ಮಧುಗಿರಿಯನ್ನು  ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಿ  ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕ್ಷೇತ್ರವನ್ನು ಸರ್ಕಾರವೇ ಬರಪೀಡಿತ ಪ್ರದೇಶವೆಂದು  ಘೋಷಿಸಿದ್ದು, ಬೆಳೆಗಳು ಬೆಳೆದ ರೈತರಿಗೆ ಸರಿಯಾದ ಫಸಲು ಸಿಗದೆ, ಫಸಲು ಬಂದರೆ ಸರಿಯಾದ ಬೆಲೆ ಸಿಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ರೈತರಿಗೆ ಆದ್ಯತೆ ಮೇರೆಗೆ ಸೂಕ್ತ ಬೆಲೆ ಸಿಗುವಂತೆ ಕೃಷಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳಿಂದ ಕನಿಷ್ಠ ಬೆಲೆ ಸಿಗದಿರುವುದು ಕಂಡುಬಂದಿದ್ದು ಇಂತಹ ವಂಚನೆಯಿಂದ ರೈತರಿಗೆ ನ್ಯಾಯ ಒದಗಿಸಲು ನಾನು ಸದಾ ಕ್ಷಮಿಸುತ್ತೇನೆ  ಈ ನಮ್ಮ ರೈತರು ದೇಶದ ಬೆನ್ನೆಲುಬು ಎಂದು ತಿಳಿಸಿದರು.

HonnasiriMahindrapost02 1
ಜಾಹೀರಾತು/Advertisement



ಕ್ಷೇತ್ರಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮಾಂತರ ಪ್ರದೇಶಗಳ ಸಾರಿಗೆ ವ್ಯವಸ್ಥೆ ಸರಿಪಡಿಸುವುದು. ವಿದ್ಯಾರ್ಥಿಗಳಿಗೆ ಫ್ರೀ ಪಾಸ್ ವ್ಯವಸ್ಥೆ ಮಾಡಿಕೊಡುವುದು ನನ್ನ ಪ್ರಮುಖ ಗುರಿಯಾಗಿದೆ ಎಂದರು.



ಮಧುಗಿರಿ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಅಭ್ಯರ್ಥಿಯಾದ ನನ್ನನ್ನು ಈ 2023 ಚುನಾವಣೆಯಲ್ಲಿ ಮತದಾರರು ನಿಮ್ಮ ಅಮೂಲ್ಯವಾದ ಮತವನ್ನು ನೀಡಿ  ಗೆಲ್ಲಿಸಿ ಹಾಗೂ  ಮಧುಗಿರಿ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದು ಎಲ್ಲಾ ಕ್ಷೇತ್ರದ ಮತದಾರರನ್ನು ಕುರಿತು ಮತಯಾಚಿಸಿ   ಮನವಿ ಮಾಡಿಕೊಂಡರು.

HonnasiriMahindrapost02
ಜಾಹೀರಾತು/Advertisement



ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಅಣ್ಣೇನಹಳ್ಳಿ ಗೋಪಾಲ್, ತೆರಿಯೂರು ಅಂಜಯ್ಯ, ಕಾಟಗೊಂಡನಹಳ್ಳಿ ಶಿವಣ್ಣ, ಶಿವಯ್ಯ,  ಶಂಕರಪ್ಪ, ಶಿವಾರೆಡ್ಡಿ, ನಟರಾಜು ಸೇರಿದಂತೆ  ಮತ್ತಿತರರು ಇದ್ದರು.

ವರದಿ

ಮಧುಗಿರಿ:ಅಬಿದ್  

Document

Leave a Reply

Your email address will not be published. Required fields are marked *