Document

ಭಾರತೀಯ ಜನತಾ ಪಕ್ಷದ ಬಾದಾಮಿ ಮತಕ್ಷೇತ್ರದ ಅಭ್ಯರ್ಥಿ ಶಾಂತಗೌಡ ಟಿ. ಪಾಟೀಲ ಅವರ ಪರ ಪ್ರಚಾರ ಮಾಡಿದ ಭಾ.ಜ.ಪಾ ರಾಜ್ಯ ಉಪಾಧ್ಯಕ್ಷ ಯುವಮುಖಂಡ ಬಿ. ಎಸ್. ವಿಜಯೇಂದ್ರ

Janataa24 NEWS DESK

IMG 20230425 110906

ಬಾಗಲಕೋಟೆ

ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ನಿನ್ನೆ ಬಾದಾಮಿ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಾಂತಗೌಡ. ಟಿ. ಪಾಟೀಲ ಪರವಾಗಿ ಗುಳೇದಗುಡ್ಡ ದಲ್ಲಿ ಭರ್ಜರಿ ರೋಡ ಶೋ ಮೂಲಕ ಶಾಳೇಶ್ವರ ದೇವಸ್ಥಾನದ ಹತ್ತಿರದ ವಿಜಯೇಂದ್ರ ವಿಜಯ ಸಂಕಲ್ಪ ವೇದಿಕೆಗೆ ಆಗಮಿಸಿದರು.

ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರದಲ್ಲಿ ಮಾತನಾಡಿದ ಅಭ್ಯರ್ಥಿ ಶಾಂತ ಗೌಡ ಪಾಟೀಲ ರಾಜ್ಯದಲ್ಲಿ ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಎಡಿಯೂರಪ್ಪ ಅವರ ಜನಪರ ಕಾರ್ಯಕ್ರಗಳ ಬಗ್ಗೆ ವಿವರಿಸಿ, ನರೇಂದ್ರ ಮೋದಿಯವರ ಅಭಿವೃದ್ಧಿ ಪರ ಇರುವ ಜನಪರ ಯೋಜನೆಗಳು ಜನಸಾಮಾನ್ಯರನ್ನು ಮೆಚ್ಚಿಸಿವೆ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ ನಾನು ಜನಪರ ಕೆಲಸ ಮಾಡುತ್ತೇನೆ. ಪಕ್ಷ ನನಗೆ ಅಭ್ಯರ್ಥಿಯಾಗಿ ನಿಲ್ಲಲು ಅವಕಾಶ ಕೊಟ್ಟಿದೆ ಮತದಾರ ಬಂಧವರಾದ ತಾವುಗಳು ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿದರೆ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ತಮ್ಮ ಸೇವೆ ಮಾಡಲು ಟೋಂಕ ಕಟ್ಟಿ ನಿಲ್ಲಲು ನಾನು ಸದಾ ಸಿದ್ದ ಎಂದು ಮತ ಹಾಕಿ ಆಶೀರ್ವಾದ ಮಾಡಲು ವಿನಂತಿಸಿಕೊಂಡರು.

ವೇದಿಕೆಯ ಮೇಲಿನ ಮುಖಂಡರಿಗೆ ಗುಳೇದಗುಡ್ಡದ ಪ್ರಸಿದ್ಧ ನೇಕಾರಿಕೆಯ ಶಾಲನ್ನು ಎಲ್ಲರ ಕೊರಳಿಗೆ ಹಾಕಿದ್ದು ವಿಶೇಷವಾಗಿತ್ತು. ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ಭಾ. ಜ. ಪ. ರಾಜ್ಯ ಉಪಾಧ್ಯಕ್ಷ ಬಿ. ಎಸ್. ವಿಜಯೇಂದ್ರ ರಾಜ್ಯದ ಎಲ್ಲಾ ಮತಕ್ಷೇತ್ರಗಳಿಗೆ ನಾನು ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೀನೆ. ಆದರೆ ಬಾದಾಮಿ ಮತಕ್ಷೇತ್ರದ ಅಭ್ಯರ್ಥಿ ಶಾಂತಗೌಡ. ಟಿ. ಪಾಟೀಲ ಗೆಲುವು ನಿಮ್ಮ ನೆಚ್ಚಿನ ನಾಯಕ ಬಿ. ಎಸ್. ಎಡಿಯೂರಪ್ಪ ಅವರು ಗೆದ್ದ ಹಾಗೆ ಬಾದಾಮಿ ಕ್ಷೇತ್ರಕ್ಕೆ ಎಷ್ಟೇ ಅನಾನುಕೂಲ ಇದ್ದರೂ ನನ್ನನ್ನ ನಿಮ್ಮ ಎಡಿಯೂರಪ್ಪನವರು ಕಳುಹಿಸಿ ಕೊಟ್ಟಿದ್ದಾರೆ. ಬಾದಾಮಿ ಮತಕ್ಷೇತ್ರದ ಗೆಲುವು ಬಿ. ಎಸ್. ಎಡಿಯೂರಪ್ಪನವರ ಗೆಲುವು ಎಂದು ಕಾರ್ಯಕರ್ತರಿಗೆ ವಿನಂತಿಸಿದರು.

IMG 20230425 110922

ವೇದಿಕೆಯಲ್ಲಿ ಅಭ್ಯರ್ಥಿ ಶಾಂತಗೌಡ. ಟಿ. ಪಾಟೀಲ, ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ, ಗುಕೇದಗುಡ್ಡದ ಮಾಜಿ ಶಾಸಕ ರಾಜಶೇಖರ ಶೀಲವಂತರ, ಯುವ ಮುಖಂಡ ಮಹಾಂತೇಶ್ ಮಮದಾಪೂರ, ಬಸವರಾಜಗೌಡ ಪಾಟೀಲ, ಅಶೋಕ ಲಿಂಬಾವಳಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಗುರುಹಿರಿಯರು ಮಹಿಳೆಯರು, ಯುವಸಮೂಹ ಸೇರಿದಂತೆ ಅಪಾರ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

ವರದಿ

ಬಾಗಲಕೋಟೆ: ರಾಜೇಶ್

Document

Leave a Reply

Your email address will not be published. Required fields are marked *