Document

ಬಿರುಗಾಳಿ ಸಹಿತ ಮಳೆಗೆ ಮೈಸೂರಿನಲ್ಲಿ ಮೂರು ಬಲಿ

Janataa24 NEWS DESK

prajavani 2023 05 1b61003a 824a 4a1f bb4b fb637fd20ee8 20 29 23 WhatsApp 2023 05 21

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದ್ದು, ಸಿಡಿಲು ಬಡಿದು ಹಾಗೂ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರು ಮೃತಪಟ್ಟಿದ್ದಾರೆ.

ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಮಂಟಿಕೊಪ್ಪಲು ಗ್ರಾಮದ ಜಮೀನಿನಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಗ್ರಾಮದ ನಿವಾಸಿ ಹರೀಶ್ (42) ಮೃತರು. ಬೆಳೆಗೆ ನೀರು ಹಾಯಿಸಲು ಜಮೀನಿಗೆ ತೆರಳಿದ್ದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ತಾಲ್ಲೂಕಿನ ಮರೂರು, ಗಾವಡಗೆರೆ, ಮರೂರು ಕಾವಲ್, ಕಟ್ಟೆಮಳಲವಾಡಿ ಭಾಗದಲ್ಲಿ ಜೋರು ಗಾಳಿ, ಮಳೆಯಿಂದಾಗಿ ಮರ ನೆಲಕ್ಕುರುಳಿ 20 ವಿದ್ಯುತ್ ಕಂಬಗಳು ಕೂಡ ಬಿದ್ದಿದ್ದವು.

prajavani 2023 05 27843562 823e 4267 a492 31a137345af7 20 32 08 WhatsApp 2023 05 21


ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿ ಗ್ರಾಮದ ಲೋಕೇಶ್ (55) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಮೀಪದ ಕೆ.ದೊಡ್ಡಕೊಪ್ಪಲು ಗ್ರಾಮದ ಸ್ವಾಮಿ (18) ಮೃತಪಟ್ಟರು. ಹರೀಶ್ (42) ಮತ್ತು ಸಂಜಯ್ (19) ಗಾಯಗೊಂಡಿದ್ದಾರೆ. ಜೋರು ಮಳೆ-ಗಾಳಿಯಿಂದಾಗಿ ತಂತಿ ತುಂಡಾಗಿ ಬಿದ್ದಿತ್ತು. ಉಳುಮೆ ಮಾಡುವಾಗ ತಂತಿ ತುಳಿದಿದ್ದಾರೆ ಎಂದು ಸ್ಥಳೀಯರು ತಿಳಿಸಿದರು.

Document

Leave a Reply

Your email address will not be published. Required fields are marked *