Document

ಬಾಗಲಕೋಟೆಯಲ್ಲಿ ಜೆ ಡಿ ಎಸ್ ನಿಂದ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮ-

IMG 20221219 WA0021

ಬಾಗಲಕೋಟೆ : ರಾಜೇಶ್.ಎಸ್.ದೇಸಾಯಿ



ಬಾಗಲಕೋಟೆಯಲ್ಲಿ ಸಿ.ಎಂ.ಇಬ್ರಾಹಿಂ ಹಾಗೂ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಜೆ.ಡಿ.ಎಸ್.ಪಕ್ಷ ಸೇರ್ಪಡೆ ಹಾಗೂ ಸಂಘಟನಾ ಕಾರ್ಯಕ್ರಮ ನೆರವೇರಿತು.

IMG 20221219 WA0020



ಬಾಗಲಕೋಟೆಯ ಕಲಾ ಭವನದಲ್ಲಿ ಜಾತ್ಯಾತೀತ ಜನತಾದಳ ದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಜೆ.ಡಿ.ಎಸ್.ನ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಅವರ ನೇತೃತ್ವದಲ್ಲಿ ಶ್ರೀನಿವಾಸಗೌಡ ರುನ್ ಸೇರಿದಂತೆ ಅವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಯಾದರು.

IMG 20221219 WA0021 1



ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಡಿ.ಎಸ್. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜನರಿಗೆ ಕೆಲಸ ಮಾಡಿಕೊಟ್ಟಿರುವುದು ಜೆ.ಡಿ.ಎಸ್.ಪಕ್ಷವಾದರೆ ಆ ಕೆಲಸವನ್ನು ನಾವುಮಾಡಿಕೊಟ್ಟಿದ್ದೇವೆ ಎಂದು ಲೇಬಲ್ ಹಾಕಿಕೊಂಡು ಹೆಸರು ಮಾಡಿಕೊಳ್ಳುತ್ತಿರುವವರು ಆಡಳಿತ ಪಕ್ಷ ಎಂದು ತರಾಟೆಗೆ ತೆಗೆದುಕೊಂಡರು.

ಜೆ.ಡಿ.ಎಸ್.ನ ಬಾಗಲಕೋಟೆ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಬಗ್ಗೆ ಜನರಿಗೆ ಒಳ್ಳೆಯ ಒಲವು ಇದೇ ಶ್ರೀನಿವಾಸಗೌಡರು ಅವರ ಬೆಂಬಲಿಗರೊಂದಿಗೆ ಪಕ್ಷಕ್ಕೆ ಬಂದಿರುವುದು ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ನಮ್ಮ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿ ಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ನಮ್ಮ ಪಕ್ಷದ ಉದ್ದೇಶ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನಪರ ಕೆಲಸಗಳ ಬಗ್ಗೆ ಮನಮುಟ್ಟುವಂತೆ ತಿಳಿಹೇಳಿ ಪಕ್ಷವನ್ನು ಬಲಪಡಿಸುವ ಕಾರ್ಯ ಪ್ರಾರಂಭವಾಗಬೇಕು. ಜಿಲ್ಲೆಯಲ್ಲಿ ನಮ್ಮ ಪಕ್ಷದ ಬಗ್ಗೆ ಜನರಲ್ಲಿ ಒಲವು ಇದೆ ಇನ್ನೂ ದೊಡ್ಡ ಮಟ್ಟದಲ್ಲಿ ಜನರ ಬಳಿ ತೆರಳಿ ಪಕ್ಷ ಸಂಘಟನೆ ಗೆ ನಮ್ಮ ಕಾರ್ಯಕರ್ತರು ತೆರಳಬೇಕು ಎಂದು ಈ ಮೂಲಕ ಮನವಿ ಮಾಡಿದರು.

IMG 20221219 WA0023



ಇದೇ ಸಂದರ್ಭದಲ್ಲಿ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಮ್.ಇಬ್ರಾಹಿಂ,ಜಿಲ್ಲಾಧ್ಯಕ್ಷರಾದ ಹನಮಂತ ಮಾವಿನಮರ ದ, ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷರಾದ ಶ್ರೀ ಶಂಶುಲಕ್ ಖಾನ್, ರಾಜ್ಯ ವಕ್ತಾರೆ ಕುಮಾರಿ ನಜ್ಮಾ ಚಿಕ್ಕನೇರಳೆ, ಪಕ್ಷದ , ಹಾಗೂ ಜಿಲ್ಲಾ ಪದಾಧಿಕಾರಿಗಳು, ಬಾಗಲಕೋಟೆ ಜಿಲ್ಲೆಯ ಎಲ್ಲಾ ತಾಲೂಕ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Document

Leave a Reply

Your email address will not be published. Required fields are marked *