Document

ಬಹುಮತ ಇಲ್ಲದಿದ್ದರೂ ರೈತರ ಸಮಸ್ಯೆ,ಜನರ ಸಮಸ್ಯೆ ಹೋಗಲಾಡಿಸಿದ ಪಕ್ಷ ಎಂದರೆ ಅದು ಜೆಡಿಎಸ್: ಕುಪೇಂದ್ರ ರೆಡ್ಡಿ

Janataa24 NEWS DESK

ಪಾವಗಡ

ಬಹುಮತ ಇಲ್ಲದಿದ್ದರೂ ರೈತರ ಸಮಸ್ಯೆ ಜನರ ಸಮಸ್ಯೆ ಹೋಗಲಾಡಿಸಿ ದಂತಹ ಪಕ್ಷ ಎಂದರೆ ಅದು ಜೆಡಿಎಸ್ ಪಕ್ಷ: ಜೆಡಿಎಸ್ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ತಿಳಿಸಿದರು.

IMG 20230507 WA0021



ಪಾವಗಡ ತಾಲೂಕಿನ ಗಡಿ ಪ್ರದೇಶದ ವಾದ ವಳ್ಳೂರು ಗ್ರಾಮದಲ್ಲಿ ಜೆಡಿಎಸ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ಈ ಭಾಗದ ನಮ್ಮ ಸಮುದಾಯದವರಿಗೆ ಮತ್ತು ಸಂಬಂಧಿಕರನ್ನು ಮಾತನಾಡಿಸಿ ಯಾವ ರೀತಿಯಲ್ಲಿ ಚುನಾವಣೆ ಈ ಭಾಗದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಲು ಬಂದಿದ್ದೆನೆ.



ಈ ಹಿಂದೆ ರಾಜ್ಯದಲ್ಲಿ ಬಹುಮತ ಇಲ್ಲದಿದ್ದರೂ ರಾಜ್ಯದ ಜನರ ಸಮಸ್ಯೆ ಹೋಗಲಾಡಿಸಿದ ಸರ್ಕಾರ ಎಂದರೆ ಅದು ಜೆಡಿಎಸ್.ಏಕೆಂದರೆ ರೈತರ ಸಾಲಮನ್ನ.

ಎಲ್ಲರೂ ಗಮನಿಸಿದ ಹಾಗೆ ರಾಷ್ಟ್ರೀಯ ಪಕ್ಷಗಳು ಯಾವ ರೀತಿ ಹಣ ಚೆಲ್ಲಿ ತಮ್ಮ ಅಧಿಕಾರ ಆಸೆಗೆ ಹಣ ಚಲ್ಲುವ ಮೂಲಕ ಮುಂದಾಗುತ್ತಾರೆ ಎಂಬುದು ನೀವೆಲ್ಲ ನೋಡಿದ್ದೀರಾ.

IMG 20230507 WA0020



ಅದರೆ ಹಣ ಚಲ್ಲುವ ಪಕ್ಷ ನಮ್ಮದಲ್ಲ ಅದರೆ 120ರಿಂದ 130 ಸ್ಥಾನ ಗಳಿಸಿದರೆ ಸಾಕು ಎಂಬುದಾಗಿ ಮುನ್ನಡೆಯುತ್ತಿದ್ದೇವೆ.

ಈ ಹಿಂದೆ ನಮ್ಮ ಪಕ್ಷದಲ್ಲಿ ಇದ್ದಂತಹ ಮುಖಂಡರು ಮತ್ತೆ ನಮ್ಮ ಪಕ್ಷಕ್ಕೆ ಬಂದು ಪಕ್ಷ ಬಲಪಡಿಸಿದ್ದಾರೆ.

IMG 20230507 WA0022



ರಾಜ್ಯದಲ್ಲಿ ಜಲಧಾರೆ ಮತ್ತು ಪಂಚರತ್ನ ಯೋಜನೆಗಳು ತೆಗೆದುಕೊಂಡು ರಾಜ್ಯದ ಜನತೆಗೆ ಬರವಸೆ ನೀಡುವ ಮೂಲಕ ಜನರ ಹತ್ತಿರ ಆಗಿದ್ದೇವೆ ಹಾಗೂ ಮುಂದಿನ ದಿನ ಪಕ್ಚ ಅಧಿಕಾರಕ್ಕೆ ಬಂದ ತಕ್ಷಣವೇ ಪೂರ್ಣಗೊಳಿಸಿ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದರು.

ಈ ವೇಳೆ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಬೃಹತ್ ಪ್ರಚಾರ.
ರಾಜ್ಯ ಜೆಡಿಎಸ್ ಸಂಘಟನ ಕಾರ್ಯದರ್ಶಿ ವಿ.ಸಿ.ಚನ್ನಕೇಶವ ರೆಡ್ಡಿ.ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಸತೀಶ್ ರೆಡ್ಡಿ.ಸದಾಶಿವ ರೆಡ್ಡಿ.ಹನಮಂತರೆಡ್ಡಿ. ಶಿವರೆಡ್ಡಿ.ಇಟೂರಾಯನಹಳ್ಳಿ ಅಂಜಿನ್ ರೆಡ್ಡಿ.ಬಳಸಮುದ್ರ ಪೋತ್ ರೆಡ್ಡಿ.ಗುಡಿಸಿ ಮುತ್ತಾಲು.ಪಾತಣ್ಣ.ಕ್ಯಾತಗಾನಚರ್ಲು ಬಲರಾಮರೆಡ್ಡಿ.ತಾ.ಪಂ.ಮಾಜಿ ಸದಸ್ಯ ನರಸಿಂಹ. ವೆಂಕಟಮ್ಮನ ಹಳ್ಳಿನಾಗರಾಜು. ಹಲವು ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.


ವರದಿ

ಪಾವಗಡ:ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *