Document

ಪ್ರಯಾಣದ ನಡುವೆಯಲ್ಲೆ ಪಕ್ಷದ ಕೆಲಸ, ಆಹಾರ ಸೇವನೆ ಮತ್ತು ವಿಶ್ರಾಂತಿ – ಇದು ಹೆಚ್‌ಡಿಕೆ ದಿನಚರಿ.

Janataa24: NEWS DESK

HD Kumaraswamy 5

ಬೆಂಗಳೂರು: ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ಇರುವುದರಿಂದ ರಾಜಕೀಯ ಪಕ್ಷಗಳು ಬಿರುಸಿನ ವೇಗದಲ್ಲಿ ಪ್ರಚಾರ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಕೂಡಾ ಬಿಡುವಿಲ್ಲದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಸತತ 110 ದಿನಗಳಿಗೂ ಹೆಚ್ಚುಕಾಲ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಪಂಚರತ್ನ ರಥಯಾತ್ರೆ ನಡೆಸಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಈಗ ಏಕಾಂಗಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ನಿರಂತರ ಪಯಣ, ಸಮಯದ ಅಭಾವ ಅವರಿಗೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.

ಗುರುವಾರ ರಾತ್ರಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬೆಂಗಳೂರಿಗೆ ಹೊರಟ ಮಾಜಿ ಮುಖ್ಯಮಂತ್ರಿಗಳು, ಮಾರ್ಗಮಧ್ಯದಲ್ಲಿಯೇ ಕಾರಿನಲ್ಲಿ ಕುಳಿತು ಊಟ ಮಾಡಿದರು. ಬಳಿಕ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

HD Kumaraswamy

ಹೀಗೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವುದರಿಂದ ಹೆಚ್‌ಡಿಕೆ ಬಿಡುವು ಮಾಡಿಕೊಳ್ಳದೇ ಪ್ರಯಾಣದ ನಡುವೆಯೇ ಪಕ್ಷದ ಕೆಲಸ, ಆಹಾರ ಸೇವನೆ, ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ.

Document

Leave a Reply

Your email address will not be published. Required fields are marked *