ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬಂದ್: ರೋಗಿಗಳ ಪರದಾಟ

ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿರುವ ಜನ ಔಷಧಿ ಕೇಂದ್ರದ ಮುಂದೆ ಡಿ.30ರಿಂದ ಜ.6ರ ವರೆಗೆ ರಜೆ ಎಂಬುದಾಗಿ ನಾಮ ಫಲಕದಲ್ಲಿ ಬರೆಯಲಾಗಿದೆ ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವಂತಹ ರೋಗಿಗಳು ಪರದಾಡುವಂತಾಗಿದೆ.

Screenshot 2023 01 01 133211

ಕೇಂದ್ರ ಸರ್ಕಾರದ ಯೋಜನೆಯಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಕಟ್ಟ ಕಡೆಯ ವ್ಯಕ್ತಿಗೂ ಸುಲಭವಾಗಿ ಸಿಗುವಂತಹ ಔಷಧಿ ಸಿಗಬೇಕು ಎಂಬ ಉದ್ದೇಶ ದಿಂದ ಪ್ರಧಾನ ಮಂತ್ರಿಗಳ ಯೋಜನೆ ಗಳಲ್ಲಿ ಉತ್ತಮವಾದ ಯೋಜನೆಯಲ್ಲಿ ಜನ ಔಷಧಿ ಯೋಜನೆ ಎಂಬುದಾಗಿ ಹೇಳಬಹುದಾಗಿದೆ.

ಈ ಜನ ಔಷಧಿ ಕೇಂದ್ರಗಳು ಎಂ.ಎಸ್.ಐ.ಎಲ್.ನಿರ್ವಹಣೆ ಮಾಡಲಾಗುತ್ತಿದೆ ಅದರೆ ಇಲ್ಲಿ ಕೆಲಸ ಮಾಡಲು ಏಕವ್ಯಕ್ತಿ ನಿರ್ವಹಿಸುತ್ತಿರುವುದರಂದ ಸಿಬ್ಬಂದಿ ಕಾರಣಾಂತರಗಳಿಂದ ಗೈರು ಹಾಜರಾದರೆ ಜನ ಔಷಧಿ ಕೇಂದ್ರಕ್ಕೆ ರಜೆ ಎಂಬುದಾಗಿ ಹಾಕಲಾಗುತ್ತಿದೆ ಇದಕ್ಕೆ ಸಂಬಂಧ ಪಟ್ಟ ಗುತ್ತಿಗೆ ದಾರರು ಹೆಚ್ಚುವರಿ ಸಿಬ್ಬಂದಿ ಇಟ್ಟು ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಜನ ಔಷಧಿ ಕೇಂದ್ರ ನಿರ್ವಹಣೆ ಮಾಡಬೇಕಾಗಿದೆ ಇದರಿಂದ ಬಹಾಳಷ್ಟು ರೋಗಿಗಳಿಗೆ ತೊಂದರೆಗೆ ಈಡಾಗುತ್ತಿದ್ದರೆ ಎಂಬ ದೂರುಗಳು ಹೆಚ್ಚಾಗಿ ಕೇಳು ಬರಿತ್ತಿದೆ.

ನಮ್ಮ ಸರ್ಕಾರಿ ಆಸ್ಪತ್ರೆಯ ಕಟ್ಟಡದಲ್ಲಿ ಇದೇ ಹೊರತು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಖಾಸಗಿ ಏಜೆನ್ಸಿ ರವರ ನಿರ್ವಹಣೆಗೆ ಬರುತ್ತದೆ. ಈ ರೀತಿಯಲ್ಲಿ ಬಂದ್ ಮಾಡಿದರೆ ರೋಗಿಗಳಿಗೆ ತೊಂದರೆ ಖಂಡಿತ ವಾಗುತ್ತದೆ: ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ತಿರುಪತೈಯ್ಯ ಪಾವಗಡ.

Leave a Reply

Your email address will not be published. Required fields are marked *