Document

ಪೌರಕಾರ್ಮಿಕರ ಸಮಸ್ಯೆಗಳನ್ನು ಹೋಗಲಾಡಿಸಲು ಹೆಚ್ಚಿನ ಪ್ರಯತ್ನ ನನ್ನದು: ಹೆಚ್‌.ವಿ. ವೆಂಕಟೇಶ್

Janataa24 NEWS DESK

IMG 20230923 WA0014


ನ್ಯಾಯ ನೀತಿ ಧರ್ಮ ಪಾಲಿಸುವಂತಹ ಜವಾಬ್ದಾರಿ ನನ್ನದು ಆದರೆ ಕೆಲ ಮುಖಂಡರು ಹೀಗೆ ಮಾಡು ಹಾಗೆ ಮಾಡು ಎಂಬುದಾಗಿ ಹೇಳಿದಾಗ ಗೊಂದಲಕ್ಕೆ ಈಡಾಗುವ ಪರಿಸ್ಥಿತಿ ಮುಂದಾಗುತ್ತದೆ : ಶಾಸಕ ಹೆಚ್.ವಿ.ವೆಂಕಟೇಶ್.

IMG 20230923 WA0007



ಪಾವಗಡ: ಪುರಸಭೆಯಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ನಗರವನ್ನು ಆರೋಗ್ಯ ವಾಗಿ ಇಡಬೇಕಾದರೆ ಅದು ಪೌರ ಕಾರ್ಮಿಕರಿಂದ ಮಾತ್ರ ಸಾದ್ಯ.

IMG 20230923 WA0012



ಪೌರಕಾರ್ಮಿಕರ ಸಮಸ್ಯೆಗಳು ಬಹಳಷ್ಟುವೇ ಅವುಗಳನ್ನು ಹೋಗಲಾಡಿಸಲು ಹೆಚ್ಚಿನ ಪ್ರಯತ್ನ ಮಾಡುತ್ತೇನೆ ಮೊದಲು ಅವರಿಗೆ ಮನೆಗಳ ಆಗ ನಿವೇಶನಗಳ ವ್ಯವಸ್ಥೆ ಕಲ್ಪಿಸುತ್ತೇನೆ ಈಗಾಗಲೇ 17 ಪೌರಕಾರ್ಮಿಕರ ಮನೆಗಳನ್ನು ಪೂರ್ಣಗೊಳಿಸಲು ಎಲ್ಲಾ ತರದ ವ್ಯವಸ್ಥೆ ಮಾಡುತ್ತೇನೆ ಈಗಾಗಲೇ ಕೆಲವು ಸ್ಥಳ ಒತ್ತುವರಿ ಮಾಡಿರುವಂತಹ ಎಂತಹ ಪ್ರಭಾವಿಗಳಾದರೂ ಸಹ ಅದನ್ನು ತೆರವುಗೊಳಿಸಿ ಪೌರಕಾರ್ಮಿಕರಿಗೆ ನಿವೇಶನ ಹಾಗೂ ಮನೆಗಳ ನಿರ್ಮಾಣ ಮಾಡಲು ಮೊದಲ ಆದ್ಯತೆ ನೀಡುತ್ತೇನೆ.

IMG 20230923 WA0009



ಪಟ್ಟಣ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಗೆ ಮುಂದಾಗುತ್ತೇನೆ. ಪಟ್ಟಣದ ರಸ್ತೆ ಬದಿಗಳಲ್ಲಿ ಎಲ್ಲಿ ನೋಡಿದರೂ ಅಡ್ಡ ದಿಡ್ಡಿ ಅಂಗಡಿಗಳು ಇಡಲಾಗಿದೆ ಇವುಗಳ ವಿಚಾರದಲ್ಲಿ ಕ್ರಮ ಕೈಗೊಳ್ಳು, ಮುಂದಾದಾಗ ನಮ್ಮದೇ ಪುರಸಭೆ ಸದಸ್ಯರುಗಳ ಒತ್ತಡ ಹೇರುತ್ತಾರೆ.



ಈಗಾಗಲೇ ಹದಿನೇಳು ಮಂದಿ ಪೌರ ಕಾರ್ಮಿಕರಿಗೆ ಮಾತ್ರ ಮನೆಗಳ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಕೆಲವೆ ದಿನಗಳಲ್ಲಿ ಉಳಿಕೆ ನೌಕರರಿಗೆ ಸಹ ಮನೆಗಳ ವ್ಯವಸ್ಥೆ ಕಲ್ಪಸುತ್ತೇನೆ ಎಂದರು.



ಪುರಸಭೆ ಸದಸ್ಯ ರಾಜೇಶ್ ಮಾತನಾಡಿ ಪೌರ ಕಾರ್ಮಿಕರು ಸಮಸ್ಯೆಗಳನ್ನು ನಾವು ಸ್ಪಂದಿಸುತ್ತಿಲ್ಲ.ಅವರ ರುಣ ಎಂದಿಗೂ ತಿರೂಸಕ್ಕೂ ಸಾದ್ಯವಿಲ್ಲ. ಪಟ್ಟಣ ಸ್ವಚ್ಛತೆ ಬಗ್ಗೆ ಅವರಿಗೆ ಕಾಳಜಿ ಹೆಚ್ಚು.ಹೊದಬಾರಿ ಮಾಜಿ ಸಚಿವರ ಅವಧಿಯಲ್ಲಿ ಕೆಲ ಪೌರ ಕಾರ್ಮಿಕರಿಗೆ ಮಾತ್ರ ಮನೆ ವ್ಯವಸ್ಥೆ ಕಲ್ಪಸಿದ್ದರು ಇನ್ನೂ ಕೆಲವರಿ ಮನೆ ವ್ಯವಸ್ಥೆ ಹಾಗಿಲ್ಲ.

ಈ ಭಾರಿಯ ಶ್ರಾವಣ ಮಾಸದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಸ್ವಚ್ಚತಾ ಕೆಲಸ ಮಾಡಿ ಸ್ವಚ್ಚತೆಯಲ್ಲಿ ಉತ್ತಮ ಪಟ್ಟಣ ಎಂಬುದಾಗಿ ತೋರಿಸಿದ ಪೌರ ಕಾರ್ಮಿಕರಿಗೆ ಶನೇಶ್ವರನ ದೇವಾಲಯ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಬೇಕಾಗಿತ್ತು ಅಂತವರನ್ನು ಎಂದಿಗೂ ಗುರುತಿಸುವುದಿಲ್ಲ ಎಂದು ತಿಳಿಸಿದರು.

IMG 20230923 WA0013



ಇದೇ ವೇಳೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ ವಾಟರ್ ಮ್ಯಾನ್ ಕೆಲಸಗಾರರು ಮೂವತ್ತು ವರ್ಷಗಳಿಂದ ಪುರಸಭೆ ಯಲ್ಲಿ ದಿನಗೊಲಿ ನೌಕರರಾಗಿ ಕೆಲಸ ಮಾಡುತ್ತಿದ್ದೆವೆ ಅದರೆ ಪರಮನೆಂಟ್ ಮಾಡಲಿಲ್ಲ ಹಾಗೂ ಆರು ತಿಂಗಳಿಂದ ಸಂಬಳದ ವಾಗಿಲ್ಲ ಎಂಬುದಾಗಿ ಅಳಲು ನೋಡಿಕೊಂಡರು.

ಪರಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಕ್ರೀಡಾ ಕೂಟ ಹಮ್ಮಿಕೊಳ್ಳಲಾಗಿತ್ತು, ಅದರಲ್ಲಿ ವಿಜೇತರಗೊಂಡ ಪೌರಕಾರ್ಮಿಕರಿಗೆ ಶಾಸಕರು ಪ್ರಶಸ್ತಿ ಪ್ರಧಾನ ಮಾಡಿದರು.

IMG 20230923 WA0011



ಈ ವೇಳೆ ಪುರಸಭೆ ಸದಸ್ಯರು ಹಾಗೂ ಮುಖಂಡರು ಹಾಗೂ ಪುರಸಭೆ ನೌಕರರು ಪಾಲ್ಗೊಂಡಿದ್ದರು.

ವರದಿ: ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *