Document

ಪಾವಗಡದಲ್ಲಿ ಭೀಕರ ರಸ್ತೆ ಅಪಘಾತ ಕಾಲೇಜು ವಿದ್ಯಾರ್ಥಿ ಸಾವು

Janataa24 NEWS DESK

IMG 20231218 WA0004




ಪಾವಗಡ: ಬುಲೆರೋ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಮೃತ ಪಟ್ಟ ಘಟನೆ ತಾಲೂಕಿನ ಆರ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

IMG 20231218 WA0006



ಪಾವಗಡ ತಾಲೂಕಿನ ದೇವರ ಬೆಟ್ಟ ಗ್ರಾಮದ ನವೀನ್ ಕುಮಾರ್ (20) ಹಾಗೂ ಪ್ರಶಾಂತ್ (19)ಎಂಬ ಇಬ್ಬರು ಪಾವಗಡ ಪಟ್ಟಣಕ್ಕೆ ಕಾಲೇಜಿಗೆ ಬರುವಂತಹ ಸಂದರ್ಭದಲ್ಲಿ ಬುಲೆರೋ ಮತ್ತು ದ್ವಿಚಕ್ರ ವಾಹನದ ಮಧ್ಯ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ನವೀನ್ ಕುಮಾರ್ ಮೃತ ಪಟ್ಟಿದ್ದಾನೆ ಹಿಂಬದಿ ಕುಳಿತ ಪ್ರಶಾಂತ್ ಎಂಬ ಯುವಕನಿಗೆ ಕಾಲು ಮುರಿತಕ್ಕೆ ಒಳಪಟ್ಟಿದೆ.

IMG 20231218 WA0005

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.



ನವೀನ್ ಕುಮಾರ್ ತಂದೆ ರಾಮಕೃಷ್ಣಪ್ಪ. ಸೆಕೆಂಡ್ ಇಯರ್ ಬಿಕಾಂ ಓದುತ್ತಿದ್ದ. ಪ್ರಶಾಂತ್ ತಂದೆ ಹನುಮಂತರಾಯಪ್ಪ ಫಸ್ಟ್ ಬಿ.ಎ.ಪದವಿ ಓದುತ್ತಿದ್ದ ಎಂಬುದಾಗು ತಿಳಿದ ಬಂದಿದೆ ಇಬ್ಬರೂ ಸಹ ತಾಲೂಕಿನ ದೇವರ ಬೆಟ್ಟ ಗ್ರಾಮದ ವಾಸಿಗಳು.

IMG 20231218 WA0003

ನವೀನ್ ಕುಮಾರ್ ಮೃತ ದೇಹ ಸರ್ಕಾರಿ ಆಸ್ಪತ್ರೆಗೆ ತಂದಂತಹ ವೇಳೆ ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಪ್ರಾಚಾರ್ಯರು ಹಾಗೂ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

IMG 20231218 WA0008



ಅಪಘಾತ ಸಂಭವಿಸಿದ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ವರದಿ: ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *