Janataa24 NEWS DESK

ತುರುವೇಕೆರೆ: ಪಾನ್ ಇಂಡಿಯಾ & ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರತಿ ವರ್ಷವೂ ನಡೆಯುವಂತಹ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ
ತುಮಕೂರು ಜಿಲ್ಲೆಯ ,ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಕೆ. ಹೊಸೂರು ಗ್ರಾಮದ ಶಿವಾನಂದ್ ಎಚ್.ಟಿ. ರವರು ಕರ್ನಾಟಕದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಿವಾನಂದ್ ಎಚ್ ಟಿ ರವರು.
ಸ್ವಾಮಿ ವಿವೇಕಾನಂದರು ಹೇಳಿರುವಂತೆ 10 ಆಸ್ಪತ್ರೆಗಳನ್ನು ನಿರ್ಮಿಸುವುದಕ್ಕಿಂತ ಒಂದು ಕ್ರೀಡಾಂಗಣವನ್ನು ನಿರ್ಮಿಸುವುದು ಲೇಸು ಎಂಬಂತೆ ತಮ್ಮ ಊರಿನಲ್ಲಿ ಪುಟ್ಟದಾಗಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಿಕೊಂಡು, ಸತತವಾಗಿ ಅಭ್ಯಾಸ ಮಾಡಿಕೊಂಡು ಕ್ರೀಡೆಯಲ್ಲಿ ಪ್ರತಿವರ್ಷವೂ ಭಾಗವಹಿಸಿ, ಪ್ರಶಸ್ತಿಗಳನ್ನು ತಂದು ತಮ್ಮ ಕುಟುಂಬ ವರ್ಗದವರಿಗೆ ಹೆಮ್ಮೆಯನ್ನು ತಂದಿದ್ದಾರೆ.

ತಾಲೂಕಿನ ಎಲ್ಲಾ ಗ್ರಾಮಸ್ಥರ ಬೆಂಬಲದಿಂದ ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತಾ ,ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಅವರ ಸ್ನೇಹಿತರು ಕೂಡ ಶುಭ ಹಾರೈಸಿದ್ದಾರೆ.

ಧಾರವಾಡದಲ್ಲಿ ನಡೆದ ಪಾನ್ ಇಂಡಿಯಾ ಕರ್ನಾಟಕ ಓಪನ್ ನ್ಯಾಷನಲ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟ 2023ರ ಕ್ರೀಡಾ ಕೂಟದಲ್ಲಿ ಭಾಗವಹಿಸಿ ,ಡಿಸ್ಕಸ್ ತ್ರೋನಲ್ಲಿ ದ್ವಿತೀಯ ಸ್ಥಾನ, ಮತ್ತು ಹ್ಯಾಮರ್ ಥ್ರೋ ನಲ್ಲಿ ತೃತೀಯ ಸ್ಥಾನವನ್ನು ಪಡೆದು ,ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ.
ಕರ್ನಾಟಕಕ್ಕೆ, ಮತ್ತು ಅವರ ತವರು ಜಿಲ್ಲೆಯಾದ ತುಮಕೂರು, ಮತ್ತು ತಮ್ಮ ತಾಲೂಕು ತುರುವೇಕೆರೆ ಗೆ ಸಹ ಕೀರ್ತಿಯನ್ನು ತಂದಿದ್ದಾರೆ.
ವರದಿ: ಮಂಜುನಾಥ್