Document

ಪರಿ ಏಂಜೆಲ್ಸ್ ಶಾಲೆಯಲ್ಲಿ ರೈತ ದಿನ ಆಚರಣೆ

Janataa24 NEWS DESK

IMG 20231223 WA0024


ಪಾವಗಡ: ಹಳ್ಳಿ ಗಾಡಿನ ರೈತರ ಜೀವನದ ಸೊಗಡಿನ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕ ವಾಗಿ ತೋರಿಸುವಂತ ಕಾರ್ಯಕ್ರಮ ವನ್ನು ಪಾವಗಡ ಪಟ್ಟಣದ ಪರಿ ಏಂಜೆಲ್ಸ್ ಶಾಲೆಯಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು.
ರೈತ ದಿನಾಚರಣೆಯನ್ನು ಶಾಲೆಯಲ್ಲಿ ಪ್ರಾತ್ಯಕ್ಷಿತವಾಗಿ ಸಿದ್ದಪಡಿಸಿದ್ದ ಹಳ್ಳಿ ದೇವಸ್ಥಾನದಲ್ಲಿ ದೀಪ ಬೆಳಗಿಸುವುದರ ಮೂಲಕ ಪಾವಗಡ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹಾಗೂ ಕನ್ನಡ ರಾಜ್ಯೋತ್ಸವ ಪುರಸ್ಕೃತ ಪೂಜಾರಪ್ಪರವರು ಉದ್ಘಾಟಿಸಿದರು.

IMG 20231223 WA0023
ಪರಿ ಏಂಜೆಲ್ಸ್ ಶಾಲೆಯಲ್ಲಿ ರೈತ ದಿನ ಆಚರಣೆ


ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಪೂಜಾರಪ್ಪನವರು ರೈತ ದೇಶದ ಬೆನ್ನೆಲುಬು, ರೈತರು ಹಳ್ಳಿಗಾ ಡಿನಲ್ಲಿ ಜೀವನ ನಡೆಸುವಂತ ಸೊಗಡಿನ ಸೊಗಸಾದಂತ ರೈತ ಮನೆ, ಹಳ್ಳಿ ಮನೆ,ಜನತಾ ಮನೆ, ತಾಜಾ ಸೊಪ್ಪು, ತರಕಾರಿ, ಹಣ್ಣು ಅಂಗಡಿ, ನ್ಯಾಯಬೇಳೆ ಅಂಗಡಿ, ಸೋಮಾರಿ ಕಟ್ಟೆ, ಜಗಲಿ ಕಟ್ಟೆ ಹೋಟೆಲ್, ಆಸ್ಪತ್ರೆ, ಹಳ್ಳಿ ದೇವಸ್ಥಾನ,ಕುರಿ ಮೇಕೆ ದನ ಹಸು ಶೆಡ್ಡು, ಹೊಲದಲ್ಲಿ ರೈತ ಮುದ್ದೆ ಸೊಪ್ಪಿನ ಸಾರು ಊಟ ಮಾಡುವ ರೀತಿ ಹಾಗೂ ಇನ್ನು ಮುಂತಾದವುಗಳ ಬಗ್ಗೆ ಮಕ್ಕಳಿಗೆ ಪ್ರಾಯೋಗಿಕವಾಗಿ ತೋರಿಸಿ ರೈತರನ್ನು ಗೌರವದಿಂದ ಕಾಣುವಂತೆ ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ರೈತ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಪಟ್ಟಣದ ಖಾಸಗಿ ಪರಿ ಏಂಜೆಲ್ಸ್ ಖಾಸಗಿ ಶಾಲ ಆಡಳಿತ ಮಂಡಳಿ ಏರ್ಪಡಿಸಿರುವುದು, ಅತ್ಯಂತ ಸಂತೋಷಕರ ಸಂಗತಿ ಎಂದು ಬಣ್ಣಿಸಿ, ಪುಟಾಣಿ ಮಕ್ಕಳಿಗೆ ರೈತ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭದಲ್ಲಿ ಮಕ್ಕಳು ರೈತರ ಮಾದರಿಯಲ್ಲಿ ಉಡುಗೆ ತೊಡುಗೆಗಳನ್ನು ಧರಿಸಿದ್ದು ವಿಶೇಷವಾಗಿತ್ತು .

IMG 20231223 WA0021
ಪರಿ ಏಂಜೆಲ್ಸ್ ಶಾಲೆಯಲ್ಲಿ ರೈತ ದಿನ ಆಚರಣೆ


ಈ ಸಂದರ್ಭದಲ್ಲಿ ರೈತ ದಿನಾಚರಣೆಯ ಪ್ರಯುಕ್ತ ರೈತ ಮುಖಂಡ ಪೂಜಾರಪ್ಪರವನ್ನು ಆತ್ಮೀಯವಾಗಿ ಶಾಲು ಹೊದಿಸಿ, ಹುಮಾಲೆ ಹಾಕಿ, ಹಣ್ಣುಈ ಹಂಪಲು ನೀಡಿ ಸತ್ಕರಿಸಿದರು.

IMG 20231223 WA0026
ಪರಿ ಏಂಜೆಲ್ಸ್ ಶಾಲೆಯಲ್ಲಿ ರೈತ ದಿನ ಆಚರಣೆ


ಈ ಶುಭ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ತೆ ಶ್ರೀಮತಿ ಲಕ್ಷ್ಮಿಶ್ರೀನಾಥ್, ಶಿಕ್ಷಕಿಯರಾದ ರಜಿಯಾ, ಸುಷ್ಮಾ,ಭವಾನಿ,ಭಾಗ್ಯ ಹಾಗೂ ಪೋಷಕರು ಹಾಜರಿದ್ದರು.

IMG 20231223 WA0027
ಪರಿ ಏಂಜೆಲ್ಸ್ ಶಾಲೆಯಲ್ಲಿ ರೈತ ದಿನ ಆಚರಣೆ

ವರದಿ

ಪಾವಗಡ: ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *