Document

ನಿಮ್ಮ ಮನೆ ಮಗನಾಗಿ,ಸೇವೆ ಮಾಡುವೆ- ಕೆ.ಎಂ.ತಿಮ್ಮರಾಯಪ್ಪ ಮನವಿ.

ಜೆಡಿಎಸ್ ಅಧಿಕಾರಕ್ಕೆ ತರುವಂತೆ ಮಾಜಿ ಶಾಸಕ ಹಾಗೂ ತಾಲೂಕು ಜೆಡಿಎಸ್ ಅಭ್ಯರ್ಥಿ ಕೆ. ಎಂ. ತಿಮ್ಮರಾಯಪ್ಪ ಮನವಿ.

ಪಾವಗಡ :ಇಮ್ರಾನ್ ಉಲ್ಲಾ

IMG 20230226 WA0001

ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಕಾರ್ಯಕ್ರಮ ಅನುಷ್ಠಾನದ ಮೂಲಕ ಶಾಶ್ವತವಾದ ಜನಪರ ಯೋಜನೆ ಜಾರಿಗೊಳಿಸುವಲ್ಲಿ ಜೆಡಿಎಸ್ ಬದ್ಧವಾಗಿದೆ. ತಾಲೂಕಿನಲ್ಲಿ ನಿಮ್ಮ ಮನೆ ಮಗನಾಗಿ ಸೇವೆ ಸಲ್ಲಿಸಲು ಜೆಡಿಎಸ್ ಬೆಂಬಲಿಸಿ ಎಂದು ಮಾಜಿ ಶಾಸಕ ಹಾಗೂ ಇಲ್ಲಿನ ಜೆಡಿಎಸ್ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಮನವಿ ಮಾಡಿದರು.

IMG 20230226 WA0002


ತಾಲೂಕು ಜೆಡಿಎಸ್ ವತಿಯಿಂದ ಪಟ್ಟಣದಲ್ಲಿ ಭಾನುವಾರ ಶಾಂತಿನಗರ.ಶ್ರೀನಿವಾಸ್ ಬಡವಣೆ.ಕುಮಾರ್ ಸ್ವಾಮಿ ಬಡವಣೆಯಲ್ಲಿ ಮನೆ ಮನೆ ಪ್ರಚಾರ ಕೈಗೊಂಡಿದ್ದೆವೆ.ಜೆಡಿಎಸ್ ಪಕ್ಷಕ್ಕೆ ಜನರಿಂದ ಉತ್ತಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಪಂಚ ರತ್ನ ಯೋಜನೆಗಳ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನಪರ ಸಮಸ್ಯೆ ನಿವಾರಣೆ ಹಾಗೂ ಬಡವ ಹಾಗೂ ರೈತಪರ ಯೋಜನೆ ಅನುಷ್ಠಾನಕ್ಕೆ ತಾಲೂಕು ಹಾಗೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವಂತೆ ಮತದಾರ ಹಾಗೂ ಜನಸಾಮಾನ್ಯರಲ್ಲಿ ಮನವಿ ಮಾಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಉತ್ತಮ ಆಡಳಿತಗಾರರಾಗಿದ್ದು ಬಡವ ಹಾಗೂ ರೈತರ ಬಗ್ಗೆ ಚಿಂತನೆ ಉಳ್ಳವರಾಗಿದ್ದಾರೆ. ಸಾಲ ಮನ್ನಾ, ಶಿಕ್ಷಣ, ಆರೋಗ್ಯ, ಮಹಿಳೆಯರಿಗೆ ಸ್ಥಾನಮಾನ ಹಾಗೂ ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳ ಜಾರಿಗೊಳಿಸಲಿದ್ದು.ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಮುಖ ಮಾಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಸಿಎಂ ಆಗುವುದು ಶತಸಿದ್ಧ ರಾಜ್ಯದ ಪ್ರಗತಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು.ತಾಲೂಕಿನಲ್ಲಿ ಜೆಡಿಎಸ್ ಸದೃಢವಾಗಿದ್ದು ಇತರೆ ಪಕ್ಷದ ತಂತ್ರಗಾರಿಕೆಯ ಮಣಿಯದೇ ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಸಹಕರಿಸಬೇಕು.ನಿಮ್ಮ ಜನಪರವಾದ ಸಮಸ್ಯೆಗಳಿಗೆ ನಿಮ್ಮ ಮನೆಯ ಮಗನಾಗಿ ಸದಾ ಸ್ಪಂದಿಸಿ ಕೆಲಸ ಮಾಡುತ್ತೇನೆ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲಿಸಿ ಎಂದು ಹೇಳಿದರು.
ತಾಲೂಕು ಹಾಗೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವಂತೆ ಕಾರ್ಯಕರ್ತರು ಜೈಕಾರ ಮೊಳಗಿಸಿದ್ದು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಲರಾಮ ರೆಡ್ಡಿ,ಎಸ್.ಎ. ಈರಣ್ಣ ನಗರ ಘಟಕದ ಅಧ್ಯಕ್ಷ ಗಡ್ಡಂ ತಿಮ್ಮರಾಜು, ಮಹಿಳಾ ಘಟಕದ ಅಂಬಿಕಾ. ಮಹಿಳ ಮುಂಖಡರಾದ ರಂಗಮ್ಮ ಶಿವಕುಮಾರ್. ಇತರರು ಮಾತನಾಡಿದರು. ಮುಖಂಡರಾದ ಗೋವಿಂದ ಬಾಬು, ಕೆ.ಎಸ್.ರಾಮಕೃಷ್ಣ ರೆಡ್ಡಿ, ಕೆ.ಟಿ. ನಾಗರಾಜು, ಅಕ್ಕಲಪ್ಪ ನಾಯ್ಡು, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಗುಟ್ಟಹಳ್ಳಿ ಮಣಿ, ಶಾಂತಿನಗರದ ಲಕ್ಷ್ಮೀನಾರಾಯಣಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯೂನಿಸ್, ಮಾಜಿ ಪುರಸಭೆ ಸದಸ್ಯರಾದ ಮನು ಮಹೇಶ್, ಜಿ.ಎ. ವೆಂಕಟೇಶ್,ನಾಗೇಂದ್ರ,ವಸಂತ್ ಕುಮಾರ್, ಗೋಪಾಲ್,ಯುವ ಮುಖಂಡರಾದ ಕಾವಲಗೆರೆ ರಾಮಾಂಜಿನಪ್ಪ,ಐಟಿ ಘಟಕದ ನಗರದ ಅಧ್ಯಕ್ಷ ಬ್ರಹ್ಮ, ಶಾಂತಿನಗರದ ಹನುಮಂತ್, ಶಾಂತಿ ನಗರ್ ಸುಬ್ಬರಾಯಪ್ಪ ಹನುಮಂತರಾಯಪ್ಪ, ಆಫ್ ಬಂಡೆ ಗೋಪಾಲ್,ಸೀನಪ್ಪ, ಮುದ್ದಣ್ಣ, ಅನಿಲ್, ನಾರಾಯಣಪ್ಪ, ಮನೋಹರ್, ಹೋಟೆಲ್ ಮಂಜು, ಕೆ. ಟಿ. ಹಳ್ಳಿ ಸೋಡಾ ಮಂಜುನಾಥ್, ಸೇರಿದಂತೆ ಇತರೆ ಅಪಾರ ಸಂಖ್ಯೆಯ ತಾಲೂಕು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

Document

Leave a Reply

Your email address will not be published. Required fields are marked *