Document

ನಾಳೆ ಬೀದರ್‌ಗೆ ರಾಹುಲ್ ಗಾಂಧಿ ಎಂಟ್ರಿ.

Janataa24: NEWS DESK

ಬೀದರ್: ಚುನಾವಣಾ ಚಾಣಕ್ಯ ಅಮಿತ್ ಶಾ ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ ಬಳಿಕ ಈಗ ರಾಹುಲ್ ಗಾಂಧಿ ಬೀದರ್ ಜಿಲ್ಲಾ ಪ್ರವಾಸದ ಮೂಲಕ ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ್ದಾರೆ.

RAHUL GANDHI 3



ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೀದರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಭಾಲ್ಕಿಯಲ್ಲಿ ಈಶ್ವರ್ ಖಂಡ್ರೆ ಪರ ಹಾಗೂ ಹುಮ್ನಾಬಾದ್‌ನಲ್ಲಿ ರಾಜಶೇಖರ ಪಾಟೀಲ್ ಪರ ಕ್ಯಾಂಪೇನ್ ಮಾಡಲಿದ್ದಾರೆ. ಸೋಮವಾರ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ 11 ಗಂಟೆಗೆ ಬೀದರ್ ಏರಬೇಸ್‌ಗೆ ಆಗಮಿಸಲಿರುವ ರಾಹುಲ್ 11:30ಕ್ಕೆ ಬೀದರ್ ಏರಬೇಸ್‌ನಿಂದ ಹೆಲಿಕಾಪ್ಟರ್ ಮೂಲಕ ಭಾಲ್ಕಿಗೆ ಆಗಮಿಸಲಿದ್ದಾರೆ.

congress

11:40ಕ್ಕೆ ನಾಮಪತ್ರ ಸಲ್ಲಿಕೆಯ ಬಹಿರಂಗ ಸಮಾವೇಶ ಭಾಗಿಯಾಗಿ ಬಳಿಕ 1 ಗಂಟೆಗೆ ಬೃಹತ್ ಬಹಿರಂಗ ರ‍್ಯಾಲಿಯಲ್ಲಿ ಹಾಗೂ ಬಳಿಕ 1:30ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಭಾಗಿಯಾಗಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್‌ಗೆ ಪ್ರಯಾಣ ಮಾಡಲಿರುವ ರಾಹುಲ್ 1:30 ರಿಂದ 2:30 ರವರೆಗೆ ಹುಮ್ನಾಬಾದ್‌ನ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ

ಬಳಿಕ ರಾಜಶೇಖರ ಪಾಟೀಲ್ ನಾಮಪತ್ರ ಸಲ್ಲಿಸುವ ಬೃಹತ್ ಬಹಿರಂಗ ಯಾತ್ರೆಯಲ್ಲಿ ಭಾಗಿಯಾಗಿ ಬಳಿಕ ಹುಮ್ನಾಬಾದ್‌ನಿಂದ ಹೆಲಿಕಾಪ್ಟರ್ ಮೂಲಕ ಹೈದರಾಬಾದ್ ಹೋಗಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ರಾಹುಲ್ ಗಾಂಧಿ ಪ್ರಯಾಣ ಬೆಳೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ‌ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಹುಲ್‌ಗೆ ಸಾಥ್ ನೀಡಲಿದ್ದಾರೆ.

Document

Leave a Reply

Your email address will not be published. Required fields are marked *