ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ 75 ವರ್ಷ ವಯಸ್ಸಿನ ವೃದ್ಧೆಯಿಂದ ನಾಲ್ಕು ಸಾವಿರ ಲಿಂಗಗಳಿಂದ ವಿಶೇಷವಾಗಿ ಲಿಂಗ,ಬಸವ,ತ್ರಿಶೂಲ ನಿರ್ಮಾಣ, ಲಿಂಗಗಳಿಂದ ಮಾಡಲ್ಪಟ್ಟ ಆಕೃತಿಗಳು ನೋಡುಗರ ಮನಸೆಳೆಯುತ್ತಿದೆ.
ಪಾವಗಡ ಪಟ್ಟಣದ ನಿವಾಸಿ 75 ವರ್ಷದ ಜಿ.ಎ. ಗಂಗಮ್ಮ ಗೌಡೇಟಿ ಎಂಬುವರಿಂದ ಈಗಾಗಲೇ ಸುಮಾರು 40 ವರ್ಷಗಳಿಂದ ಸತತವಾಗಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಲಿಂಗಗಳಿಂದ ಹತ್ತು ಹಲವು ತರಹದ ಆಕೃತಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಅದರೆ ಇಲ್ಲಿಯವರೆಗೆ ಇದರ ಬಗ್ಗೆ ಯಾವುದೇ ತರಹದ ಪ್ರಚಾರಕ್ಕಾಗಲಿ ಒಬ್ಬರಿಗೆ ಮೆಚ್ಚಿಸುವುದಕ್ಕಾಗಲಿ ನಾನು ಈ ಲಿಂಗಗಳಿಂದ ವಿಶೇಷ ಆಕೃತಿಗಳು ನಿರ್ಮಾಣ ಮಾಡುತ್ತಿಲ್ಲ.
ನನ್ನ ಒಂದು ಆಸೆ ಈಗಾಗಲೇ ಸುಮಾರು 40 ವರ್ಷಗಳಿಂದ ಇಂತಹ ಲಿಂಗಗಳಿಂದ ಭಾರತೀಯ ದ್ವಜ ಹೀಗೆ ಹತ್ತು ಹಲವು ತರದ ಲಿಂಗಗಳಿಂದ ಆಕೃತಿಗಳನ್ನು ನಿರ್ಮಾಣ ಮಾಡಿಕೊಂಡು ಬರುತ್ತಿದ್ದೇನೆ ಪ್ರತಿ ವರ್ಷದಂತೆ ಸಾವಿರಾರು ಜನ ನಮ್ಮ ಮನೆಗೆ ಬಂದು ನಾನು ಮಾಡಿದಂತಹ ಲಿಂಗಗಳ ಆಕೃತಿಗಳನ್ನು ನೋಡಿ ಉತ್ತಮವಾಗಿದೆ ಎಂಬುದಾಗಿ ನನಗೆ ಹೇಳಿ ಹೋಗುತ್ತಾರಲ್ಲವೇ ಅದೇ ನನಗೆ ನೆಮ್ಮದಿ.
ಇದರ ಮಧ್ಯದಲ್ಲಿ ಮಹಿಳಾ ಮಂಡಳಿ ನಿರ್ಮಾಣ ಮಾಡಿಕೊಂಡು ಅವರಿಂದ ನನಗೆ ಉತ್ತಮ ಸಲಹೆ ಸೂಚನೆಗಳು ನೀಡುತ್ತಾರೆ ಯಾರೊಬ್ಬರ ಸಹಾಯವಿಲ್ಲದೆ ಸ್ವತಹ ಈ ಜೋಡಿ ಮಣ್ಣಿನಲ್ಲಿ ಲಿಂಗ ಗಳನ್ನು ನಿರ್ಮಾಣ ಮಾಡಿಕೊಂಡು ಬರುತ್ತಿದ್ದೇನೆ ಎಂಬುದಾಗಿ ಜಿ.ಎ.ಗಂಗಮ್ಮ ಗೌಡೇಟಿ ಮಾದ್ಯಮಕ್ಕೆ ತಿಳಿಸಿದ್ದಾರೆ.