Janataa24 NEWS DESK

ನನ್ನ ಪಕ್ಷದ ಎದುರಾಳಿಗೆ ಕಣ್ಣೀರಿನ ಕಾಣಿಕೆನೀಡಿ ಮಧುಗಿರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರು.
ಮಧುಗಿರಿ ತಾಲ್ಲೂಕಿನ ಡಿ.ಕೈಮರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಉದ್ಘಾಟಿಸಿದರು.
ಮಧುಗಿರಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ನಂಬಿಕೆ ದ್ರೋಹಮಾಡಿ ನನ್ನ ಕಣ್ಣಲ್ಲಿ ನೀರು ಹರಿಸಿದವರಿಗೆ ಈ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಮತದಾರರು ಕಣ್ಣೀರ ಕಾಣಿಕೆ ನೀಡಬೇಕೆಂದು ಹೆಚ್.ಡಿ.ದೇವೇಗೌಡರು ತಿಳಿಸಿದರು.
ತಾಲೂಕಿನ ಡಿ.ಕೈಮರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಗೌಡರು ನಾನು ಸಿಎಂ ಆದಾಗ 1995 ರಲ್ಲಿ ಜಿಲ್ಲೆಯಿಂದ 9 ಸ್ಥಾನ ಕೊಟ್ಟ ಜಿಲ್ಲೆ ಇದು. ಈಗ ನಾಡಿನ ಅಭಿವೃದ್ಧಿ ಬಯಸಿ ಪಂಚರತ್ನ ಯೋಜನೆ ಜಾರಿಗೆ ಮುಂದಾಗಿರುವ ಕುಮಾರಸ್ವಾಮಿ ಸಿಎಂ ಆಗಲಿದ್ದು ಜಿಲ್ಲೆಯಿಂದ ಕನಿಷ್ಟ 10 ಸ್ಥಾನಗಳನ್ನು ಜನತೆ ನೀಡಬೇಕು.
ರಾಜ್ಯದ ಕಾಂಗ್ರೆಸ್ ಬಿಜೆಪಿಯವರು ಜೆಡಿಎಸ್ ಕೇವಲ ,20 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಎನ್ನುತ್ತಿದ್ದಾರೆ. ಆದರೆ ಅದಕ್ಕೆ ಉತ್ತರ ಮಧುಗಿರಿಯಿಂದಲೇ ಕೊಡುವುದಾಗಿ ಗುಡುಗಿದರು.

ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಕೇಳಿದ ರಾಜಣ್ಣ ನಿನಗೆ ಯಾವ ತತ್ವವಿದೆ ಎಂದು ಪ್ರಶ್ನಿಸಿದ ಇಬ್ರಾಹಿಂ ನಾಯಕ ಸಮಾಜಕ್ಕೆ ಮೀಸಲಾತಿ ಕಲ್ಪಿಸಿದ ದೇವೇಗೌಡರನ್ನು ಇಂದು ನೀನೆ ಸ್ವಾಗತಿಸಬೇಕಿತ್ತು. ಮುಸ್ಲಿಂ, ಯಾದವ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಲು ಗೌಡರು ಕಾರಣರಾಗಿದ್ದಾರೆ. ಅಂತಹ ಗೌಡರಿಗೆ ಲೋಕಸಭೆಯ ಚುನಾವಣೆಯಲ್ಲಿ ವಿಷವಿಕ್ಕಿದಿರಿ. ಇದಕ್ಕೆ ಉತ್ತರ ಮಧುಗಿರಿ ಜನತೆ ಈ ಬಾರಿ ಕೊಡ್ತಾರೆ. ಶಾಸಕ ವೀರಭದ್ರಯ್ಯ ನವರಿಗೆ ಮಂತ್ರಿಯಾಗುವ ಯೋಗವಿದೆ ಎಂದು ಜಿಲ್ಲೆಯಲ್ಲಿ ಶೇ.90 ರಷ್ಟು ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕಳೆದ ಐದು ವರ್ಷದಲ್ಲಿ ಕ್ಷೇತ್ರಕ್ಕೆ 1143 ಕೋಟಿ ರೂ ಗಳ ಅನುಧಾನ ತಂದಿದ್ದು ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ ಮುಂದೆಯು ನಿಮ್ಮ ಸಹಕಾರದಿಂದ ನನ್ನನ್ನು ಶಾಸಕರನ್ನಾಗಿ ಮಾಡಿದರೆ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿ, ಜೆ.ಡಿ.ಎಸ್. ಪಕ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು ಸೇರ್ಪಡೆಯಾಗುತ್ತಿರುವುದು ಒಳ್ಳೆಯ ಶುಭ ಸೂಚನೆಯಾಗಿದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷೆ ರಾಧಾನಾರಾಯಣ್, ಎ.ನಾರಾಯಣ, ಧಾರ್ಮಿಕ ಮುಖಂಡ ಯತೀಶ್ ಬಾಬು, ದಲಿತ ಮುಖಂಡರಾದ ರಂಗಧಾಮಯ್ಯ, ಸಂಜೀವಮೂರ್ತಿ, ರಾಘವೇಂದ್ರ ಅವರುಗಳು ಕಾಂಗ್ರೆಸ್ ಹಾಗೂ ಇತರ ಪಕ್ಷ ತ್ಯಜಿಸಿ ಜೆಡಿಎಸ್ ಪಕ್ಷಕ್ಕೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಯಾದರು.
ಮಾಜಿ ಶಾಸಕ ಅಂದಾನಪ್ಪ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಜೆಡಿಎಸ್ ಆರ್.ಸಿ.ಜಿಲ್ಲಾಧ್ಯಕ್ಷ ಅಂಜಿನಪ್ಪ, ತಾಲೂಕು ಅಧ್ಯಕ್ಷ ಬಸವರಾಜು, ಯುವ ಮುಖಂಡ ಕಾರ್ತಿಕ್, ಎಸ್.ಡಿ.ಕೃಷ್ಣಪ್ಪ, ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಕೆ.ನಾರಾಯಣ, ಎಂ.ಎಲ್. ಗಂಗರಾಜು, ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ ಬಾಬು, ಆಸಿಯ ಶಾಜು ಮುಖಂಡರುಗಳಾದ ಪಾವಗಡ ಶ್ರೀರಾಮ್, ವಿಶ್ವರಾಧ್ಯ, ಎಂ.ವಿ.ರುದ್ರಾರಾದ್ಯ, ಬಿಜವರ ಶ್ರೀನಿವಾಸ್, ಸುಮುಖ್ ಕೊಂಡವಾಡಿ, ಶ್ರೀನಿವಾಸ್, ಮೋಹನ್, ಗುಂಡಗಲ್ಲು ಶಿವಣ್ಣ, ವೆಂಕಟಾಪುರ ಗೋವಿಂದರಾಜು, ಕಂಬತ್ತನಹಳ್ಳಿ ರಘು, ಎಸ್.ಡಿ.ಕೆ.ವೆಂಕಟೇಶ್, ಚೌಡಪ್ಪ, ಅಕ್ರಮ್ ಪಾಷ, .ಆರ್.ಲಕ್ಷ್ಮಮ್ಮ, ಶಾಫೀಕ್, ಸಲ್ಮಾನ್ ಬೈಗ್ ಸಾವಿರಾರು ಸಂಖ್ಯೆ ಪಕ್ಷದ ಕಾರ್ಯಕರ್ತರು ಇದ್ದರು…
ವರದಿ
ಮಧುಗಿರಿ; ಅಬೀದ್