Document

ದಲಿತ ಸಿಎಂ ಕೂಗಿಗೆ ಧ್ವನಿಗೂಡಿಸಿದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರು.

Janataa24 NEWS DESK

ಕೊರಟಗೆರೆ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ 224 ಕ್ಷೇತ್ರಗಳ ಪೈಕಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿದ್ದು ದಲಿತ ಸಿಎಂ ಕೂಗಿಗೆ ಧ್ವನಿಗೂಡಿಸಿದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರು.

IMG 20230513 WA0040


ಕೊರಟಗೆರೆ ಪಟ್ಟಣ ಸೇರಿದಂತೆ ಕೊರಟಗೆರೆ ಗ್ರಾಮಾಂತರ ಚನ್ನರಾಯನದುರ್ಗ ಕೋರ ಹೋಬಳಿ ಹೋಳವನಹಳ್ಳಿ ಹೋಬಳಿ ಮತದಾರ ಪ್ರಭು, ಡಾ. ಜಿ ಪರಮೇಶ್ವರ್ ಅವರ ಕೈಹಿಡಿದಿರುವುದು ಅವರ ಗೆಲುವಿಗೆ ಪ್ರಮುಖ ಕಾರಣವಾಗಿದೆ.
ಡಾ ಜಿ ಪರಮೇಶ್ವರ್ ಅವರು ಹಿರಿಯ ರಾಜಕಾರಣಿಯಾಗಿದ್ದು 2013ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸೋಲನ್ನು ಅನುಭವಿಸಿದ್ದರು. ಕ್ಷೇತ್ರದಲ್ಲಿ ಪರಮೇಶ್ವರ್ ರವರಿಗೆ 2013ರ ಚುನಾವಣೆ ನೆನಪಿಸುವ ಚುನಾವಣೆ 2023ರ ಚುನಾವಣೆಯಾಗಿದೆ ಎನ್ನುವಂತಹ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿದ್ದವು ಆದರೆ ಈ ಎಲ್ಲಾ ಅಂಶಗಳನ್ನು ಸೆಡ್ಡು ಹೊಡೆದು ಡಾಕ್ಟರ್ ಜಿ ಪರಮೇಶ್ವರ್ ಅವರು ಗೆಲುವನ್ನು ಸಾಧಿಸಿರುವುದು ಕ್ಷೇತ್ರದಲ್ಲಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿ ಎನ್ನುವಂತಹ ಮಾತುಗಳು ಮತದಾರ ಪ್ರಭುವಿನ ಅಭಿಪ್ರಾಯವಾಗಿದೆ.

IMG 20230513 WA0034



ಈ ಬಾರಿ ಡಾ. ಜಿ ಪರಮೇಶ್ವರ್ ಅವರ ದಲಿತ ಸಿಎಂ ಕೂಗಿಗೆ ಜಿಲ್ಲೆಯ ಹಲವಾರು ಪ್ರಮುಖರು ಸೇರಿದಂತೆ ಮಾಜಿ ಶಾಸಕ ಗಂಗಹನುಮಯ್ಯ ಹಲವಾರು ನಾಯಕರು ಡಾ ಜಿ ಪರಮೇಶ್ವರ್ ರವರ ಜೊತೆಗೆ ಕೈಜೋಡಿಸಿ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

IMG 20230513 WA0041

ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಪರಮೇಶ್ವರ್ ಅವರ ಗೆಲುವಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ನ ಧ್ವಜ ಹಿಡಿದು ಸಂಭ್ರಮಿಸಿ ಪಟ್ಟಣದ ಮುಖ್ಯ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮುಖಂಡರುಗಳಾದ ವಾಲೆ ಚಂದ್ರಯ್ಯ ಮಾರುತಿ ಗಂಗಹನುಮಯ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಎ ಡಿ ಬಲರಾಮಯ್ಯ ಗುತ್ತಿಗೆದಾರರ ನರಸಿಂಹರಾಜು ಗಾರ್ಮೆಂಟ್ಸ್ ಹನುಮಂತರಾಜು ಕಿಸಾನ್ ವೆಂಕಟೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣಮೂರ್ತಿ ಕೂಡ್ಲಳ್ಳಿ ಅಶ್ವತ ನಾರಾಯಣ ಅರಕೆರೆ ಸೋಮಶೇಖರ್ ಬೀಡಿಪುರ ಸುರೇಶ್ ಟಿ ಹೆಚ್ ನಾಗರಾಜು ಪ್ರತಾಪ್ ರುದ್ರ ಹುಲಿ ಕುಂಟೆ ರುದ್ರಪ್ರಸಾದ್ ಪುರುಷೋತ್ತಮ್, ಲೋಕೇಶ್ ಓಬಳರಾಜು ಸೈಯದ್ ಸೈಫುಲ್ಲಾ ವಡ್ಡಗೆರೆ ವಸಂತರಾಜು ಹೊಳವನಹಳ್ಳಿ ಜಯರಾಮು ದೊಡ್ಡಯ್ಯ ದಾಸರಹಳ್ಳಿ ಶಿವರಾಂ ಸೇರಿದಂತೆ ಇತರರು ಸಂಭ್ರಮದ ಕ್ಷಣಗಳಲ್ಲಿ ಉಪಸ್ಥಿತರಿದ್ದರು.

IMG 20230513 WA0037


ಮಾಜಿ ಶಾಸಕ ಗಂಗ ಹನುಮಯ್ಯನವರು ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಪರಮೇಶ್ವರ ಅವರು ರಾಜ್ಯದ ಅತ್ಯಂತ ಸಜ್ಜನ ರಾಜಕಾರಣಿ ಹಾಗೂ ಅಭಿವೃದ್ಧಿಯಲ್ಲಿ ಸದಾ ಮಂದಿರವ ವ್ಯಕ್ತಿತ್ವ ಆದ್ದರಿಂದ ಅವರೊಂದಿಗೆ ನಾನು ಮಾತೃ ಪಕ್ಷದಲ್ಲಿ ದುಡಿಯಲು ಸಿದ್ದ ಪರಮೇಶ್ವರ್ ರವರನ್ನು ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಆಯ್ಕೆ ಮಾಡುವ ಗುರಿ ನಮ್ಮದಾಗಿದೆ ಎಂದು ತಿಳಿಸಿದ್ದು ಈ ಗೆಲುವಿಗೆ ಸಂತಸ ವ್ಯಕ್ತಪಡಿಸಿ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ .

IMG 20230513 WA0036

ವರದಿ

ಕೊರಟಗೆರೆ: ನವೀನ್ ಕುಮಾರ್

Document

Leave a Reply

Your email address will not be published. Required fields are marked *